ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಸಾರ್ ಕಾಂಗ್ರೆಸ್ ಸೇರಿದ ಟಿಡಿಪಿ ಮುಖಂಡನಿಗೆ ಭೂ ಹಗರಣದ ಉರುಳು

|
Google Oneindia Kannada News

ಅಮರಾವತಿ, ನವೆಂಬರ್ 08: ವಿಶಾಖಪಟ್ಟಣಂ ಜಿಲ್ಲೆಯ ಬಹುಕೋಟಿ ಭೂ ಹಗರಣದಲ್ಲಿ ಮಾಜಿ ಕಂದಾಯ ಸಚಿವ ಧರ್ಮಣ ಪ್ರಸಾದ್ ರಾವ್ ಹಾಗೂ 8 ಮಂದಿ ಐಎಎಸ್ ಅಧಿಕಾರಿಗಳ ಹೆಸರು ಉಲ್ಲೇಖಿಸಿ, ವಿಶೇಷ ತನಿಖಾ ದಳವು ತನ್ನ ವರದಿಯನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಸಲ್ಲಿಸಿದೆ.

ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯಲ್ಲಿದ್ದಾಗ ಕಂದಾಯ ಸಚಿವ ಧರ್ಮಣ ಪ್ರಸಾದ್ ರಾವ್, 8 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು ವಿಶಾಖಪಟ್ಟಣಂ ನಗರದ ಸುತ್ತುಮತ್ತ ಹಾಗೂ 40 ಮಂಡಲಗಳಲ್ಲಿರುವ 1,126 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿ, ದಾಖಲೆಗಳನ್ನು ತಿರುಚಿದ ಆರೋಪ ಹೊತ್ತಿದ್ದಾರೆ.

ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ ನಟ', ಶಿವಾಜಿಗೆ ಕಂಟಕ ನಾಯ್ಡು ಪದಚ್ಯುತಿಗೆ 'ಆಪರೇಷನ್ ಗರುಡ ನಟ', ಶಿವಾಜಿಗೆ ಕಂಟಕ

ಆಂಧ್ರಪ್ರದೇಶ ಸರ್ಕಾರವು ಈ ಕುರಿತಂತೆ ತನಿಖೆ ನಡೆಸಲು ವಿಶೇಷ ತನಿಖಾ ದಳ (ಎಸ್ ಐಟಿ) ರಚಿಸಿತ್ತು. ಈ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿ, ಹಗರಣದಲ್ಲಿರುವ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತನಿಖಾಧಿಕಾರಿ ಐಜಿಪಿ ವಿನೀತ್ ಬ್ರಿಜ್‌ಲಾಲ್ ಶಿಫಾರಸು ಮಾಡಿದ್ದಾರೆ.

Visakhapatnam land scam: Former minister D Prasada Rao named in SIT report

ಮಾಜಿ ಯೋಧರಿಗೆ ನೀಡಲಾದ ಮೂರು ಎಕರೆ ಭೂಮಿಯನ್ನು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡು ಗ್ರಾನೈಟ್ ಹಾಗೂ ಮೈನಿಂಗ್ ರಫ್ತು ಕಂಪೆನಿ ವರ್ಗಾಯಿಸಲು ಯತ್ನಿಸಲಾಗಿತ್ತು.

ವಂಚನೆ ಪ್ರಕರಣ: ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಸಂಕಷ್ಟವಂಚನೆ ಪ್ರಕರಣ: ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಸಂಕಷ್ಟ

ಆದರೆ, ಈ ಬಗ್ಗೆ ಶ್ರೀಕಾಕುಳಂನಲ್ಲಿ ಪ್ರತಿಕ್ರಿಯಿಸಿರುವ ಧರ್ಮಣ ಪ್ರಸಾದ್ ರಾವ್, ವಿಶಾಖಪಟ್ಟಣಂ ಹಗರಣದಲ್ಲಿ ಎಸ್ ಐಟಿ ವಿಚಾರಣೆ ನಡೆದೇ ಇಲ್ಲ. ಟಿಡಿಪಿಯ ಹಿರಿಯ ನಾಯಕರನ್ನು ಉಳಿಸುವ ಸಲುವಾಗಿ ಇಲ್ಲಿ ತನಕ ತನಿಖೆ ನಡೆಸಿರಲಿಲ್ಲ. ಜನವರಿಯಲ್ಲಿ ಸಲ್ಲಿಸಿದ್ದ ವರದಿಯನ್ನು ಇಲ್ಲಿ ತನಕ ಸದನದ ಮುಂದೆ ನಾಯ್ಡು ಅವರು ಏಕೆ ತಂದಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

English summary
Visakhapatnam land scam: Dharmana Prasada Rao, who is now a member of the YSR Congress, denied the allegations and accused the ruling Telugu Desam Party of targeting him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X