ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಹೆಚ್ಚುವರಿ ಟಿಕೆಟ್ ಬಿಡುಗಡೆ

|
Google Oneindia Kannada News

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಾಲಯವು ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರಿಗಾಗಿ ವಿಶೇಷ ಟಿಕೆಟ್​ ಬಿಡುಗಡೆ ಮಾಡಿದೆ.

ವಿಶೇಷ ದರ್ಶನ ಪಡೆಯ ಬಯಸುವವರು 300 ರೂಪಾಯಿ ನೀಡಿ ಈ ಟಿಕೆಟ್​ ಪಡೆದುಕೊಳ್ಳಬೇಕು. ಪ್ರತಿ ದಿನ 3 ಸಾವಿರ ಟಿಕೆಟ್​ಗಳನ್ನು ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡುತ್ತಿದೆ.

ತಿರುಪತಿ ದೇವಾಲಯ ಇನ್ನು ಎರಡು ತಿಂಗಳುಗಳಲ್ಲಿ ಪ್ಲಾಸ್ಟಿಕ್ ಮುಕ್ತತಿರುಪತಿ ದೇವಾಲಯ ಇನ್ನು ಎರಡು ತಿಂಗಳುಗಳಲ್ಲಿ ಪ್ಲಾಸ್ಟಿಕ್ ಮುಕ್ತ

ಕೊರೊನಾ ಎರಡನೇ ಅಲೆಯ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದೇವಸ್ಥಾನ ಆಡಳಿತ ಮಂಡಳಿ 4 ತಿಂಗಳಿಗೆ ಕೇವಲ 5 ಸಾವಿರ ಟಿಕೆಟ್‌ಗಳನ್ನು ಮಾತ್ರ ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ ಉಚಿತ ದರ್ಶನ ಸಂಪೂರ್ಣವಾಗಿ ನಿಂತು ಹೋಗಿದೆ.

 ಕೊರೊನಾ ಸೋಂಕು ಕಡಿಮೆ

ಕೊರೊನಾ ಸೋಂಕು ಕಡಿಮೆ

ಕೊರೊನಾ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಟಿಟಿಡಿ ಜುಲೈ 28ರಿಂದ ದಿನಕ್ಕೆ 3 ಸಾವಿರ ವಿಶೇಷ ಪ್ರವೇಶ ಟಿಕೆಟ್ ನೀಡಿದೆ. ಈ ತಿಂಗಳ 28 ರಿಂದ ಆಗಸ್ಟ್ 30ರವರೆಗೆ ದಿನಕ್ಕೆ 3 ಸಾವಿರ ಟಿಕೆಟ್‌ಗಳ ಹೆಚ್ಚಳದಿಂದ ಸುಮಾರು ಹತ್ತು ಲಕ್ಷ ಟಿಕೆಟ್‌ಗಳು ಭಕ್ತರಿಗೆ ಲಭ್ಯವಾಗಲಿದೆ.

 ತಾಂತ್ರಿಕ ದೋಷ

ತಾಂತ್ರಿಕ ದೋಷ

ಬುಧವಾರ ಬೆಳಗ್ಗೆ 11 ಗಂಟೆಗೆ ಟಿಕೆಟ್ ಬುಕಿಂಗ್ ಆರಂಭಿಸಬೇಕಿತ್ತು ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಿಲ್ಲಿಸಬೇಕಾಯಿತು. ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಟಿಕೆಟ್ ಲಭ್ಯವಿರಲಿಲ್ಲ. ಇದೀಗ ಟಿಟಿಡಿ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. 300 ರೂ. ವಿಶೇಷ ಪ್ರವೇಶ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ.

 ವಿಶೇಷ ದರ್ಶನ ಮಾಡಿಸುವುದಾಗಿ ಹಣ ಸುಲಿಗೆ

ವಿಶೇಷ ದರ್ಶನ ಮಾಡಿಸುವುದಾಗಿ ಹಣ ಸುಲಿಗೆ

ಏತನ್ಮಧ್ಯೆ ವಿಶೇಷ ದರ್ಶನ ಟಿಕೆಟ್ ಹೆಸರಿನಲ್ಲಿ ಮೋಸ ಮಾಡುತ್ತಿರುವ ಏಜೆಂಟರು ಹಾಗೂ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ದೂರುಗಳು ಕೇಳಿಬಂದಿವೆ. ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು, ಈ ಟಿಕೆಟ್​ಗಳನ್ನು ಕೊಳ್ಳುವುದು ಹೇಗೆ ಎನ್ನುವ ಬಗ್ಗೆಯೂ ಟಿಟಿಡಿ ಮಾಹಿತಿ ನೀಡಿದೆ. ಈ ಟಿಕೆಟ್​ಗಳು ಆನ್​ಲೈನ್​ನಲ್ಲಿ ಮಾತ್ರ ಲಭ್ಯವಿದ್ದು, ಆಫ್​ಲೈನ್​ನಲ್ಲಿ ಸಿಗುವುದಿಲ್ಲ.

 ಮೂರು ದಿನದ ಕಾರ್ಯಕ್ರಮ

ಮೂರು ದಿನದ ಕಾರ್ಯಕ್ರಮ

ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಪವಿತ್ರೋತ್ಸವ ಜರುಗಲಿದೆ. ಆಗಸ್ಟ್ 4, 6 ಹಾಗೂ ಆಗಸ್ಟ್ 3ರಂದು ಅಂಕುರಾರ್ಪಣ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ಕೊರೊನಾ ನಿಯಮಗಳನ್ನು ಅನುಸರಿಸಿಯೇ ನಡೆಲಾಗುತ್ತದೆ.

ಹೀಗಾಗಿ ಬೆಳಗ್ಗೆ 11ಕ್ಕೆ ಟಿಟಿಡಿ ವೆಬ್​ಸೈಟ್​ನಲ್ಲಿ ಟಿಕೆಟ್​ ಬಿಡುಗಡೆ ಆಗುತ್ತಿದೆ. ದಿನಕ್ಕೆ ನಿಯಮಿತ ಟಿಕೆಟ್​ಗಳು ಮಾತ್ರ ಮಾರಾಟವಾಗುತ್ತಿರುವುದರಿಂದ ಮೊದಲು ಟಿಕೆಟ್​ ಬುಕ್​ ಮಾಡಿದವರಿಗೆ ಮೊದಲು ಸಿಗಲಿದೆ.

English summary
Tirumala Tirupati Devasthanam (TTD) has increased the quota of Rs. 300 Darshan tickets. It is known that the number of darshans has been significantly reduced since March in the wake of the coronavirus second-wave outbreak. The TTD has allocated only 5,000 tickets for four months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X