ಆಂಧ್ರಪ್ರದೇಶದಲ್ಲಿ ಶೇ.95ರಷ್ಟು ಕೊರೊನಾ ಸೋಂಕಿತರು ಗುಣಮುಖ
ಅಮರಾವತಿ, ಅಕ್ಟೋಬರ್ 21:ಆಂಧ್ರಪ್ರದೇಶದಲ್ಲಿ ಶೇ.95ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಚೇತರಿಕೆ ಪ್ರಮಾಣ ಆಂಧ್ರದಲ್ಲಿಯೇ ಹೆಚ್ಚಿದೆ. ಬಿಹಾರ ಶೇ.94, ತಮಿಳುನಾಡು ಹಾಗೂ ಪಂಜಾಬ್ ಶೇ.93ರಷ್ಟು ಚೇತರಿಕೆ ಪ್ರಮಾಣವಿದೆ.
ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್ 20ರವರೆಗೆ 7,86,050 ಪ್ರಕರಣಗಳು ಪತ್ತೆಯಾಗಿವೆ.35,065 ಸಕ್ರಿಯ ಪ್ರಕರಣಗಳಿವೆ. 7,44,532 ಮಂದಿ ಗುಣಮುಖರಾಗಿದ್ದಾರೆ.
ಕರ್ನೂಲ್ನಲ್ಲಿ 27 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು,4 ಶಾಲೆಗಳು ಬಂದ್
ಇದುವರೆಗೆ 6453 ಮಂದಿ ಸಾವನ್ನಪ್ಪಿದ್ದಾರೆ. ಜುಲೈನಲ್ಲಿ ನಿತ್ಯ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ 5 ಸಾವಿರಕ್ಕೂ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ.
ಇದೀಗ 71,96,628 ಪರೀಕ್ಷೆಯನ್ನು ಮಾಡಿಸಲಾಗಿದೆ. ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದ ಶಾಲೆಗಳು ತೆರೆಯಲಿವೆ. ಖಾಸಗಿ ಶಾಲೆಗಳಲ್ಲಿ 27 ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ತುತ್ತಾಗಿರುವುದರಿಂದ 4 ಶಾಲೆಗಳನ್ನು 10 ದಿನಗಳ ಕಾಲ ಮುಚ್ಚುವಂತೆ ಆದೇಶಿಸಲಾಗಿದೆ.
9-10ನೇ ತರಗತಿ ಓದುತ್ತಿರುವ 27 ವಿದ್ಯಾರ್ಥಿಗಳಿಗೆ ಸೋಂಕು ತಗುಲಿತ್ತು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗಿತ್ತು.ಹತ್ತು ದಿನಗಳ ಕಾಲ ಈ ಶಾಲೆಗಳನ್ನು ಮುಚ್ಚಿ ಸ್ಯಾನಿಟೈಸ್ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಕೊವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಖಾಸಗಿ ಶಾಲೆಗಳ ವಿರುದ್ಧ ಕರ್ನೂಲ್ ಶಿಕ್ಷಣಾಧಿಕಾರಿ ಕಿಡಿ ಕಾರಿದ್ದಾರೆ.ಈ 27 ವಿದ್ಯಾರ್ಥಿಗಳನ್ನು ಐಸೊಲೇಷನ್ನಲ್ಲಿರಿಸುವಂತೆ ಸೂಚಿಸಲಾಗಿದೆ. ಇದೀಗ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.