ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ

|
Google Oneindia Kannada News

ಅಮರಾವತಿ, ಜೂನ್ 13: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ, ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ರೋಜಾ ಅವರಿಗೆ ಕೊನೆಗೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಭರ್ಜರಿ ಸ್ಥಾನಮಾನ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ಸಂಪುಟ ವಿಸ್ತರಣೆ ಕಾರ್ಯಕ್ಕೆ ಗೈರು ಹಾಜರಾಗಿದ್ದ ರೋಜಾ ಅವರು ಮಂಗಳವಾರದಂದು ಪ್ರತ್ಯಕ್ಷವಾಗಿದ್ದರು. ವಿಜಯವಾಡದಲ್ಲಿ ಜಗನ್ ಅವರನ್ನು ಭೇಟಿ ಮಾಡಿದ ಬಳಿಕ ಸಂತಸದಿಂದ ಸುದ್ದಿಗಾರರ ಜೊತೆ ಮಾತನಾಡಿದ್ದರು.

ಜಗನ್ ಭೇಟಿ ಬಳಿಕ, ಸಿಟ್ಟಿಗೆದ್ದಿದ್ದ ರೋಜಾ ಮುಖದಲ್ಲಿ ಮಂದಹಾಸ ಜಗನ್ ಭೇಟಿ ಬಳಿಕ, ಸಿಟ್ಟಿಗೆದ್ದಿದ್ದ ರೋಜಾ ಮುಖದಲ್ಲಿ ಮಂದಹಾಸ

ರೋಜಾ ಅವರಿಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿ ಎಸ್ ಆರ್ ಟಿಸಿ) ದ ಅಧ್ಯಕ್ಷೆ ಪಟ್ಟ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ರೋಜಾ ಮಾತ್ರ ಕಳೆದ ಕೆಲ ದಿನಗಳಿಂದ ಪಕ್ಷದ ಹಿರಿಯ ನಾಯಕರು ಸೇರಿದಂತೆ ಸಿಎಂ ಜಗನ್ ಫೋನ್ ಕೂಡಾ ಎತ್ತಿರಲಿಲ್ಲ.

YSR Congress party MLA RK Roja is new APIIC chairperson

ರೋಜಾ ಅವರು ಜಗನ್ ಜೊತೆಗೆ ಏನು ಮಾತುಕತೆ ನಡೆಸಿದರು, ರೋಜಾಗೆ ಸಚಿವ ಸ್ಥಾನದ ಭರವಸೆ ಸಿಕ್ಕಿದೆಯೇ? ಅಥವಾ ನಿಗಮ ಮಂಡಳಿಯ ಸ್ಥಾನ ನೀಡಲಾಗುತ್ತಿದೆಯೇ? ಎಂಬುದರ ಬಗ್ಗೆ ರೋಜಾ ಏನು ಹೇಳಿಲ್ಲ.

ಈಗ ಲಭ್ಯ ಮಾಹಿತಿಯಂತೆ ಜಗನ್ ಅವರು ರೋಜಾ ಅವರನ್ನು ಆಂಧ್ರಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ(APIIC) ಚೇರ್ಮನ್ ಆಗಿ ನೇಮಿಸಿದ್ದಾರೆ. ಈ ಕುರಿತಂತೆ ಅಧಿವೇಶನ ಸಂದರ್ಭದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್! ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್!

ಈ ಹುದ್ದೆ ಮಹತ್ವವೇನು? : ಆಂಧ್ರಪ್ರದೇಶದಲ್ಲಿ ಯಾವುದೇ ಮಟ್ಟದ ಕೈಗಾರಿಕೆ ಹೊಸದಾಗಿ ಸ್ಥಾಪಿಸಬೇಕಾದರೆ ಅಥವಾ ಹಳೆ ಕಂಪನಿ ಲೈಸನ್ಸ್ ನವೀಕರಿಸಬೇಕಾದರೆ ಎಪಿಐಐಸಿ ಚೇರ್ಮನ್ ಅನುಮತಿ ಅಗತ್ಯ. ಲೈಸನ್ಸ್ ಮಾತ್ರವಲ್ಲದೆ, ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ಹೊಣೆ ಕೂಡಾ ಈ ನಿಗಮದಡಿಯಲ್ಲಿ ಬರಲಿದೆ. ಜಮೀನು, ವಿದ್ಯುತ್, ಜಲ ಪೂರೈಕೆ ಹೀಗೆ ವಿವಿಧ ಇಲಾಖೆ ಜತೆ ಎಪಿಐಐಸಿ ಕಾರ್ಯ ನಿರ್ವಹಿಸಲಿದೆ.

ಆಂಧ್ರಪ್ರದೇಶ ಕೈಗಾರಿಕಾ ಮೂಲ ಸೌಕರ್ಯ ನಿಗಮ ಚೇರ್ಮನ್ ಹುದ್ದೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಹೊಂದಿದ್ದು, ಈ ಹುದ್ದೆಯಿಂದ ರೋಜಾ ಸಂತುಷ್ಟರಾಗುತ್ತಾರೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ರೋಜಾ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

English summary
YSR Congress party MLA from Nagari assembly constituency R.K Roja gets Andhra Pradesh Industrial Infrastructure Corporation (APIIC) chairperson post. Roja reportedly accepted the offer by CM Jagan Mohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X