ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಟಿಟಿಡಿಯಿಂದ ಆನ್‌ಲೈನ್ ಟಿಕೆಟ್ ಬಿಡುಗಡೆ

|
Google Oneindia Kannada News

ತಿರುಪತಿ, ಅಕ್ಟೋಬರ್ 23: ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು ವಿಶೇಷ ಆನ್‌ಲೈನ್ ಟಿಕೆಟ್ ಬಿಡುಗಡೆ ಮಾಡಿದೆ.

ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್​​ನನ್ನು ಬಿಡುಗಡೆ ಮಾಡಿದೆ.

 ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಲಸಿಕೆ, ಕೊರೊನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಲಸಿಕೆ, ಕೊರೊನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ

ಕೊವಿಡ್​ 19 ನೆಗೆಟಿವ್​ ವರದಿ ತರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಟಿಟಿಡಿ ಜಾರಿಗೊಳಿಸಿದೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಲು ಹೇರಿರುವ ಭಕ್ತರ ಸಂಖ್ಯಾ ಮಿತಿಯನ್ನು ಹೆಚ್ಚುಗೊಳಿಸಬೇಕು ಎಂಬ ಒತ್ತಡವೂ ಅದರ ಮೇಲೆ ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಬಾರಿ ಕೋಟಾದಲ್ಲಿ ಜಾಸ್ತಿ ಟಿಕೆಟ್​ ಬಿಡುಗಡೆ ಮಾಡಬಹುದಾ ಎಂಬ ಕುತೂಹಲವೂ ಸಹಜವಾಗಿಯೇ ಎದ್ದಿದೆ.

TTD Releases Special Entry Darshan Tickets For Tirumala Temple

ಸದ್ಯ ಒಂದು ದಿನಕ್ಕೆ 30,000ಕ್ಕಿಂತಲೂ ಕಡಿಮೆ ಭಕ್ತರು ತಿರುಮಲ ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ. ಕೊವಿಡ್​ 19 ಸಾಂಕ್ರಾಮಿಕಕ್ಕೂ ಪೂರ್ವ ಈ ದೇವಾಲಯದಲ್ಲಿ ಒಂದು ದಿನಕ್ಕೆ 79-80 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇತ್ತು.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ದರ್ಶನ ಪಡೆಯಲು ಬಯಸುವವರು ಶುಕ್ರವಾರ ಬೆಳಗ್ಗೆ 9 ರಿಂದ ಟಿಕೆಟ್​​ ಕಾಯ್ದಿರಿಸಬಹುದಾಗಿದೆ. ಟಿಕೆಟ್‌ಗಳನ್ನು ವರ್ಚುಯಲ್‌ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಸರ್ವ ದರ್ಶನದ ಟಿಕೆಟ್‌ಗಳನ್ನು ಶನಿವಾರ ಬೆಳಗ್ಗೆ 9 ರಿಂದ ಆನ್‌ಲೈನ್ ಬುಕಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿತ್ಯ 12 ಸಾವಿರ ಟೋಕನ್‌ಗಳು ಲಭ್ಯ ಇದೆ. ಹಾಗೆಯೇ ನವೆಂಬರ್ ಕೋಟಾದ ಸರ್ವ ದರ್ಶನ ಟಿಕೆಟ್​​​ ಸ್ಲಾಟ್ ಅನ್ನು ಭಾನುವಾರ ಬೆಳಗ್ಗೆ 9 ಗಂಟೆಗೆ ತೆರೆಯಲಿದ್ದು, ಭಕ್ತರು ಆನ್​​ಲೈನ್​ ಮೂಲಕ ಬುಕಿಂಗ್​ ಮಾಡಬಹುದು.

ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಗರಿಕರು, ದೈಹಿಕ ವಿಕಲಚೇತನರು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಕಲ್ಪಿಸಲಾಗುವ ವಿಶೇಷ ದರ್ಶನ ಸೌಲಭ್ಯಗಳನ್ನು ನಿಷೇಧಿಸಲಾಗಿದೆ. ತಿರುಪತಿ ತಿರುಮಲ ದೇವಸ್ಥಾನ ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿವೆ.

