ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

150 ಅಡಿ ಬೋರ್ವೆಲ್, 2 ವರ್ಷದ ಪುಟಾಣಿ, 109 ಗಂಟೆ ಯಶಸ್ವಿ ಕಾರ್ಯಾಚರಣೆ

|
Google Oneindia Kannada News

ಅಮೃತಸರ, ಜೂನ್ 11: ಬೋರ್‌ವೆಲ್‌ನೊಳಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಸತತ 109 ಗಂಟೆಗಳ ಕಾರ್ಯಾಚರಣೆ ಬಳಿಕ ಪಂಜಾಬಿನಲ್ಲಿ ಯಶಸ್ವಿಯಾಗಿ ರಕ್ಷಿಸಲಾಗಿದೆ.

ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಫತೇಹ್ವೀರ್‌ ಸಿಂಗ್‌ ಎನ್ನುವ ಎರಡು ವರ್ಷ ಮಗು 150 ಅಡಿ ಬೋರ್‌ವೆಲ್‌ ಒಳಗೆ ಬಿದ್ದಿತ್ತು. ಕಳೆದ 109 ಗಂಟೆಗಳಿಂದ ವಿವಿದ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದವು. ಕಾರ್ಯಾಚರಣೆ ವಿಳಂಬವಾಗುತ್ತಿದೆ ಎನ್ನುವ ಸಾರ್ವಜನಿಕರ ಪ್ರತಿಭಟನೆಯ ನಡುವೆಯೇ ಮಗುವಿನ ರಕ್ಷಣೆಯ ಸಿಹಿಸುದ್ದಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಮಗು ಪವಾಡಸದೃಶ ಪಾರು ಬೋರ್ವೆಲ್ ನಲ್ಲಿ ಬಿದ್ದಿದ್ದ 6 ವರ್ಷದ ಮಗು ಪವಾಡಸದೃಶ ಪಾರು

ಅಲ್ಟ್ರಾ ಸೊಫೆಸ್ಟಿಕೇಟೆಡ್‌ ಹಾಗೂ ಹೈ ಡೆನ್ಸಿಟಿ ಡ್ರಿಲ್ಲಿಂಗ್‌ ಯಂತ್ರಗಳ ಮೂಲಕ 150 ಮೀಟರ್‌ ಆಳ ಕೊರೆದ ರಕ್ಷಣಾ ಕಾರ್ಯಾಚರಣೆ ತಂಡವು ಮಗುವನ್ನು ರಕ್ಷಿಸಲು ಯಶಸ್ವಿಯಾಗಿದೆ. ಮಗುವಿಗೆ ಕಳೆದ 109 ಗಂಟೆಗಳ ಅವಧಿಯಲ್ಲಿ ಆಮ್ಲಜನಕ ಹಾಗೂ ಆಹಾರ ನೀಡಲಾಗುತ್ತಿತ್ತು. ಜತೆಗೆ ಕ್ಯಾಮರಾದ ಮೂಲಕ ಮಗುವಿನ ಚಲನ ವಲನ ಮೇಲೂ ಗಮನ ಇಡಲಾಗಿತ್ತು.

2 year old baby successfully rescued from 150 feet borewell

ನಾಲ್ಕು ದಿನಗಳ ಹಿಂದೆ ಆಟ ವಾಡುತ್ತಿದ್ದಾಗ ಮಗು ಆಕಸ್ಮಾತ್‌ ಆಗಿ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿತ್ತು. ಈ ಬೋರ್‌ವೆಲ್‌ 150 ಅಡಿ ಆಳ ಹಾಗೂ ಕೇವಲ 7 ಇಂಚು ಅಗಲವಿತ್ತು. ಎರಡು ವರ್ಷದ ಫತೇಹ್ವೀರ್‌ ದಂಪತಿಗೆ ಒಬ್ಬನೇ ಮಗನಾಗಿದ್ದನು.

ಹೀಗಾಗಿ ಕುಟುಂಬದ ಆತಂಕ ಹಾಗೂ ಆಕ್ರಂದನ ಮುಗಿಲು ಮುಟ್ಟಿತ್ತು. ಆದರೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿರುವುದು ಕುಟುಂಬ ಸದಸ್ಯರು ಹಾಗೂ ಊರಿನ ಜನರಲ್ಲಿ ಖುಷಿ ತರಿಸಿದೆ. ಸರ್ಕಾರ ಹಾಗೂ ರಕ್ಷಣಾ ತಂಡಕ್ಕೆ ಕುಟುಂಬ ಧನ್ಯವಾದ ತಿಳಿಸಿದೆ. ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕೂಡ ಯಶಸ್ವಿ ಕಾರ್ಯಾಚರಣೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

English summary
Two year old Fatehver Singh has been rescued after 109 hour successful Operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X