ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೂಸ್ ಟೆಟ್ರಾ ಪ್ಯಾಕ್, ಬಿಸ್ಕೆಟ್ ಪ್ಯಾಕೆಟ್ ನಲ್ಲಿ 20 ಕೋಟಿಯ ಹೆರಾಯಿನ್ ಸಾಗಾಟ

|
Google Oneindia Kannada News

ಪಂಜಾಬ್ ಪೊಲೀಸರು ಬುಧವಾರ ಭರ್ಜರಿ ಬೇಟೆ ಆಡಿದ್ದಾರೆ. ಮಿಜೋರಾಮ್ ನ ಮಹಿಳೆ ಹಾಗೂ ಆಕೆಯ ಸಹಚರ- ಚಾಲಕನಿಂದ 4 ಕೇಜಿ ಹೆರಾಯಿನ್ ಖನ್ನಾ ಜಿಲ್ಲೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ 20 ಕೋಟಿ ರುಪಾಯಿ ಎನ್ನಲಾಗಿದೆ.

ಖನ್ನಾ ಪೊಲೀಸರು ಅದೇ ನಗರದ, ಚಂಡೀಗಢದಿಂದ 50 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ವಾಹನ ತಪಾಸಣೆ ಮಾಡುವಾಗ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದೆವು ಎಂದು ಹಿರಿಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಧ್ರುವ್ ದಹಿಯಾ ತಿಳಿಸಿದ್ದಾರೆ.

ಸೇಬು ಪೆಟ್ಟಿಗೆಯಲ್ಲಿ ಸಾಗಿಸುತ್ತಿದ್ದ 250 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆಸೇಬು ಪೆಟ್ಟಿಗೆಯಲ್ಲಿ ಸಾಗಿಸುತ್ತಿದ್ದ 250 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

ಮಹಿಳೆಯು ಮಿಜೋರಾಂನ ಶಿವಾಂಗಿ ಎಂದು ಗುರುತಿಸಲಾಗಿದೆ. ಇನ್ನು ಕಾರು ಚಾಲಕ ಆನಂದ್ ಕುಮಾರ್ ಪಂಜಾಬ್ ನ ಜಲಂಧರ್ ನವನು ಎನ್ನಲಾಗಿದೆ. ಹೆರಾಯಿನ್ ಅನ್ನು ಜ್ಯೂಸ್ ನ ಟೆಟ್ರಾ ಪ್ಯಾಕ್ ಗಳಲ್ಲಿ ಹಾಗೂ ಬಿಸ್ಕೆಟ್ ಪಾಕೆಟ್ ಗಳಲ್ಲಿ ಅಡಗಿಸಿಡಲಾಗಿತ್ತು. ಅವುಗಳನ್ನು ಗುರುತಿಸದಂತೆ ಮತ್ತೆ ಅದೇ ರೀತಿ ಪ್ಯಾಕ್ ಮಾಡಲಾಗಿತ್ತು.

20 crore worth of 4 kg heroin seized by Punjab police

ಟೊಯೋಟಾ ಇಟಿಯೋಸ್ ಕಾರಿನಲ್ಲಿ ಬಂದ ಇವರಿಬ್ಬರನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಅಲ್ಲಿಂದ ಪರಾರಿಯಾಗಲು ಪ್ರಯತ್ನ ಮಾಡಿದ್ದಾರೆ. ಆದರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ದೆಹಲಿಯಲ್ಲಿ ನೈಜೀರಿಯಾ ಪ್ರಜೆಯೊಬ್ಬ ಶಿವಾಂಗಿಗೆ ಹೆರಾಯಿನ್ ನೀಡಿ, ಪಂಜಾಬ್ ನಲ್ಲಿ ಇಬ್ಬರು ವ್ಯಕ್ತಿಗಳಿಗೆ ತಲುಪಿಸುವಂತೆ ತಿಳಿಸಿದ್ದ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

English summary
Punjab Police recovered 4-kg of heroin valued at Rs. 20 crore in the international market from a woman from Mizoram and her driver accomplice in Khanna district on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X