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ದೈಹಿಕ ವಿಕಲಚೇತನರು ಮತ್ತು ಸಣ್ಣ ಮಕ್ಕಳನ್ನು ಹೊಂದಿರುವ ಪೋಷಕರಿಗೆ ವಿಶೇಷ ದರ್ಶನ ಸೌಲಭ್ಯಗಳನ್ನು ಮಾರ್ಚ್ 20, 2020 ರಿಂದ ನಿಲ್ಲಿಸಲಾಗಿದೆ.

ಆದರೆ ವೆಂಕಟೇಶ್ವರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಭಕ್ತರ ಹಿತವನ್ನು ಗಮನದಲ್ಲಿಟ್ಟುಕೊಂಡು, ಈ ವಿಶೇಷ ದರ್ಶನವನ್ನು ನಿಲ್ಲಿಸಲಾಗಿದೆ.

ಮೇಲೆ ಹೇಳಿದ ಮೂರೂ ವರ್ಗಗಳಿಗೆ ವಿಶೇಷ ದರ್ಶನ ಸೌಲಭ್ಯವನ್ನು ಮತ್ತೆ ಆರಂಭಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ದೇವಸ್ಥಾನ ತಿಳಿಸಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಈ ಮೂರು ವರ್ಗದ ಭಕ್ತರಿಗೆ ವಿಶೇಷ ದರ್ಶನವನ್ನು ಆರಂಭಿಸುವುದು ಸಾಧ್ಯವಿಲ್ಲ ಎಂದು ದೇವಸ್ಥಾನ ಹೇಳಿದೆ. ವಿಶ್ವವಿಖ್ಯಾತ ವೆಂಕಟೇಶ್ವರ ದೇವಸ್ಥಾನಕ್ಕೆ ವಾರ್ಷಿಕವಾಗಿ 36 ಮಿಲಿಯನ್ ಭಕ್ತರು ಆಗಮಿಸುತ್ತಾರೆ.

ಈ ಹಿಂದೆ, ತಿರುಮಲ ತಿರುಪತಿ ದೇವಸ್ಥಾನವು ಸೆಪ್ಟೆಂಬರ್ 26 ರಿಂದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಲು ಭಕ್ತರಿಗೆ ಆನ್‌ಲೈನ್‌ನಲ್ಲಿ ಸರ್ವ ದರ್ಶನ ಟಿಕೆಟ್ ನೀಡಲು ಆರಂಭಿಸಿತ್ತು. ಟೋಕನ್‌ಗಳ ಸಂಖ್ಯೆಯನ್ನು ದಿನಕ್ಕೆ 8,000 ಕ್ಕೆ ಮಿತಿಗೊಳಿಸಲಾಗಿದೆ.

ತಿರುಪತಿ ಟಿಕೆಟ್ ಬುಕ್ಕಿಂಗ್ ಆನ್‌ಲೈನ್ ಸೆಪ್ಟೆಂಬರ್ 25 ರಂದು ಆರಂಭವಾಯಿತು. 8,000 ಮಿತಿಯನ್ನು ಭಕ್ತರ ಹಾಗೂ ತಿರುಪತಿಯ ಸ್ಥಳೀಯ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಿಗದಿಪಡಿಸಲಾಗಿದೆ.

ಇನ್ನು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ನಿರ್ದಿಷ್ಟವಾಗಿ 2 ಡೋಸ್ ಲಸಿಕೆಗಳನ್ನು ಹಾಕಿರುವ ಪ್ರಮಾಣಪತ್ರವನ್ನು ಹೊಂದಿರಬೇಕು. ಇಲ್ಲವಾದಲ್ಲಿ 72 ಗಂಟೆಗಳ ಒಳಗೆ ಪಡೆದಿರುವ ಕೊವಿಡ್ ನೆಗೆಟಿವ್ ವರದಿ ಹೊಂದಿರಬೇಕು. ಇದರ ಜೊತೆ ಭಕ್ತರ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿ ಇರಬೇಕು.

English summary
The Tirumala Tirupati Devasthanams (TTD) has commenced selling tickets for 'special entry darshan' to the Tirumala Venkateswara Temple in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X