ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲು ಸಾಲು ರಜೆ; ತಿರುಮಲ ಭೇಟಿ ಮುಂದೂಡಲು ಭಕ್ತರಿಗೆ ಮನವಿ

|
Google Oneindia Kannada News

ಅಮರಾವತಿ, ಆಗಸ್ಟ್ 14; ವಾರಾಂತ್ಯದ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ತಿರುಪತಿಗೆ ಆಗಮಿಸಿದ್ದಾರೆ. ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಯೋಜನೆಯನ್ನು ಮೂಂದೂಡುವಂತೆ ಟಿಟಿಡಿ ಮನವಿ ಮಾಡಿದೆ.

ಶನಿವಾರ ಒಂದೇ ದಿನ ಸಾವಿರಾರು ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದಾರೆ. ಎರಡನೇ ಶನಿವಾರದ ರಜೆ, ಭಾನುವಾರ ರಜೆ, ಸೋಮವಾರ ಸ್ವಾತಂತ್ರ್ಯ ದಿನಾಚರಣೆ ರಜೆ ಹಿನ್ನಲೆ ತಿರುಪತಿಗೆ ಭಕ್ತರು ಆಗಮಿಸುತ್ತಿದ್ದಾರೆ.

 ಸ್ವಾದಿಷ್ಟ ತಿರುಪತಿ ಲಡ್ಡುಗೆ 307ನೇ ಹುಟ್ಟುಹಬ್ಬದ ಸಂಭ್ರಮ ಸ್ವಾದಿಷ್ಟ ತಿರುಪತಿ ಲಡ್ಡುಗೆ 307ನೇ ಹುಟ್ಟುಹಬ್ಬದ ಸಂಭ್ರಮ

Tirumala Yatra

ತಿರುಮಲದಲ್ಲಿ ಈಗಿರುವ ಭಕ್ತರು ದರ್ಶನ ಪೂರ್ಣಗೊಳಿಸಲು ಇನ್ನೂ ಎರಡು ದಿನ ಬೇಕು ಎಂದು ಅಂದಾಜಿಸಲಾಗಿದೆ. ಅಲ್ಲದೇ ಟಿಟಿಡಿ ಆಗಸ್ಟ್ 21ರ ತನಕ ವಿಐಪಿ ದರ್ಶನದ ಟಿಕೆಟ್ ನೀಡುವುದನ್ನು ರದ್ದುಗೊಳಿಸಿದೆ.

'ದುಡ್ಡು ಅಮೇಲೆ ಕೊಡ್ತೀನಿ, ಮೊದ್ಲು ತಿರುಪತಿ ಲಡ್ಡು ತಗೋ' - ಶಾಂತಾಬಾಯಿ'ದುಡ್ಡು ಅಮೇಲೆ ಕೊಡ್ತೀನಿ, ಮೊದ್ಲು ತಿರುಪತಿ ಲಡ್ಡು ತಗೋ' - ಶಾಂತಾಬಾಯಿ

ಶನಿವಾರ ತಿರುಮಲದಲ್ಲಿ ಭಕ್ತರ ದೊಡ್ಡ ಸಾಲು ಕಂಡುಬಂದಿದೆ. ಭಾನುವಾರ ಇನ್ನಷ್ಟು ಭಕ್ತರು ಆಗಮಿಸಿದರೆ ಜನರನ್ನು ನಿಯಂತ್ರಿಸುವುದು ಸವಾಲಾಗಲಿದೆ. ಈ ಹಿನ್ನಲೆಯಲ್ಲಿ ಟಿಟಿಡಿ ತಿರುಮಲ ಪ್ರವಾಸ ಮುಂದೂಡುವಂತೆ ಭಕ್ತರಿಗೆ ತಿಳಿಸಿದೆ.

Shivamogga-Tirupati Train : ಶಿವಮೊಗ್ಗ-ತಿರುಪತಿ-ಚೆನ್ನೈ ರೈಲಿಗೆ ಹಸಿರು ನಿಶಾನೆ Shivamogga-Tirupati Train : ಶಿವಮೊಗ್ಗ-ತಿರುಪತಿ-ಚೆನ್ನೈ ರೈಲಿಗೆ ಹಸಿರು ನಿಶಾನೆ

ಅಧಿಕಾರಿಗಳ ಮಾಹಿತಿಯಂತೆ ಶನಿವಾರ ರಾತ್ರಿ 8 ಗಂಟೆ ತನಕ 56,546 ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈಗ ಇರುವ ಭಕ್ತರ ದರ್ಶನ ವ್ಯವಸ್ಥೆ ಪೂರ್ಣಗೊಳ್ಳಲು ಇನ್ನೂ ಎರಡು ದಿನ ಬೇಕು ಎಂದು ಟಿಟಿಡಿ ಅಂದಾಜಿಸಿದೆ.

ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಪ್ರಕಟಣೆ ಹೊರಡಿಸಿದ್ದು, 'ಸಾಮಾನ್ಯ ದರ್ಶನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶಿಫಾರಸು ಪತ್ರದ ಮೇಲೆ ವಿಐಪಿ ಪ್ರವೇಶ ನೀಡುವುದನ್ನು ಆಗಸ್ಟ್ 21ರ ತನಕ ರದ್ದುಗೊಳಿಸಲಾಗಿದೆ' ಎಂದು ಹೇಳಿದ್ದಾರೆ.

Tirumala

ಸಾಲು-ಸಾಲು ಭಕ್ತರು; ಶ್ರಾವಣ ಮಾಸ, ವಾರಾಂತ್ಯದ ಸಾಲು-ಸಾಲು ರಜೆ ಹಿನ್ನಲೆಯಲ್ಲಿ ತಿರುಪತಿಗೆ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಈಗ ಆಗಮಿಸಿರುವ ಭಕ್ತರಿಗೆ ವಸತಿ ವ್ಯವಸ್ಥೆ ಒದಗಿಸುವುದು ಸಹ ಸವಾಲಾಗಿದೆ.

ಆಗಸ್ಟ್ 11 ರಿಂದ 15ರ ತನಕ ಸಾಲು-ಸಾಲು ರಜೆ ಇರುವ ಹಿನ್ನಲೆ ಟಿಟಿಡಿ ಭಕ್ತರಿಗೆ ಮೂರು ದಿನಗಳ ಹಿಂದೆಯೇ ಮನವಿಯೊಂದನ್ನು ಮಾಡಿತ್ತು. ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಭಕ್ತರು ತಿರುಮಲ ಭೇಟಿ ಮುಂದೂಡಬೇಕು. ಅಲ್ಲದೇ ಆಗಮಿಸುವ ಭಕ್ತರು ವಸತಿ ವ್ಯವಸ್ಥೆ ಬಗ್ಗೆ ಖಚಿತಪಡಿಸಿಕೊಳ್ಳ ಬೇಕು ಎಂದುದ ಹೇಳಿತ್ತು.

ಆಗಸ್ಟ್ ತಿಂಗಳಿನಲ್ಲಿ ಹಲವು ಸರಣಿ ರಜೆಗಳಿದ್ದು, ತಿರುಮಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೇ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 17ರ ತನಕ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಟಿಟಿಡಿ ಅಂದಾಜಿಸಿದೆ.

ನಿಗದಿತ ಸಮಯದಲ್ಲಿ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಟಿಟಿಡಿ ಹೇಳಿದೆ. ಆದ್ದರಿಂದ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಹಲವು ಗಂಟೆಗಳ ಕಾಲ ಕಾಯುವುದು ಅನಿವಾರ್ಯವಾಗಲಿದೆ.

ಆಂಧ್ರ ಪ್ರದೇಶ ಮಾತ್ರವಲ್ಲ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಬಾರಿ ವಾರಾಂತ್ಯದ ಜೊತೆ ಸಾಲು ಸಾಲು ರಜೆಯೂ ಬಂದಿರುವುದರಿಂದ ಭಕ್ತರ ದಂಡೇ ತಿರುಮಲಕ್ಕೆ ಹರಿದುಬಂದಿದೆ.

ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ; ಟಿಟಿಡಿಯ ಭದ್ರತಾ ಪಡೆ ವಿಐಪಿ ಟಿಕೆಟ್‌ ಅನ್ನು ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ ಮಧ್ಯವರ್ತಿ ಮತ್ತು ಟಿಟಿಪಿ ಸೂಪರಿಟೆಂಡೆಂಟ್ ವಿರುದ್ಧ ದೂರು ನೀಡಿದೆ.

721 ಶ್ರೀವಾರಿ ದರ್ಶನದ ಟಿಕೆಟ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿರುವುದನ್ನು ಟಿಟಿಡಿ ದೇವಾಲಯದ ಕಣ್ಗಾವಲು ಪಡೆ ಪತ್ತೆ ಹಚ್ಚಿದೆ. ಅಲ್ಲದೇ ವಸತಿ ವ್ಯವಸ್ಥೆಯಲ್ಲಿ ಎಸಿ ರೂಂ ನೀಡಲು ಸಹ ಹೆಚ್ಚಿನ ಹಣ ಪಡೆದಿರುವುದು ಖಚಿತವಾಗಿದೆ.

ವಿಜಯವಾಡದ ವಂಶಿ, ಮರುಳಿ ಕೃಷ್ಣ ಮತ್ತು ಇಬ್ಬರು ಮಹಿಳೆಯರ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

English summary
After heavy rush in Tirumala The Tirumala Tirupati Devasthanams (TTD) has urged the devotees to postpone Tirumala Yatra. Thousands of devotees visited Tirumala after series of holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X