ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದ ದೇವಾಲಯದಲ್ಲಿ 3 ಬೆಳ್ಳಿಯ ಸಿಂಹಗಳು ನಾಪತ್ತೆ!

|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 17 : ಆಂಧ್ರ ಪ್ರದೇಶದ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವಾರ್ಲ ದೇವಸ್ಥಾನದಲ್ಲಿ ಆಭರಣಗಳು ನಾಪತ್ತೆಯಾಗಿವೆ. ರಥಕ್ಕೆ ಅಳವಡಿಕೆ ಮಾಡುವ ಮೂರು ಬೆಳ್ಳಿ ಲೇಪಿತ ಸಿಂಹಗಳು ಕಾಣೆಯಾಗಿದ್ದು, ತನಿಖೆ ಆರಂಭವಾಗಿದೆ.

ವಿಜಯವಾಡದಲ್ಲಿರುವ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವಾರ್ಲ ದೇವಸ್ಥಾನ ಕನಕದುರ್ಗಮ್ಮಾ ದೇವಾಲಯ ಎಂದೇ ಖ್ಯಾತಿ ಪಡೆದಿದೆ. ದೇವಾಲಯದ ಕಾರ್ಯಕಾರಿ ಅಧಿಕಾರಿ ಎಂ. ಸುರೇಶ್ ಬಾಬು ಬೆಳ್ಳಿಯ ಸಿಂಹಗಳು ನಾಪತ್ತೆಯಾಗಿದ್ದು ಖಚಿತಪಡಿಸಿದ್ದಾರೆ.

ಹಿಂದೂ ಧರ್ಮದ ಪ್ರಸಿದ್ಧ ದೇವಾಲಯ ಚಿದಂಬರಂ ಬಗ್ಗೆ ಗಾಲಿ ರೆಡ್ಡಿ ಹಿಂದೂ ಧರ್ಮದ ಪ್ರಸಿದ್ಧ ದೇವಾಲಯ ಚಿದಂಬರಂ ಬಗ್ಗೆ ಗಾಲಿ ರೆಡ್ಡಿ

ದೇವಾಲಯದ ಆಡಳಿತ ಮಂಡಳಿ ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದೆ. ದೇವಾಲಯದ ಭದ್ರತಾ ಉಸ್ತುವಾರಿ ಹೊತ್ತಿರುವ ಅಧಿಕಾರಿಗಳು ಸರ್ಕಾರಕ್ಕೆ ಈ ಕುರಿತು ಕೆಲವೇ ದಿನಗಳಲ್ಲಿ ವರದಿಯನ್ನು ನೀಡಲಿದ್ದಾರೆ.

ಹುಂಡಿ ಹಣ ಎಣಿಕೆ ಬಗ್ಗೆ ಮುಜರಾಯಿ ದೇವಾಲಯಗಳಿಗೆ ಸೂಚನೆ ಹುಂಡಿ ಹಣ ಎಣಿಕೆ ಬಗ್ಗೆ ಮುಜರಾಯಿ ದೇವಾಲಯಗಳಿಗೆ ಸೂಚನೆ

Vijayawada Kanakadurgamma Temple Silver Plated Lions Missing

ಮಂಗಳವಾರ ದೇವಾಲಯದ ರಥದ ಭದ್ರತೆಯನ್ನು ಹೆಚ್ಚಿಸಲು ಪರಿಶೀಲನೆ ನಡೆಸಿದಾಗ ಸಿಂಹಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 2019ರ ಏಪ್ರಿಲ್‌ನಲ್ಲಿ ರಥೋತ್ಸವದ ಸಂದರ್ಭದಲ್ಲಿ ಸಿಂಹಗಳನ್ನು ಕೊನೆಯದಾಗಿ ಬಳಕೆ ಮಾಡಲಾಗಿತ್ತು.

 ಬೆಳ್ಳಿ ಬೆಲೆ ಏರಿಕೆ: ಬೆಲೆ ಹೆಚ್ಚಳಕ್ಕೆ ಕಾರಣ ಏನು? ಬೆಳ್ಳಿ ಬೆಲೆ ಏರಿಕೆ: ಬೆಲೆ ಹೆಚ್ಚಳಕ್ಕೆ ಕಾರಣ ಏನು?

ದೇವಾಲಯದ ರಥಕ್ಕೆ ಸಿಸಿಟಿವಿ ಕಣ್ಗಾವಲು ಇದೆ. ಭದ್ರತಾ ವಿಭಾಗದ ಸಿಬ್ಬಂದಿ ಅದನ್ನು ನೋಡಿಕೊಳ್ಳುತ್ತಾರೆ. ಒಟ್ಟು 160 ಕ್ಯಾಮರಾಗಳ 15 ದಿನದ ದೃಶ್ಯಾವಳಿಗಳನ್ನು ಪರಿಶೀಳನೆ ಮಾಡಲಾಗುತ್ತಿದೆ.

ದೇವಾಲಯದ ಲಾಕರ್ ಸೇರಿದಂತೆ ಉಳಿದ ಕಡೆ ಬೆಳ್ಳಿಯ ಸಿಂಹಗಳಿಗಾಗಿ ಹುಡುಕಾಟ ನಡೆದಿದೆ. ಆಡಳಿತ ಮಂಡಳಿ ಈ ಕುರಿತು ಪೊಲೀಸರಿಗೆ ಅಧಿಕೃತವಾಗಿ ಇನ್ನೂ ದೂರು ನೀಡಿಲ್ಲ. ಯುಗಾರಿ ಮತ್ತು ಬ್ರಹೋತ್ಸವದ ಸಂದರ್ಭದಲ್ಲಿ ಮಾತ್ರ ಮರದ ರಥಕ್ಕೆ ಬೆಳ್ಳಿಯ 3 ಸಿಂಹಗಳನ್ನು ಅಳವಡಿಸಿ ಉತ್ಸವ ನಡೆಸಲಾಗುತ್ತಿತ್ತು.

English summary
3 silver-plated lions of Sri Durga Malleswara Swamyvarla Devasthanam in Vijayawada, Andhra Pradesh missing. Lions last used for chariot in April 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X