ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕಿ ರೋಜಾ ಕಾರಿಗೆ ಮುತ್ತಿಗೆ ಹಾಕಿದ ವೈಎಸ್ಸಾರ್ ಕಾರ್ಯಕರ್ತರು

|
Google Oneindia Kannada News

ಅಮರಾವತಿ, ಜನವರಿ 07: ಆಂಧ್ರಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ(ಎಪಿಐಐಸಿ) ಅಧ್ಯಕ್ಷೆ, ನಟಿ, ಶಾಸಕಿ ಆರ್ ಕೆ ರೋಜಾ ಅವರ ಕಾರಿಗೆ ಸ್ವಪಕ್ಷೀಯರೇ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ತಮ್ಮ ನಗರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೆಬಿಆರ್ ಪುರಂನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.

ಶಾಸಕಿ ರೋಜಾ ಅವರ ಮೇಲೆ ಸ್ವಪಕ್ಷೀಯದವರೇ ಹಲ್ಲೆಗೆ ಯತ್ನ ಎಂದು ಬಿಂಬಿಸಲಾಗಿತ್ತು. ಆದರೆ, ಇದು ಪ್ರತಿಭಟನೆಯ ಒಂದು ಸ್ವರೂಪ, ನ್ಯಾಯಕ್ಕಾಗಿ ಆಗ್ರಹಿಸಿ ಈ ರೀತಿ ಕಾರು ತಡೆದಿದ್ದರು ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಮಾತ್ರ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

ಬಹುಭಾಷಾ ನಟಿ ರೋಜಾ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗನ್​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಜಗನ್ ಸಂಪುಟದಲ್ಲಿ ಉನ್ನತ ಸ್ಥಾನದ ಆಕಾಂಕ್ಷಿಯಾಗಿದ್ದ ವೈಎಸ್ಆರ್ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆರೋಜಾಗೆ ಆಂಧ್ರಪ್ರದೇಶ ರಾಜ್ಯದ ಕೈಗಾರಿಕಾ ಮೂಲ ಸೌಕರ್ಯ ನಿಗಮದ ಅಧ್ಯಕ್ಷೆ ಸ್ಥಾನ ಸಿಕ್ಕಿದೆ. ಆಂಧ್ರಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ ಚೇರ್ಮನ್ ಹುದ್ದೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಹೊಂದಿದ್ದು, ಈ ಹುದ್ದೆಯಿಂದ ರೋಜಾ ಸಂತುಷ್ಟರಾಗುತ್ತಾರೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಅನಂತಪುರದಲ್ಲಿ ಕಿಯಾ ಉತ್ಪಾದನೆ, ಸ್ಥಳೀಯರಿಗೆ ಉದ್ಯೋಗ ಖಾತ್ರಿ: ರೋಜಾ ಅನಂತಪುರದಲ್ಲಿ ಕಿಯಾ ಉತ್ಪಾದನೆ, ಸ್ಥಳೀಯರಿಗೆ ಉದ್ಯೋಗ ಖಾತ್ರಿ: ರೋಜಾ

YSRCP leader Roja Convoy blocked by Party supporters

ಚಿತ್ತೂರ್​ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಉದ್ಘಾಟನೆಗೆ ತೆರಳಿ ಹಿಂತಿರುಗುವಾಗ, 200 ಬೆಂಬಲಿಗರೊಂದಿಗೆ ರೋಜಾ ಅವರ ಕಾರನ್ನು ತಡೆದು, ದಾಳಿ ಮಾಡಲು ಯತ್ನಿಸಿ, ಪಕ್ಷದ ಕಾರ್ಯಕರ್ತರಿಗೆ ಉತ್ತಮ ಸ್ಥಾನಕ್ಕಾಗಿ ಆಗ್ರಹಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಆದರೆ, ಸ್ವಪಕ್ಷಿಯರಿಂದಲ್ಲೆ ಹಲ್ಲೆ ಯತ್ನ ವಿಚಾರವನ್ನು ರೋಜಾ ನಿರಾಕರಿಸಿದ್ದು, ಇದು ತೆಲುಗು ದೇಶಂ ಪಕ್ಷದ ಕುಮ್ಮಕ್ಕು ಎಂದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 143, 149, 341, 427, 509 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
YSRCP leader APIIC chairman RK Roja's Convoy blocked by Party supporters in Nagari, Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X