ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಭಜಿತ ಆಂಧ್ರಪ್ರದೇಶ ಮಾಜಿ ಸಿಎಂ, ತಮಿಳುನಾಡು ರಾಜ್ಯಪಾಲರಾಗಿದ್ದ ಕೆ. ರೋಸಯ್ಯ ನಿಧನ

|
Google Oneindia Kannada News

ಅಮರಾವತಿ, ಡಿಸೆಂಬರ್ 4: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕೋನಿಜೇಟಿ ರೋಸಯ್ಯ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. 89 ವರ್ಷದ ಅವರು ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಶನಿವಾರ ಬೆಳಗ್ಗೆ ಕಡಿಮೆ ರಕ್ತದೊತ್ತಡಕ್ಕೆ ಒಳಗಾಗಿ ಬಿದ್ದ ಕೆ. ರೋಸಯ್ಯ ಬಂಜಾರಾ ಹಿಲ್ಸ್​ ಸ್ಟಾರ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬದುಕುಳಿಯಲಿಲ್ಲ.

ಕೆ. ರೋಸಯ್ಯ ಆಂಧ್ರಪ್ರದೇಶದ ಕಾಂಗ್ರೆಸ್​​ನ ಪ್ರಮುಖ ನಾಯಕರಾಗಿದ್ದು, ಅವರು ಶಾಸಕರು, ಎಂಎಲ್​ಸಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ (ತೆಲಂಗಾಣ ಬೇರೆ ರಾಜ್ಯವಾಗಿ ವಿಭಜನೆ ಆಗುವುದಕ್ಕೂ ಮುನ್ನ) ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

Former CM of Unified Andhra Pradesh And Former Governor Of Tamil Nadu, K Rosaiah Passed Away On Saturday Morning

ಸುಮಾರು ಏಳು ಬಾರಿ ಬಜೆಟ್​ ಮಂಡನೆ ಮಾಡುವ ದಾಖಲೆ ನಿರ್ಮಿಸಿದ್ದರು. ವೈ.ಎಸ್​. ರಾಜಶೇಖರ್​ ರೆಡ್ಡಿ ನಿಧನದ ನಂತರ ಅವಿಭಜಿತ ಆಂಧ್ರಪ್ರದೇಶದ ಸಿಎಂ ಆಗಿದ್ದರು. ಅಷ್ಟೇ ಅಲ್ಲ, ತಮಿಳುನಾಡು ರಾಜ್ಯಪಾಲರಾಗಿದ್ದರು ಮತ್ತು ಕರ್ನಾಟಕದ ಉಸ್ತುವಾರಿ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕೆ. ರೋಸಯ್ಯ 1933ರ ಜುಲೈ 4ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಜನಿಸಿದ್ದಾರೆ. ಗುಂಟೂರಿನ ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.

ಅವರು ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಮರಿ ಚೆನ್ನಾರೆಡ್ಡಿ ಸರ್ಕಾರದಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಅವಿಭಜಿತ ಆಂಧ್ರಪ್ರದೇಶ ಸರ್ಕಾರದ ಸಂಪುಟದಲ್ಲಿ ಅಪಾರ ಅನುಭವ ಹೊಂದಿದ್ದ ಕೆ. ರೋಸಯ್ಯ 2009ರ ಸೆಪ್ಟೆಂಬರ್​ 13ರಿಂದ, 2010ರ ನವೆಂಬರ್​ 24ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅದಾದ ಬಳಿಕ 2011ರ ಆಗಸ್ಟ್​ 31ರಿಂದ 2016ರ ಆಗಸ್ಟ್​ 30ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ಈ ಮಧ್ಯೆ 2014ರಲ್ಲಿ ಮೂರು ತಿಂಗಳು (ಜೂನ್​- ಆಗಸ್ಟ್​) ಕರ್ನಾಟಕ ಉಸ್ತುವಾರಿ ರಾಜ್ಯಪಾಲರಾಗಿದ್ದರು. ಆಗ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ನಂತರ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಜುಭಾಯಿ ವಾಲಾ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದರು.

ಎನ್. ರಾಮಚಂದ್ರ ರಾವ್ ಸಂತಾಪ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿದ್ದ ಕೋಣಿಜೇಟಿ ರೋಸಯ್ಯರವರ ನಿಧನಕ್ಕೆ ಹೃತ್ಪೂರ್ವಕ ಸಂತಾಪಗಳು. ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ನಾಯಕ, ರಾಷ್ಟ್ರ ನಿರ್ಮಾಣಕ್ಕೆ ನಿಮ್ಮ ಕೊಡುಗೆ ಅಮೂಲ್ಯ ಆಸ್ತಿ ಎಂದು ಎನ್. ರಾಮಚಂದ್ರ ರಾವ್ ಸಂತಾಪ ಸೂಚಿಸಿದ್ದಾರೆ.

ಕೇಂದ್ರ ಸಚಿವ ಕಿಶನ್ ರೆಡ್ಡಿ ಸಂತಾಪ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತಮಿಳುನಾಡಿನ ರಾಜ್ಯಪಾಲರಾದ ಕೆ. ರೋಸಯ್ಯನವರ ನಿಧನಕ್ಕೆ ದುಃಖವಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅಗಲಿದ ಆತ್ಮದ ಸದ್ಗತಿಗಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಕೂ ಮಾಡಿದ್ದಾರೆ.

Recommended Video

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ: ಬದುಕೋ ಭರವಸೆ ಇಲ್ಲ ಎಂದ ಡಾಕ್ಟರ್ | Oneindia Kannada

ಸಚಿವ ಮುರುಗೇಶ ನಿರಾಣಿ ಸಂತಾಪ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ಜಿಯವರ ನಿಧನದಿಂದ ದುಃಖವಾಗಿದೆ. ಅವರು ತಮ್ಮ ಆಡಳಿತಾತ್ಮಕ ಕೌಶಲ್ಯ ಮತ್ತು ಜನಪ್ರಿಯ ಬಜೆಟ್‌ಗಳನ್ನು ಮಂಡಿಸುವ ಮೂಲಕ ಪ್ರಶಂಸೆ ಗಳಿಸಿದ ಸಭ್ಯ ರಾಜಕಾರಣಿ. ದೇವರು ಅವರ ಆತ್ಮಕ್ಕೆ ಆಶೀರ್ವಾದ ನೀಡಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ ಎಂದು ಕರ್ನಾಟಕ ಸಚಿವ ಮುರುಗೇಶ ನಿರಾಣಿ ಸಂತಾಪ ಸೂಚಿಸಿದ್ದಾರೆ.

English summary
Former CM of unified Andhra Pradesh and former governor of Tamil Nadu, K Rosaiah passed away on Saturday morning at Hills star Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X