ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನದು ಈ ವರ್ಷ 3,096 ಕೋಟಿ ರೂ ಬಜೆಟ್

|
Google Oneindia Kannada News

ತಿರುಪತಿ, ಫೆಬ್ರವರಿ 17:ತಿರುಮಲ ತಿರುಪತಿ ಆಡಳಿತ ಮಂಡಳಿಯು 2022-2023ನೇ ಸಾಲಿನಲ್ಲಿ 3096 ಕೋಟಿ ರೂ. ಬಜೆಟ್ ಮಂಡನೆಗೆ ಗುರುವಾರ ಅನುಮೋದನೆ ನೀಡಿದೆ.

ಮಂಡಳಿಯ ಸಭೆ ಬಳಿಕ ಮಾತನಾಡಿದ ವೈ.ವಿ.ಸುಬ್ಬಾ ರೆಡ್ಡಿ ಅವರು, 'ಪ್ರಸಕ್ತ ಹಣಕಾಸು ವರ್ಷದಲ್ಲಿ ಭಕ್ತರಿಂದ ಸಂದಾಯವಾಗುವ ನಗದು ದೇಣಿಗೆ ಅಂದಾಜು 1000 ಕೋಟಿ ರು., ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಹಣದ ಬಡ್ಡಿಯಿಂದ ಅಂದಾಜು 668.5 ಕೋಟಿ ರು. ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಅಂದಾಜು 365ಕೋಟಿ ರು. ಆದಾಯದ ನಿರೀಕ್ಷೆ ಇದೆ.

ಫೆಬ್ರವರಿಯಲ್ಲಿ ತಿಮ್ಮಪ್ಪನ ವಿಶೇಷ ದರ್ಶನ ಮಾಡುವವರಿಗಾಗಿ ಆನ್‌ಲೈನ್ ಟಿಕೆಟ್ ಬಿಡುಗಡೆಫೆಬ್ರವರಿಯಲ್ಲಿ ತಿಮ್ಮಪ್ಪನ ವಿಶೇಷ ದರ್ಶನ ಮಾಡುವವರಿಗಾಗಿ ಆನ್‌ಲೈನ್ ಟಿಕೆಟ್ ಬಿಡುಗಡೆ

ಉಳಿದಂತೆ ಪ್ರವೇಶ ಶುಲ್ಕ, ವಿಶೇಷ ಪ್ರವೇಶ ಶುಲ್ಕ, ಆನ್‌ಲೈನ್‌ ಟಿಕೆಟ್‌ಗಳಿಂದಾಗಿ ಅಂದಾಜು 300 ಕೋಟಿ ಸಂಗ್ರಹವಾಗಬಹುದು. ಭಕ್ತರಿಗೆ ನೀಡಲಾಗುವ ಟಿಟಿಡಿ ವಸತಿ ಮತ್ತು ಮದುವೆ ಮಂಟಪಗಳಿಂದ ಬರುವ ಆದಾಯ ಸುಮಾರು 95 ಕೋಟಿ ಎಂದು ಅಂದಾಜಿಸಲಾಗಿದೆ. ಮತ್ತು ಭಕ್ತರು ತಮ್ಮ ವ್ರತದ ನೆರವೇರಿಕೆಗಾಗಿ ಅರ್ಪಿಸುವ ಕೂದಲಿನ ಮೇಲಿನ ಹರಾಜು ಆದಾಯ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

