• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅದೃಷ್ಟ ಅಂದ್ರೆ ಹೀಗಿರಬೇಕು; 100 ರೂ ಲಾಟರಿಯಿಂದ ಕೋಟ್ಯಧಿಪತಿಯಾದ ಗೃಹಿಣಿ

|
Google Oneindia Kannada News

ಅಮೃತಸರ, ಫೆಬ್ರವರಿ 26: ನೂರು ರೂಪಾಯಿ ಕೊಟ್ಟು ಖರೀದಿಸಿದ್ದ ಲಾಟರಿಯಿಂದ ಅದೃಷ್ಟ ಖುಲಾಯಿಸಿ ಅಮೃತಸರದಲ್ಲಿ ಗೃಹಿಣಿಯೊಬ್ಬರು ದಿಢೀರನೆ ಕೋಟ್ಯಧಿಪತಿಯಾಗಿದ್ದಾರೆ.

ನೂರು ರೂಪಾಯಿ ಬೆಲೆಯ ಒಂದು ಲಾಟರಿ ಟಿಕೆಟ್ ಗೆ ಒಂದು ಕೋಟಿ ರೂಪಾಯಿಯ ಮೊದಲ ಬಹುಮಾನ ಬಂದಿದೆ. ಅಮೃತಸರದ ಗೃಹಿಣಿ ರೇಣು ಚೌಹಾಣ್‌ಗೆ ಈ ಅದೃಷ್ಟ ಒಲಿದುಬಂದಿದೆ. ಗುರುವಾರ ಈ ಲಾಟರಿ ಟಿಕೆಟ್ ಅನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದ ರೇಣು ಅವರು ರಾಜ್ಯ ಲಾಟರಿ ಇಲಾಖೆಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಕೇರಳದ ಒಂದು ವರ್ಷದ ಮಗು ಗೆದ್ದಿತು 7 ಕೋಟಿ ರೂ. ಲಾಟರಿಕೇರಳದ ಒಂದು ವರ್ಷದ ಮಗು ಗೆದ್ದಿತು 7 ಕೋಟಿ ರೂ. ಲಾಟರಿ

ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರೇಣು ಅವರು, ಈ ಹಣ ನಮ್ಮ ಮಧ್ಯಮ ವರ್ಗದ ಕುಟುಂಬಕ್ಕೆ ಆಶೀರ್ವಾದವೇ ಆಗಿದೆ ಎಂದು ಹೇಳಿದ್ದಾರೆ. "ಅಮೃತಸರದಲ್ಲಿ ನನ್ನ ಪತಿ ಬಟ್ಟೆ ಅಂಗಡಿ ನಡೆಸುತ್ತಾರೆ. ಕೋಟಿ ರೂಪಾಯಿಯ ಲಾಟರಿ ಹೊಡೆದಿರುವುದು ನಮ್ಮ ಕುಟುಂಬಕ್ಕೆ ದೊಡ್ಡ ಆರ್ಥಿಕ ಶಕ್ತಿ ನೀಡಿದೆ" ಎಂದಿದ್ದಾರೆ.

ಫೆಬ್ರವರಿ 11ರಂದು ಲಾಟರಿ ಫಲಿತಾಂಶ ಘೋಷಿಸಲಾಗಿದೆ ಎಂದು ಪಂಜಾಬ್ ರಾಜ್ಯ ಲಾಟರಿ ಇಲಾಖೆ ಅಧೀಕೃತ ವಕ್ತಾರರು ತಿಳಿಸಿದ್ದಾರೆ. ಶೀಘ್ರವೇ ರೇಣು ಅವರ ಖಾತೆಗೆ ಬಹುಮಾನದ ಹಣ ಹಾಕಲಾಗುವುದು ಎಂದು ಹೇಳಿದ್ದಾರೆ.

English summary
A housewife from Amritsar punjab has won the first prize in a lottery worth ₹1 crore from a 100 rs ticket
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X