ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಗತಿಕನ ಶವಕ್ಕೆ ಹೆಗಲು ಕೊಟ್ಟ ಮಹಿಳಾ ಎಸ್ಐಗೆ ಹ್ಯಾಟ್ಸ್ ಆಫ್; ವೈರಲ್ ವಿಡಿಯೋ

|
Google Oneindia Kannada News

ಅಮರಾವತಿ, ಫೆಬ್ರುವರಿ 02: ಹೊಲದಲ್ಲಿ ಸತ್ತು ಬಿದ್ದಿದ್ದ ನಿರ್ಗತಿಕನ ಶವವನ್ನು ಮುಟ್ಟಲು ಇಡೀ ಗ್ರಾಮವೇ ಹಿಂದೇಟು ಹಾಕಿತು. ಗೊತ್ತು ಗುರಿ ಇಲ್ಲದ ಆತನ ಶವ ಹೊರಲು ಯಾರೂ ಮುಂದೆ ಬರದಿದ್ದಾಗ ಆ ಶವಕ್ಕೆ ಮಹಿಳಾ ಎಸ್ ಐ ತಾವೇ ಹೆಗಲುಕೊಟ್ಟಿದ್ದಾರೆ. ಮಹಿಳಾ ಎಸ್ಐ ಶವ ಹೊತ್ತು ನಡೆದಿರುವ ಈ ವಿಡಿಯೋ ವೈರಲ್ ಆಗಿದ್ದು, ಎಸ್ ಐ ಕೆಲಸಕ್ಕೆ ನೆಟ್ಟಿಗರೆಲ್ಲರೂ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ.

ಆಂಧ್ರ ಪ್ರದೇಶದ ಶ್ರೀಕಾಕುಲಂ ಎಂಬಲ್ಲಿ ಈ ಸಂಗತಿ ನಡೆದಿದೆ. ಸೋಮವಾರ ಹೊಲವೊಂದರಲ್ಲಿ ನಿರ್ಗತಿಕ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಆ ಶವ ಎತ್ತುಕೊಂಡು ಹೋಗಲು ಗ್ರಾಮದಲ್ಲಿ ಯಾರೂ ಮುಂದೆ ಬರದಿದ್ದಾಗ ಮಹಿಳಾ ಎಸ್ ಐ ತಾವೇ ಶವ ಹೊತ್ತುಕೊಂಡು ಹೊರಟಿದ್ದಾರೆ. ಮುಂದೆ ಓದಿ...

 ಮಗಳಿಗೆ ಅಪ್ಪನ ಸಲ್ಯೂಟ್; ವೈರಲ್ ಆಯ್ತು ಈ ಹೃದಯಸ್ಪರ್ಶಿ ಚಿತ್ರ ಮಗಳಿಗೆ ಅಪ್ಪನ ಸಲ್ಯೂಟ್; ವೈರಲ್ ಆಯ್ತು ಈ ಹೃದಯಸ್ಪರ್ಶಿ ಚಿತ್ರ