TTD Rolls Out Annual Budget of Rs 3,096 Crore For 2022-23

ಭಾರತದ ಶ್ರೀಮಂತ ದೇವರೆಂದೇ ಖ್ಯಾತನಾಗಿರುವ ವೆಂಕಟೇಶ್ವರ ಸ್ವಾಮಿಗೆ ಪ್ರತಿ ವರ್ಷವೂ ಕೋಟ್ಯಂತರ ರೂ. ದೇಣಿಗೆ ಹರಿದುಬರುತ್ತದೆ. ಇದೀಗ ಚೆನ್ನೈನ ವೃದ್ಧೆಯೊಬ್ಬರು ತಿರುಪತಿ ತಿಮ್ಮಪ್ಪನಿಗೆ 3.2 ಕೋಟಿ ರೂ. ನಗದು, 6 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ತಮ್ಮ ಮನೆಯನ್ನು ದಾನ ಮಾಡಿದ್ದಾರೆ. ಮದುವೆಯಾಗದ ಹಿನ್ನೆಲೆಯಲ್ಲಿ ಡಾ. ಪಾರ್ವತಮ್ಮ ಅವರಿಗೆ ಯಾವುದೇ ಕುಟುಂಬಸ್ಥರಿಲ್ಲ. ಹೀಗಾಗಿ, ಅವರು ತಮ್ಮ ಆಸ್ತಿಯನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ದಾನ ಮಾಡಲು ಬಯಸಿದ್ದರು. ಅವರು ಇತ್ತೀಚೆಗೆ ಕೊನೆಯುಸಿರೆಳೆದಿದ್ದರಿಂದ ಅವರ ಸಹೋದರಿ ಪಾರ್ವತಮ್ಮನವರ ಆಸ್ತಿಯನ್ನು ಟಿಟಿಡಿಗೆ ನೀಡಿದ್ದಾರೆ.

ಪಾರ್ವತಮ್ಮ ಎಂಬ 76 ವರ್ಷದ ವೃದ್ಧೆ ತಿರುಮಲ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿದ್ದು, ಕೆಲವು ದಿನಗಳ ಹಿಂದೆ ಮರಣ ಹೊಂದಿದ್ದರು. ಅವರು ತಮ್ಮ ಆಸ್ತಿಯನ್ನು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡವರಿಗೆ ಚಿಕಿತ್ಸೆ ನೀಡುವ ಗುರಿ ಹೊಂದಿರುವ ಎಸ್‌ವಿ ಪ್ರಾಣದಾನ ಟ್ರಸ್ಟ್‌ನ ಸಹಾಯದಿಂದ ಟ್ರಸ್ಟ್‌ನಿಂದ ಪೀಡಿಯಾಟ್ರಿಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಆಕೆಯ ಸಾವಿನ ಬಳಿಕ ಆಕೆಯ ಸಹೋದರಿ ಡಾ. ರೇವತಿ ವಿಶ್ವನಾಥಂ ಅವರು ಪಾರ್ವತಮ್ಮನವರ ಆಸ್ತಿಯನ್ನು ಟಿಟಿಡಿ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ.

ರೇವತಿ ವಿಶ್ವನಾಥಂ, ಅವರ ಪತಿ ಪಿ.ಎ ವಿಶ್ವನಾಥನ್ ಮತ್ತು ತಮ್ಮ ಸಹೋದರಿಯ ಉಯಿಲಿನ ನಿರ್ವಾಹಕ ವಿ. ಕೃಷ್ಣನ್ ಅವರು ಇಂದು ತಿರುಮಲ ದೇವಸ್ಥಾನದಲ್ಲಿ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ ಆಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು. ಇತ್ತೀಚೆಗೆ ನಿಧನರಾದ ಚೆನ್ನೈನ 76 ವರ್ಷದ ಭಕ್ತೆ ಪಾರ್ವತಮ್ಮ ತಿರುಪತಿಯ ವೆಂಕಟೇಶ್ವರನ ದೇಗುಲಕ್ಕೆ ಒಟ್ಟು 9.2 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ದೇಣಿಗೆಯಾಗಿ ನೀಡಲಾಗಿರುವ 9.2 ಕೋಟಿ ರೂ. ಹಣವನ್ನು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯು ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಪಾರ್ವತಮ್ಮನವರ ಸಹೋದರಿ ರೇವತಿ ವಿಶ್ವನಾಥಂ ಟಿಟಿಡಿಗೆ ಮನವಿ ಮಾಡಿದ್ದಾರೆ.

Recommended Video

Sadana Kadana : Priyank Kharge vs P Rajeev | Oneindia Kannada

English summary
Tirumala Tirupati Devasthanams (TTD), the governing body of the ancient hill temple of Lord Venkateswara at Tirumala, rolled out its annual budget for financial year 2022-23 on Thursday with a revenue forecast of Rs 3,096.40 crore, reported news agency PTI quoting senior functionaries of the shrine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X