ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ಹುಂಡಿಗೆ ಕೋಟ್ಯಂತರ ದೇಣಿಗೆ ಕೊಟ್ಟ ಎನ್ನಾರೈ

|
Google Oneindia Kannada News

ತಿರುಮಲ, ಆಗಸ್ಟ್ 10: ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನ ಪರಮ ಭಕ್ತರಾದ ಇಬ್ಬರು ಅನಿವಾಸಿ ಭಾರತೀಯರು ಉದಾರವಾಗಿ ದಾನ ಮಾಡಿದ್ದಾರೆ.

ಜಗತ್ತಿನ ಶ್ರೀಮಂತ ದೇಗುಲಕ್ಕೆ ಅಮೇರಿಕಾದ ಇಬ್ಬರು ಅನಿವಾಸಿ ಭಾರತೀಯ ಉದ್ಯಮಿಗಳು 14 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಆದರೆ, ಇಬ್ಬರು ಸ್ನೇಹಿತರು ತಮ್ಮ ಹೆಸರನ್ನು ಹೇಳಲು ಇಚ್ಛಿಸಿಲ್ಲ, ಶ್ರೀ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಕಾಣಿಕೆಯನ್ನು ಎಂದು ಟಿಟಿಡಿ ತಿಳಿಸಿದೆ.

Two US-based NRIs donate Rs 14 crore to Lord Balaji temple in Andhra

ತಮ್ಮ ಕುಟುಂಬ ಸದಸ್ಯರೊಂದಿಗೆ ದೇಗುಲಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಸ್ನೇಹಿತರಿಬ್ಬರು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ನ ವಿಶೇಷಾಧಿಕಾರಿ ಎ.ವಿ. ಧರ್ಮಾರೆಡ್ಡಿ ಅವರಿಗೆ 14 ಕೋಟಿ ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ನೀಡಿದ್ದಾರೆ.

ತಿರುಪತಿ: ವಿಐಪಿ ದರ್ಶನ ರದ್ದು ನಿರ್ಧಾರಕ್ಕೆ ಹೈಕೋರ್ಟ್ ತಡೆ ತಿರುಪತಿ: ವಿಐಪಿ ದರ್ಶನ ರದ್ದು ನಿರ್ಧಾರಕ್ಕೆ ಹೈಕೋರ್ಟ್ ತಡೆ

ಈ ದೇಣಿಗೆ ಮೊತ್ತವನ್ನು ಟಿಟಿಡಿ ಜಾರಿಗೊಳಿಸಿರುವ ಸಾರ್ವಜನಿಕ ಕಲ್ಯಾಣ ಟ್ರಸ್ಟ್ ವತಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಲಲ್ಲಿ ಬಳಸಿಕೊಳ್ಳುವಂತೆ ಕೋರಿದ್ದಾರೆ.

ಇದೇ ಸ್ನೇಹಿತರು ಕಳೆದ ವರ್ಷ ಕೂಡಾ ತಿರುಮಲಕ್ಕೆ 13.5 ಕೋಟಿ ರೂಪಾಯಿಗಳ ಕಾಣಿಕೆ ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
Two US-based NRI entrepreneurs have made a princely donation of Rs 14 crore to the famous hill shrine of Lord Venkateswara at nearby Tirumala in Andhra Pradesh on Friday, a temple official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X