 ಗ್ರಾಮಸ್ಥರಿಗೆ ಸಹಾಯಕ್ಕೆ ಮನವಿ ಮಾಡಿದ ಎಸ್ ಐ

ಗ್ರಾಮಸ್ಥರಿಗೆ ಸಹಾಯಕ್ಕೆ ಮನವಿ ಮಾಡಿದ ಎಸ್ ಐ

ಸೋಮವಾರ ಕಾಸಿಬುಗ್ಗ ಪೊಲೀಸರಿಗೆ ನಿರ್ಗತಿಕ ವ್ಯಕ್ತಿಯೊಬ್ಬ ಸಂಪಂಗಿಪುರಂನ ಅಡವಿ ಕುಟ್ಟೂರಿನ ಹೊಲವೊಂದರಲ್ಲಿ ಸತ್ತುಬಿದ್ದಿರುವುದಾಗಿ ಮಾಹಿತಿ ಬಂದಿದೆ. ಈ ಮಾಹಿತಿ ಬರುತ್ತಿದ್ದಂತೆ ಕಾನ್ ಸ್ಟೆಬಲ್ ಗಳ ಜೊತೆ ಕೊಟ್ಟೂರು ಎಸ್ ಐ ಸಿರಿಶಾ ಸ್ಥಳಕ್ಕೆ ತೆರಳಿದ್ದಾರೆ. ಹೊಲದ ಮಧ್ಯೆ ಶವ ಬಿದ್ದಿದ್ದು, ಅಲ್ಲಿಗೆ ವಾಹನ ತೆರಳಲು ಸಾಧ್ಯವಿಲ್ಲದ ಕಾರಣ ಗ್ರಾಮಸ್ಥರಿಗೆ ಶವ ಕೊಂಡೊಯ್ಯಲು ಸಹಾಯ ಮಾಡುವಂತೆ ಕೇಳಿಕೊಂಡರು.

 ತಾವೇ ಶವ ಹೊತ್ತ ಮಹಿಳಾ ಎಸ್ ಐ

ತಾವೇ ಶವ ಹೊತ್ತ ಮಹಿಳಾ ಎಸ್ ಐ

ಆದರೆ ಗ್ರಾಮಸ್ಥರು ಯಾರೂ ನಿರ್ಗತಿಕನ ಶವವನ್ನು ಮುಟ್ಟವುದಕ್ಕೆ ಒಪ್ಪಲಿಲ್ಲ. ಆತನ ಶವವನ್ನು ವಾಹನದವರೆಗೆ ಹೊತ್ತುಕೊಂಡು ಹೋಗಲೂ ನಿರಾಕರಿಸಿದ್ದಾರೆ. ಆಗ ತಾವೇ ಶವ ಹೊರುವ ನಿರ್ಧಾರಕ್ಕೆ ಬಂದಿದ್ದಾರೆ ಎಸ್ ಐ. ಲಲಿತಾ ಚಾರಿಟಬಲ್ ಟ್ರಸ್ಟ್ ಸದಸ್ಯನ ಸಹಾಯದೊಂದಿಗೆ ಶವವನ್ನು ತಾವೇ ಎತ್ತಿಕೊಂಡು ಹೋಗಲು ಮುಂದಾದರು.

ಎರಡು ಕಿ.ಮೀವರೆಗೆ ಶವ ಹೊತ್ತರು

ಎರಡು ಕಿ.ಮೀವರೆಗೆ ಶವ ಹೊತ್ತರು

ಮೃತದೇಹ ತೆಗೆದುಕೊಂಡು ಹೋಗುವ ವಾಹನ ಹೊಲದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ನಿಂತಿದ್ದು, ಅಲ್ಲಿಗೆ ಅರ್ಧ ಗಂಟೆಯಲ್ಲಿ ಶವವನ್ನು ಎಸ್ ಐ ಹೊತ್ತುಕೊಂಡು ಹೋಗಿದ್ದು, ಸ್ಥಳೀಯರು ಈ ವಿಡಿಯೋ ಮಾಡಿದ್ದಾರೆ. ಹೊಲಗಳ ನಡುವೆಯೇ ಅವರು ಶವವನ್ನು ವಾಹನದವರೆಗೆ ಸಾಗಿಸಿದರು.

ಮಹಿಳಾ ಎಸ್ ಐ ಕಾರ್ಯಕ್ಕೆ ಹ್ಯಾಟ್ಸ್‌ ಆಫ್

ಮಹಿಳಾ ಎಸ್ ಐ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಎಸ್ ಐ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿರ್ಗತಿಕನ ಶವಕ್ಕೆ ಗೌರವ ಕೊಟ್ಟ ಮಹಿಳಾ ಅಧಿಕಾರಿಗೆ ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ. ಆತ ಭಿಕ್ಷುಕನಾಗಿದ್ದು, ಹಸಿವಿನಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

English summary
A video of woman police sub-inspector from Srikakulam of andhra pradesh carrying the dead body of a homeless old man for more than a kilometer goes viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X