ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣ ಅನಿಲ ಸೋರಿ: 178 ಮಹಿಳಾ ಕಾರ್ಮಿಕರು ಅಸ್ವಸ್ಥ

|
Google Oneindia Kannada News

ವಿಶಾಖಪಟ್ಟಣ, ಜೂನ್ 3: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಕೆಮಿಕಲ್ ಘಟಕದಲ್ಲಿ ಅನಿಲ ಸೋರಿಕೆಯಾಗಿ ಕನಿಷ್ಠ 178 ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎಂದು ಆಂಧ್ರ ಪ್ರದೇಶದ ಕೈಗಾರಿಗಾ ಸಚಿವ ಗುಡಿವದಾ ಅಮರ್ ನಾಥ್ ಶುಕ್ರವಾರ ತಿಳಿಸಿದ್ದಾರೆ.

ವಿಶಾಖಪಟ್ಟಣದ ಅಚ್ಚುತಪುರಂನಲ್ಲಿರುವ ವೆಟರ್ನರಿ ಔಷಧದ ಕಂಪನಿಯಾಗಿರುವ ಪೋರಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ನ ಕೆಮಿಕಲ್ ಘಟಕದಲ್ಲಿ ಈ ಘಟನೆ ಸಂಭವಿಸಿದೆ.

ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಭೀತಿ, 5 ದಿನ ಅಲರ್ಟ್ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಭೀತಿ, 5 ದಿನ ಅಲರ್ಟ್

ಪೋರಸ್ ಲ್ಯಾಬೋರೇಟರೀಸ್ ಘಟಕದಲ್ಲಿ ಬಹುತೇಕ ಮಹಿಳಾ ಕಾರ್ಮಿಕರೇ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಕಂಪನಿಯ ಕೆಮಿಕಲ್ ಘಟಕದಿಂದ ಅನಿಲ ಸೋರಿಕೆಯಾಗಿದೆ. ಇದರ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರಿಗೆ ಕಣ್ಣು ಉರಿ, ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಕಂಡುಬಂದಿದೆ.

Vishakapatna Gas Leakage: 178 Women Workers Fall ill

ಮಾರಣಾಂತಿಕ ಅನಿಲ ಅಲ್ಲ: ಘಟನೆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ(ಪಿಸಿಬಿ) ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸೋರಿಕೆಯ ಮೂಲವನ್ನು ಗುರುತಿಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸೋರಿಕೆಯಾಗಿರುವ ಅನಿಲವು ಮಾರಣಾಂತಿಕವಲ್ಲ ಎಂಬುದು ತಿಳಿದುಬಂದಿದೆ. ಘಟಕದಲ್ಲಿ ಹಾನಿಗೊಳಗಾದ ಸ್ಕ್ರಬ್ಬರ್ ಗಳು ಅನಿಲ ಸೋರಿಕೆಗೆ ಕಾರಣ ಎಂದು ತಿಳಿದುಬಂದಿದೆ.

ತಾಲಿಬಾನ್ ಭೇಟಿ ಮಾಡಿದ ಭಾರತೀಯ ನಿಯೋಗ ತಾಲಿಬಾನ್ ಭೇಟಿ ಮಾಡಿದ ಭಾರತೀಯ ನಿಯೋಗ

ಕೆಲವು ಕಾರ್ಮಿಕರು ಆಸ್ಪತ್ರೆಗೆ ದಾಖಲು: "ಘಟನೆಯಲ್ಲಿ ಕೆಲವು ಮಹಿಳಾ ಕಾರ್ಮಿಕರು ಪ್ರಜ್ಞಾಹೀನರಾದರು. ಅವರನ್ನು ಚಿಕಿತ್ಸೆಗಾಗಿ ಅನಕಾಪಲ್ಲಿ ಮತ್ತು ವಿಶಾಖಪಟ್ಟಣದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ,'' ಎಂದು ಸಚಿವ ಗುಡಿವದಾ ಅಮರನಾಥ್ ತಿಳಿಸಿದ್ದಾರೆ.

Vishakapatna Gas Leakage: 178 Women Workers Fall ill

"ಹೆಚ್ಚಿನ ಕಾರ್ಮಿಕರು ಕಣ್ಣು ಉರಿ ಮತ್ತು ವಾಕರಿಕೆ ಅನುಭವಿಸಿದರು. ಪ್ರಥಮ ಚಿಕಿತ್ಸೆ ನೀಡಿದ ನಂತರ ಅನೇಕ ಕಾರ್ಮಿಕರು ಚೇತರಿಸಿಕೊಂಡಿದ್ದಾರೆ. ಕೆಲವು ಕಾರ್ಮಿಕರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಸದ್ಯ ಯಾರ ಪ್ರಾಣಕ್ಕೂ ಅಪಾಯವಿಲ್ಲ,'' ಎಂದು ಅನಕಾಪಲ್ಲಿ ಜಿಲ್ಲಾ ವೈದ್ಯಾಧಿಕಾರಿ ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

"ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಕಾರ್ಮಿಕರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಸದ್ಯ ಪೋರಸ್ ಲ್ಯಾಬೋರೇಟರೀಸ್ ಘಟಕವನ್ನು ಮುಚ್ಚಲಾಗಿದೆ,'' ಎಂದು ವಿಶಾಖಪಟ್ಟಣ ಎಸ್ಪಿ ಗೌತಮಿ ತಿಳಿಸಿದ್ದಾರೆ.

English summary
At least 178 women working at a chemical plant in Andhra Pradesh's Visakhapatnam fell sick after a gas leakage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X