• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ; ಜಗನ್ ಕಾರ್ಯಕ್ಕೆ ಸೆಲ್ಯೂಟ್ ಎಂದ ಜನರು!

|

ಅಮರಾವತಿ, ಸೆಪ್ಟೆಂಬರ್ 02 : ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕಾರ್ಯಕ್ಕೆ ಜನರು ಸೆಲ್ಯೂಟ್ ಎಂದಿದ್ದಾರೆ. ಜಗನ್ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ.

ಭಾರತದಲ್ಲಿ ಅತಿ ಹೆಚ್ಚು ಭದ್ರತೆ ಹೊಂದಿರುವ ಮುಖ್ಯಮಂತ್ರಿಗಳ ಪೈಕಿ ಜಗನ್ ಮೋಹನ್ ರೆಡ್ಡಿ ಅವರು ಒಬ್ಬರು. ಅವರು ಸಂಚಾರ ನಡೆಸುವ ಸಂದರ್ಭದಲ್ಲಿ ಶಸ್ತ್ರ ಸಜ್ಜಿತ ಭದ್ರತಾ ಪಡೆ ಕಾವಲಿಗೆ ಇರುತ್ತದೆ.

ಬೆಂಗಳೂರಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಆಗಮನ

ತೆಲಗು ಸಿನಿಮಾಗಳ ಮಾದರಿಯಲ್ಲಿ ಜಗನ್ ಮೋಹನ್ ರೆಡ್ಡಿ ಕಾರುಗಳ ಹಿಂದೆ ಮತ್ತು ಮುಂದೆ ಹಲವು ಕಾರುಗಳು ಅವರಿಗೆ ಭದ್ರತೆ ನೀಡುತ್ತವೆ. ಈಗ ವೈರಲ್ ಆಗಿರುವ ವಿಡಿಯೋ ಇದಕ್ಕೆ ಸಂಬಂಧಿಸಿದ್ದು.

ಮುಕೇಶ್ ಅಂಬಾನಿ ಮನವಿಯಂತೆ ರಾಜ್ಯಸಭೆ ಟಿಕೆಟ್ ಕೊಟ್ಟ ಜಗನ್!

ಬುಧವಾರ ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ಪಡೆ ವಾಹನಗಳು ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿವೆ. ವಿಜಯವಾಡ ಆಸ್ಪತ್ರೆಗೆ ಹೋಗಬೇಕಿದ್ದ ಅಂಬ್ಯುಲೆನ್ಸ್‌ ರಸ್ತೆಯಲ್ಲಿ ಹೋಗುವಾರ ಸಿಎಂ ಬೆಂಗಾವಲು ಪಡೆಗಳ ವಾಹನಗಳ ಮಧ್ಯೆ ಸಿಲುಕಿತು.

ಆಗ ಬೆಂಗಾವಲು ಪಡೆ ವಾಹನಗಳು ಅಂಬ್ಯುಲೆನ್ಸ್ ಸಾಗಲು ಅವಕಾಶವ ಮಾಡಿಕೊಟ್ಟವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ

ರಾಜಕಾರಣಿಗಳು ಸಾಗುವಾಗ ಝಿರೋ ಟ್ರಾಫಿಕ್‌ನಲ್ಲಿ ಅಂಬ್ಯುಲೆನ್ಸ್‌ನಲ್ಲಿ ಸಿಕ್ಕಿಕೊಳ್ಳುವುದು ಸಾಮಾನ್ಯ. ಈ ನಡುವೆಯೇ ಜಗನ್ ಮೋಹನ್ ರೆಡ್ಡಿ ಬೆಂಗಾವಲು ಪಡೆ ವಾಹನಗಳ ಕಾರ್ಯ ಮೆಚ್ಚುಗೆಗೆ ಕಾರಣವಾಗಿದೆ.

English summary
Andhra Pradesh CM Jaganmohan Reddy's convoy gave way to an ambulance that was on its way to Vijayawada ESI hospital. Video goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X