• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಹೊಲಕ್ಕೆ ಪ್ಯಾಕ್ ಮಾಡಿದ ಗೊಬ್ಬರ ತಲುಪಿಸಲಿದೆ ಟಿಟಿಡಿ!

|

ಅಮರಾವತಿ, ನವೆಂಬರ್ 05 : ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ರೈತರಿಗೆ ಗೊಬ್ಬರವನ್ನು ನೀಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಬೆಟ್ಟದಲ್ಲಿ ಸಂಗ್ರಹವಾಗುವ ಕಸದಿಂದ ಟಿಟಿಡಿ ಗೊಬ್ಬರವನ್ನು ಉತ್ಪಾದನೆ ಮಾಡುತ್ತಿದೆ.

ಟಿಟಿಟಿಯು ಹಸಿ ಕಸದಿಂದ ಸುಮಾರು 6000 ಟನ್ ಗೊಬ್ಬರವನ್ನು ಉತ್ಪಾದನೆ ಮಾಡಿದೆ. ಮೊದಲ ಹಂತದಲ್ಲಿ ಯಾವುದೇ ಲಾಭವ ಉದ್ದೇಶವಿಲ್ಲದೆ ಗೊಬ್ಬರವನ್ನು ಪ್ಯಾಕ್ ಮಾಡಿ ರೈತರಿಗೆ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರದ ಅನುಮತಿಯನ್ನು ಪಡೆದಿದೆ.

ಆಸ್ತಿ ಮಾರಾಟ ಮಾಡುವ ಟಿಟಿಡಿ ನಿರ್ಧಾರ ತಡೆದ ಆಂಧ್ರ ಸರ್ಕಾರ!

2019ರ ಮೇ ತಿಂಗಳಿನಿಂದ ಕಸ ವಿಲೇವಾರಿ ಬಗ್ಗೆ ಟಿಟಿಡಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ತಿರುಪತಿ ದೇವಾಲಯ, ಬೆಟ್ಟದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಕಾಂಪೋಸ್ಟ್ ಯೂನಿಟ್‌ನಲ್ಲಿ ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ.

ತಮಿಳುನಾಡಿನಲ್ಲಿ 23 ಆಸ್ತಿ ಮಾರಾಟಕ್ಕೆ ಮುಂದಾದ ಟಿಟಿಡಿ

ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಾ. ಕೆ. ಎಸ್. ಜವಾಹರ್ ರೆಡ್ಡಿ ಬುಧವಾರ ಹಸಿಕಸದಿಂದ ಉತ್ಪಾದನೆ ಮಾಡಿದ ಗೊಬ್ಬರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು. ಈ ಗೊಬ್ಬರವನ್ನು ಪ್ಯಾಕ್ ಮಾಡಿ ರೈತರಿಗೆ ತಲುಪಿಸಲಾಗುತ್ತದೆ.

ಹಳೆಯ ನೋಟುಗಳನ್ನೇನು ಮಾಡುವುದು?: ತಿರುಪತಿ ದೇವಸ್ಥಾನಕ್ಕೆ ಚಿಂತೆ

ಪ್ರತಿದಿನ ಸುಮಾರು 30 ರಿಂದ 40 ಟನ್ ಹಸಿ ಕಸ ಸಂಗ್ರಹವಾಗುತ್ತದೆ. ಇದರಿಂದ ಗೊಬ್ಬರವನ್ನು ತಯಾರು ಮಾಡುವ ಘಟಕವನ್ನು ಟಿಟಿಡಿ ಸ್ಥಾಪನೆ ಮಾಡಿದೆ. ಟಿಟಿಡಿಯ ಸದಸ್ಯರಾದ ಸುಧಾ ನಾರಾಯಣಮೂರ್ತಿ ಅವರು ಕೆಲವು ದಿನಗಳ ಹಿಂದೆ ಕಸ ಸಂಸ್ಕರಣಾ ಘಟಕ ಸ್ಥಾಪನೆಗಾಗಿಯೇ 1 ಕೋಟಿ ರೂ. ದೇಣಿಗೆ ಘೋಷಣೆ ಮಾಡಿದ್ದಾರೆ.

ಟಿಟಿಡಿ ಕಸ ಸಂಸ್ಕರಣೆ ಬಗ್ಗೆ ಸಲಹೆ ನೀಡುವಂತೆ ತಜ್ಞರ ಬಳಿ ಮನವಿಯನ್ನು ಮಾಡಿದೆ. ನೀರನ್ನು ಮರುಬಳಕೆ ಮಾಡಿ, ಶೌಚಾಲಯಗಳಲ್ಲಿ ಬಳಕೆ ಮಾಡುವ ಕುರಿತು ಸಹ ಟಿಟಿಡಿ ಅಧ್ಯಯನವನ್ನು ನಡೆಸುತ್ತಿದೆ.

English summary
TTD get the licence from the state government to sell fertiliser to farmers. Fertiliser produced at the solid waste management units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X