ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣದಲ್ಲಿ ವೈಎಸ್ಸಾರ್ ಜಗನ್ ಮೋಹನ್ ರೆಡ್ಡಿಗೆ ಚಾಕು ಇರಿತ

|
Google Oneindia Kannada News

Recommended Video

ವಿಶಾಖಪಟ್ಟಣಂ ಏರ್ ಪೋರ್ಟ್ ನಲ್ಲಿ ವೈಎಸ್ಸಾರ್ ಜಗನ್ ಮೋಹನ್ ರೆಡ್ಡಿಗೆ ಚಾಕು ಇರಿತ | Oneindia Kannada

ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಹಲ್ಲೆ ಯತ್ನ ನಡೆದಿದೆ. ವೈಜಾಗ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಜಗನ್ ಅವರ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಚಾಕುವಿನಿಂದ ಇರಿದಿದ್ದಾನೆ.

ಮೊದಲ ಬಾರಿಗೆ ಇರಿದ ತಕ್ಷಣವೇ ಎಚ್ಚೆತ್ತುಕೊಂಡ ಜಗನ್ ಅವರು ಆತನಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ಕೂಡಲೇ ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ

ವಿಶಾಖಪಟ್ಟಣಂನ ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಹೇಳಿದ, ನಾನು ನಿಮ್ಮ ಅಭಿಮಾನಿ ಒಂದು ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ಕೇಳಿದ ಹೀಗಾಗಿ, ನಾನು ಅವನ ಮನವಿಗೆ ಸ್ಪಂದಿಸಿದೆ. ನನಗೆ ತೀವ್ರಗಾಯವಾಗಿಲ್ಲ, ದೇವರ ದಯೆ, ಅಭಿಮಾನಿಗಳು ಆತಂಕಗೊಳ್ಳಬಾರದು ಎಂದು ಜಗನ್ ಮೋಹನ್ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.

ಜಗನ್ ಮೇಲೆ ಕೊಲೆ ಯತ್ನ ಎಂದ ಪಕ್ಷ

ಜಗನ್ ಮೇಲೆ ಕೊಲೆ ಯತ್ನ ಎಂದ ಪಕ್ಷ

ಇದು ಪೂರ್ವನಿಯೋಜಿತ ಕೃತ್ಯ, ಜಗನ್ ಮೋಹನ್ ರೆಡ್ಡಿ ಅವರನ್ನು ಗಾಯಗೊಳಿಸುವುದು ಆತನ ಉದ್ದೇಶವಾಗಿರಲಿಲ್ಲ. ಆ ಚಾಕು ನೋಡಿ ಹೇಗಿದೆ. ಸಾಮಾನ್ಯ ದಿನ ಬಳಕೆ ಚಾಕುವಂತೂ ಅಲ್ಲ, ವಿಮಾನ ನಿಲ್ದಾಣದಲ್ಲೇ ಇಂಥ ಕೃತ್ಯ ಜರುಗುತ್ತದೆ ಎಂದರೆ ನಂಬಲಿಕೆ ಸಾಧ್ಯವಿಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಬಗ್ಗೆ ಉತ್ತರಿಸಬೇಕಿದೆ. ವಿಪಕ್ಷ ನಾಯಕರಿಗೆ ಭದ್ರತೆ ನೀಡಲು ಸಾಧ್ಯವಾಗದ ಸರ್ಕಾರ ಇದ್ದು ಪ್ರಯೋಜನವೇನು ಎಂದು ಪಕ್ಷದ ನಾಯಕಿ, ನಟಿ ರೋಜಾ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಜಗನ್ ರೆಡ್ಡಿಯ ಸಂಕಲ್ಪ ಯಾತ್ರೆ ಆರಂಭ, ನಾಯ್ಡುಗೆ ನಡುಕ ಜಗನ್ ರೆಡ್ಡಿಯ ಸಂಕಲ್ಪ ಯಾತ್ರೆ ಆರಂಭ, ನಾಯ್ಡುಗೆ ನಡುಕ

ದಾಳಿಕೋರನ ಗುರುತು ಪತ್ತೆ ಹಚ್ಚೆ

ದಾಳಿಕೋರನ ಗುರುತು ಪತ್ತೆ ಹಚ್ಚೆ

ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಹಲ್ಲೆ ಯತ್ನ ನಡೆಸಿದ ವ್ಯಕ್ತಿಯನ್ನು ಬಂಧಿಸಿರುವ ವಿಮಾನ ನಿಲ್ದಾಣದ ಪೊಲೀಸ್ ಸಿಬ್ಬಂದಿಗಳು ಆತನ ವಿಚಾರಣೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣದ ರೆಸ್ಟೋರೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಯ್ಟರ್, ಆತನ ಹೆಸರು ಶ್ರೀನಿವಾಸ್ ಎಂದು ತಿಳಿದು ಬಂದಿದೆ.

