ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ
ತಿರುಮಲ, ಡಿಸೆಂಬರ್ 12: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ10 ವರ್ಷದೊಳಗಿನ ಮಕ್ಕಳಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಲಾಗಿತ್ತು.
ಆದರೆ ಕೆಲವು ಮಾರ್ಗಸೂಚಿಗಳ ಅನುಸಾರ ಹಿರಿಯರು ಹಾಗೂ ಮಕ್ಕಳು ದೇವಸ್ಥಾನವನ್ನು ಪ್ರವೇಶಿಸಬಹುದು ಎಂದು ತಿಳಿಸಲಾಗಿದೆ.
ರೈತರ ಹೊಲಕ್ಕೆ ಪ್ಯಾಕ್ ಮಾಡಿದ ಗೊಬ್ಬರ ತಲುಪಿಸಲಿದೆ ಟಿಟಿಡಿ!
ಮಾರ್ಚ್ನಲ್ಲಿ ದೇವಸ್ಥಾನವನ್ನು ಬಂದ್ ಮಾಡಲಾಗಿತ್ತು, ಜೂನ್ನಲ್ಲಿ ಮತ್ತೆ ದೇವಸ್ಥಾನ ತೆರೆದ ಬಳಿಕ ಭಕ್ತರಿಂದ ಸಾಕಷ್ಟು ಇ-ಮೇಲ್ ಹಾಗೂ ಕರೆಗಳು ಬಂದಿದ್ದವು. ಕೋರಿಕೆಗಳು, ಕಿವಿ ಚುಚ್ಚುವುದು, ಅನ್ನಪ್ರಾಶಾನ, 60 ವರ್ಷದ ಶಾಂತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುಕೊಡುವಂತೆ ಒತ್ತಾಯ ಕೇಳಿಬರುತ್ತಿದೆ.
ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯು ಹಿರಿಯರು ಹಾಗೂ ಮಕ್ಕಳಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲು ಮುಂದಾಗಿದೆ. ಆದರೆ ಕೆಲವು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಆದರೆ ಅವರ ಆರೋಗ್ಯಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.
ಈ ಮಂದಿ ಕೂಡ ಸಾಮಾನ್ಯ ಸರತಿಯಲ್ಲೇ ಸಂಚರಿಸಬೇಕು ಯಾವುದೇ ವಿಶೇಷ ಸರತಿಯನ್ನು ಕಲ್ಪಿಸಿಕೊಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯ ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದೆ. ಲಾಕ್ ಡೌನ್ ಬಳಿಕ ದೇವಾಲಯವನ್ನು ಭಕ್ತರಿಗೆ ತೆರೆಯಲಾಗಿದ್ದು, ಸಾವಿರಾರು ಜನರು ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಅಕ್ಟೋಬರ್ 2ರ ಭಾನುವಾರ ತಿರುಪತಿ ದೇವಾಲಯದಲ್ಲಿ 2.14 ಕೋಟಿ ರೂ. ಹುಂಡಿ ಕಾಣಿಗೆ ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಇಷ್ಟು ಮೊತ್ತದ ಕಾಣಿಸಿ ಸಂಗ್ರಹ ಆಗಿದ್ದು, ಇದೇ ಮೊದಲು. ಗಾಂಧಿ ಜಯಂತಿ ದಿನದಂದು ರಜೆ ಇದ್ದ ಕಾರಣ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ.
ಲಾಕ್ ಡೌನ್ ಘೋಷಣೆ ಬಳಿಕ ದೇವಾಲಯವನ್ನು ಭಕ್ತರಿಗೆ ಮುಚ್ಚಲಾಗಿತ್ತು. ಜೂನ್ 11ರದು ದೇವಾಲಯದ ಬಾಗಿಲು ತೆರೆದರೂ ದಿನಕ್ಕೆ ಇಷ್ಟು ಭಕ್ತರು ಮಾತ್ರ ಬರಬೇಕು ಎಂದು ನಿರ್ಬಂಧ ಹೇರಲಾಗಿತ್ತು.
ಸೆಪ್ಟೆಂಬರ್ 6ರಂದು 13,486 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ದೇವಾಲಯದ ದಿನದ ಆದಾಯ 1 ಕೋಟಿಗೆ ಮುಟ್ಟಿತ್ತು.