ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಲ್ಲಿ ಟ್ಯೂಷನ್:ಪೊಲೀಸರಿಗೆ ಮಾಹಿತಿ ಕೊಟ್ಟ 5 ವರ್ಷದ ಬಾಲಕ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕೊರೊನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.

ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೂ ಲಾಕ್‌ಡೌನ್ ಸಂದರ್ಭದಲ್ಲಿ ತರಗತಿ ನಡೆಸುತ್ತಿದ್ದ ಶಿಕ್ಷಕಿ ವಿರುದ್ಧ 5 ವರ್ಷದ ಬಾಲಕ ದೂರು ನೀಡಿದ್ದಾನೆ. ಪಂಜಾಬ್‌ನಲ್ಲಿ ಈ ಘಟನೆ ನಡೆದಿದೆ.

ಕರ್ಫ್ಯೂ ನಿಯಮವನ್ನು ಗಾಳಿಗೆ ತೂರಿ ಮನೆಯಲ್ಲಿಯೇ ತರಗತಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.ಲಾಕ್‌ಡೌನ್‌ ಇದೆ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಹೇಳಿದರೆ ನೀವು ಟ್ಯೂಷನ್ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.ಶಾಲೆಗಳು ಬಂದ್ ಆಗಿವೆ ನೀವು ಯಾಕಾಗಿ ಮಕ್ಕಳನ್ನು ಟ್ಯೂಷನ್‌ಗೆ ಕಳುಹಿಸುತ್ತಿದ್ದೀರಾ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ.

5 Year Old Boy Gives Details Of Tutor Taking Classes

ಪೊಲೀಸರು ಟ್ಯಟೋರಿಯಲ್ ವಿಳಾಸ ಕೇಳುತ್ತಿದ್ದಂತೆ, ಬಾಲಕ ಟೀಚರ್ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾನೆ. ಆತನೇ ಖುದ್ದಾಗಿ ಟೀಚರ್ ಮನೆಯವರೆಗೆ ಕರೆದೊಯ್ದಿದ್ದಾನೆ.

ಟೀಚರ್‌ ಅವರ ಮನೆ ಬಾಗಿಲಿಗೆ ಹೋಗುತ್ತಿದ್ದಂತೆ ಮೂರು ಮಂದಿ ಮಕ್ಕಳು ಅವರ ಮನೆಯಿಂದ ಹೊರಬಂದಿದ್ದಾರೆ. ಆದರೆ ಟೀಚರ್ ನಾನು ಮಕ್ಕಳಿಗೆ ಯಾವುದೇ ತರಗತಿ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿ ಬಳಿಕ ಕ್ಷಮೆ ಕೇಳಿದ್ದಾರೆ.

English summary
A five-year-old boy spilled the beans when a Punjab police official asked his uncle for the address of his tutor's house from where the man was bringing his nephew and niece before being caught for violating COVID-19 curfew restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X