• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಕ್ಕಿ ಎನ್. ಮನೋಜ್ಞ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು

|

ಅಮರಾವತಿ, ಸೆಪ್ಟೆಂಬರ್ 04: ಗುಂಟೂರು ಮೂಲಕ ಸಾಫ್ಟ್‌ವೇರ್ ಇಂಜಿನಿಯರ್ ಎನ್. ಮನೋಜ್ಞ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. 9 ತಿಂಗಳ ಮಗು ತುಳಸಿ ಜೊತೆ ಮನೋಜ್ಞ ಮೃತದೇಹ ಆಗಸ್ಟ್ 29ರಂದು ಪತ್ತೆಯಾಗಿತ್ತು.

29 ವರ್ಷದ ಎನ್. ಮನೋಜ್ಞ ಶವ ಪರೀಕ್ಷೆಗೂ 36 ರಿಂದ 48 ಗಂಟೆಗಳ ಮೊದಲು ಮೃತಪಟ್ಟಿದ್ದಾಳೆ. ತಲೆಗೆ ಆದ ಗಂಭೀರಗಾಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

ಬೆಂಗಳೂರು; 4ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಮನೋಜ್ಞ ಕುಟುಂಬ ಸದಸ್ಯರು ಆಕೆಯ ಪತಿ ಕಲ್ಯಾಣ ಚಂದ್ರ ಮತ್ತು ಅತ್ತೆ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಮೂರು ವರ್ಷಗಳ ಹಿಂದೆ ಮನೋಜ್ಞ ಮತ್ತು ಕಲ್ಯಾಣ ಚಂದ್ರ ವಿವಾಹ ನಡೆದಿತ್ತು.

ಕೊವಿಡ್19: ಕೆಲಸದಿಂದ ವಜಾಗೊಂಡ ಟೆಕ್ಕಿ ದೀಪಾ ಬರೆದ ಪತ್ರ

ಘಟನೆ ವಿವರ: ಗಂಟೂರಿನ ಲಕ್ಷ್ಮೀಪುರಂ ಬಡಾವಣೆಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಮನೋಜ್ಞ, ಕಲ್ಯಾಣ ಚಂದ್ರ 9 ತಿಂಗಳ ತುಳಸಿ ಎಂಬ ಮಗುವಿನ ಜೊತೆ ನೆಲೆಸಿದ್ದರು. ಕಲ್ಯಾಣ ಚಂದ್ರ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು.

ಜಪಾನ್‌ನಿಂದ ಬಂದ ಟೆಕ್ಕಿ ನೋಡಿ ಗಾಬರಿಯಾದ ಯಡಕುರಿಯ ಗ್ರಾಮಸ್ಥರು

ಆಗಸ್ಟ್ 29ರಂದು ಮಜೋಜ್ಞ, 9 ತಿಂಗಳ ಮಗುವಿನ ಜೊತೆ ಅಪಾರ್ಟ್‌ಮೆಂಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅತ್ತೆ ಹೇಳಿಕೆ ನೀಡಿದ್ದರು. ಮಜೋಜ್ಞ ದೇಹದಲ್ಲಿ ಕೋವಿಡ್ ಸೋಂಕು ಸಹ ಪತ್ತೆಯಾಗಿತ್ತು.

ಮನೆಯಲ್ಲಿ ಹೆಚ್ಚುವರಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ತಾಯಿಯ ಬಳಿ ಮನೋಜ್ಞ ಹೇಳಿದ್ದರು. ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು.

ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಮನೋಜ್ಞ ತಲೆಗೆ ಆದ ಗಂಭೀರವಾದ ಗಾಯಯಿಂದಾಗಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗೂ 36 ರಿಂದ 48 ಗಂಟೆಗಳ ಮೊದಲು ಅವರು ಮೃತಪಟ್ಟಿದ್ದಾರೆ. ಪೊಲೀಸರು ಕಲ್ಯಾಣ ಚಂದ್ರ ಮೊಬೈಲ್ ಕರೆಗಳ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

English summary
Twist to Andhra Pradesh software engineer N. Manogna death case. Postmortem report said that 29-year-old Manogna died due to head injury. Manogna found dead along with 9 month old daughter on August 29, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X