ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತಸರ ದಾಳಿ: ಶಂಕಿತರ ಅಸ್ಪಷ್ಟ ಚಿತ್ರ ಕ್ಯಾಮರಾದಲ್ಲಿ ಸೆರೆ

|
Google Oneindia Kannada News

ಅಮೃತಸರ, ನವೆಂಬರ್ 19: ಪಂಜಾಬಿನ ಅಮೃತಸರದ ರಾಜಸಾನ್ಸಿಯ ನಿರಹಂಕಾರಿ ಭಯನ್ ಪ್ರಾರ್ಥನಾ ಮಂದಿರದ ಮೇಲೆ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಅಸ್ಪಷ್ಟ ಚಿತ್ರವೊಂದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಕೆಲವು ಮಾಹಿತಿಯ ಪ್ರಕಾರ ಈ ದಾಳಿಯಲ್ಲಿ ಸ್ಥಳೀಯರದೇ ಕೈವಾಡವಿರಬಹುದು ಎನ್ನಲಾಗುತ್ತಿದೆ.

ಪಂಜಾಬ್ : ಗ್ರೆನೇಡ್ ದಾಳಿಕೋರರರ ಸುಳಿವು ನೀಡಿದರೆ 50 ಲಕ್ಷ ರು!ಪಂಜಾಬ್ : ಗ್ರೆನೇಡ್ ದಾಳಿಕೋರರರ ಸುಳಿವು ನೀಡಿದರೆ 50 ಲಕ್ಷ ರು!

ಇಬ್ಬರು ಬೈಕ್ ನಲ್ಲಿ ಬರುತ್ತಿರುವ ಈ ಚಿತ್ರ ಅಸ್ಪಷ್ಟವಾಗಿದ್ದು, ಬೈಕ್ ಸಂಖ್ಯೆಯನ್ನಾಗಲೀ, ಶಂಕಿತರ ಮುಖವನ್ನಾಗಲೀ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುತ್ತಿಲ್ಲ.

Amritsar attack: 2 bike borne suspects caught on camera.

ಸ್ಥಳೀಯ ಯುವಕರೇ ಈ ಕೃತ್ಯ ಎಸಗಿರಬಹುದು ಎನ್ನಲಾಗಿದ್ದು, ಭಾನುವಾರ ಆಶ್ರಮದ ಆವರಣದಲ್ಲಿ ಕಾರ್ಯಕ್ರಮವಿದೆ ಎಂದು ಬಲ್ಲವರೇ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಗೂ ಮುನ್ನ ಆಶ್ರಮದ ಆವರಣದಲ್ಲಿ ಆರೋಪಿಗಳು ಹಲವು ಬಾರಿ ಓಡಾಡಿ, ಸಮೀಕ್ಷೆ ನಡೆಸಿದ್ದಿರಬಹುದು ಎನ್ನಲಾಗಿದ್ದು, ಆಶ್ರಮದ ಆವರಣದ ಸಿಸಿಟಿವಿ ಫೂಟೇಜ್ ಗಳ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ.

ಖಾಲಿಸ್ಥಾನಿ ಚಳವಳಿಯ ಬೆಂಬಲಿಗರಿಂದಲೇ ಈ ಕೃತ್ಯ ನಡೆದಿರಬಹುದು ಎಂದೂ ಶಂಕಿಸಲಾಗಿದೆ.

ಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವುಅಮೃತಸರದ ನಿರಂಕಾರಿ ಭವನದ ಮೇಲೆ ಬಾಂಬ್ ದಾಳಿ, 3 ಸಾವು

ಭಾನುವಾರ ನಡೆದ ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವುಕಾಬೂಲ್ ನ ಹೈಸ್ಕೂಲ್ ಎದುರು ಆತ್ಮಹತ್ಯಾ ದಾಳಿ, ಎಂಟು ಮಂದಿ ಸಾವು

ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಗ್ರೆನೇಡ್ ದಾಳಿಕೋರರ ಸುಳಿವು ನೀಡಿದವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

English summary
Terror attack in Punjab's Amritsar: 2 bike borne suspects caught on camera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X