ಅಪ್ಪನ ಹಾದಿ ಹಿಡಿದ ಜಗನ್, 3 ಸಾವಿರ ಕಿ.ಮೀ ಪಾದಯಾತ್ರೆ ಅಪ್ಪನ ಹಾದಿ ಹಿಡಿದ ಜಗನ್, 3 ಸಾವಿರ ಕಿ.ಮೀ ಪಾದಯಾತ್ರೆ

ಹೈದರಾಬಾದಿಗೆ ತೆರಳಬೇಕಿದ್ದ ಜಗನ್

ಹೈದರಾಬಾದಿಗೆ ತೆರಳಬೇಕಿದ್ದ ಜಗನ್

260ಕ್ಕೂ ಹೆಚ್ಚು ದಿನಗಳ ಕಾಲ ಚುನಾವಣಾ ಪಾದಯಾತ್ರೆ, ಜನಸ್ಪಂದನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಜಗನ್ ಅವರು ವಿಶಾಖಪಟ್ಟಣಂನಿಂದ ಹೈದರಾಬಾದಿಗೆ ತೆರಳಲು ಸಿದ್ಧರಾಗಿದ್ದರು. ಆದರೆ, ವಿಮಾನ ಹೊರಡಲು ಇನ್ನು ಸಮಯವಿತ್ತು. ಹೀಗಾಗಿ, ಏರ್ ಪೋರ್ಟ್ ಲಾಂಜ್ ನಲ್ಲಿ ವಿಶ್ರಮಿಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದು ಪರಿಚಯ ಮಾಡಿಕೊಂಡ ಶ್ರೀನಿವಾಸ್, ಸೆಲ್ಫಿ ಕೇಳಿದ್ದಾನೆ. ನಂತರ ಏಕಾಏಕಿ ಹಲ್ಲೆ ಮಾಡಿದ್ದಾನೆ.

ಜಗನ್ ಗೆ ಸೇರಿದ 148 ಕೋಟಿ ರು. ಮೌಲ್ಯದ ಭೂಮಿ ಅಕ್ರಮ ಎಂದ ಇ.ಡಿ.

ಜಗನ್ ಮೇಲೆ ದಾಳಿ ಉದ್ದೇಶವೇನು

ಜಗನ್ ಮೇಲೆ ದಾಳಿ ಉದ್ದೇಶವೇನು

ಜಗನ್ ಮೋಹನ್ ರೆಡ್ಡಿ ಮೇಲೆ ದಾಳಿ ಮಾಡಲು ಇಂಥ ಉದ್ದೇಶವೇ ಆಗಬೇಕು ಎಂದೇನಿಲ್ಲ, ಜಾತಿ ಮತ ಪಂಥ, ರಾಜಕೀಯ ದ್ವೇಷ ಹೀಗೆ ಏನಾದರೂ ಕಾರಣ ನೀಡಬಹುದು. ಆದರೆ, ಶ್ರೀನಿವಾಸ್ ಎಂಬ ವ್ಯಕ್ತಿ ಅಂಥ ಚಾಕುವನ್ನು ಏಕೆ ಬಳಸಿದ, ಆತನ ಉದ್ದೇಶವೇನು ಎಂಬುದು ತನಿಖೆ ನಂತರವಷ್ಟೇ ತಿಳಿಯಲಿದೆ. ಈ ನಡುವೆ, ಇದು ಸಾಮಾನ್ಯ ಹಲ್ಲೆಯತ್ನವಲ್ಲ, ಕೊಲೆ ಯತ್ನ ಎಂದು ವೈಎಸ್ಸಾರ್ ಪಕ್ಷ ಆರೋಪಿಸಿದೆ. ಚಾಕುವಿನಲ್ಲಿ ವಿಷಪೂರಿತ ಲೇಪನವಾಗಿರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಲಾಗಿದೆ.

English summary
YSR Congress president Jagan Mohan Reddy attacked at Vizag Airport today. Man reportedly came with knife to attack Jagan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X