ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೂರಿನಲ್ಲಿ ವಿಚಿತ್ರ ಕಾಯಿಲೆ; ಸಿಎಂ ಜಗನ್ ಭೇಟಿ

|
Google Oneindia Kannada News

ಅಮರಾವತಿ, ಡಿಸೆಂಬರ್ 07: ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಇದುವರೆಗೂ 340 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರ್ಛೆರೋಗ ಹೋಲುವಂತಹ ಸಮಸ್ಯೆ ಜನರಲ್ಲಿ ಆತಂಕ ಉಂಟು ಮಾಡಿದೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ವಿಜಯವಾಡ ಆಸ್ಪತ್ರೆಗೆ ಭೇಟಿ ನೀಡಿದರು. ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ 300ಕ್ಕೂ ಅಧಿಕ ಜನರಿಗೆ ನಿಗೂಢ ಕಾಯಿಲೆ ಕಾಣಿಸಿಕೊಂಡಿದೆ.

ಆಂಧ್ರದಲ್ಲಿ ವಿಚಿತ್ರ ಕಾಯಿಲೆ ಪತ್ತೆ; ಆಸ್ಪತ್ರೆ ಸೇರಿದ 200 ಜನ!ಆಂಧ್ರದಲ್ಲಿ ವಿಚಿತ್ರ ಕಾಯಿಲೆ ಪತ್ತೆ; ಆಸ್ಪತ್ರೆ ಸೇರಿದ 200 ಜನ!

ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಆಂಧ್ರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿದ್ದಾರೆ. ಎಲೂರಿನ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಅಗತ್ಯ ಸಹಾಯವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

ಕೊರೊನಾಕ್ಕಿಂತ ಭೀಕರ ಈ ರೋಗ, ಎಚ್ಚರಿಕೆ ಅಗತ್ಯ!ಕೊರೊನಾಕ್ಕಿಂತ ಭೀಕರ ಈ ರೋಗ, ಎಚ್ಚರಿಕೆ ಅಗತ್ಯ!

ಇದುವರೆಗೂ 340 ಜನರಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ. 157 ಜನರು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿಯೇ 150 ರೋಗಿಗಳು ದಾಖಲಾಗಿದ್ದಾರೆ.

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಿಸುವಲ್ಲಿ ಕೇರಳ 'ದಿ ಬೆಸ್ಟ್'ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಿಸುವಲ್ಲಿ ಕೇರಳ 'ದಿ ಬೆಸ್ಟ್'

ಶನಿವಾರದಿಂದ ಕಾಣಿಸಿಕೊಂಡ ರೋಗ

ಶನಿವಾರದಿಂದ ಕಾಣಿಸಿಕೊಂಡ ರೋಗ

ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ಶನಿವಾರ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಜನರಲ್ಲಿ ಮೈ-ಕೈ ನೋವು, ತಲೆ ನೋವು ಕಾಣಿಸಿಕೊಳ್ಳುತ್ತಿದ್ದು, ಬಳಿಕ ಅವರು ಮೂರ್ಛೆ ಹೋಗುತ್ತಾರೆ. 10-15 ನಿಮಿಷದಲ್ಲಿ ಅವರು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಾರೆ. ಈ ವಿಚಿತ್ರ ರೋಗದಿಂದ 45 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

340 ಜನರಿಗೆ ವಿಚಿತ್ರ ರೋಗ

340 ಜನರಿಗೆ ವಿಚಿತ್ರ ರೋಗ

ಇದುವರೆಗೂ 340 ಜನರಿಗೆ ಈ ವಿಚಿತ್ರ ರೋಗ ಕಾಣಿಸಿಕೊಂಡಿದೆ. 157 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದರು.

ರೋಗಕ್ಕೆ ವಯೋಮಿತಿಯೇ ಇಲ್ಲ

ರೋಗಕ್ಕೆ ವಯೋಮಿತಿಯೇ ಇಲ್ಲ

ಈ ರೋಗಕ್ಕೆ ವಯೋಮಿತಿಯೇ ಇಲ್ಲ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ರೋಗದ ಲಕ್ಷಣ ಕಾಣಿಸಿಕೊಂಡಿದೆ. ಆದರೆ, ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಿನರಲ್ ವಾಟರ್ ಕುಡಿದವರು ಇದ್ದಾರೆ

ಮಿನರಲ್ ವಾಟರ್ ಕುಡಿದವರು ಇದ್ದಾರೆ

ಎಲೂರು ನಗರ ಸಭೆಯ ವ್ಯಾಪ್ತಿಯಲ್ಲಿ ನೀರು ಕುಡಿದವರಿಗೆ ಮಾತ್ರ ರೋಗದ ಲಕ್ಷಣವಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ನಗರ ಸಭೆ ವ್ಯಾಪ್ತಿಯಿಂದ ಹೊರಗಿರುವವರಿಗೂ ರೋಗ ಹಬ್ಬಿದೆ. ಪ್ರತಿದಿನ ಮಿನರಲ್ ವಾಟರ್ ಕುಡಿಯುತ್ತಿದ್ದವರಿಗೂ ರೋಗದ ಲಕ್ಷಣ ಕಾಣಿಸಿಕೊಂಡಿದೆ.

English summary
Andhra Pradesh CM Jagan Mohan Reddy visited hospital at Vijayawada where unknown disease triggered fear. Over 200 people including women and children admitted hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X