ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ; ನಕಲಿ ವೆಬ್‌ ಸೈಟ್‌ನಿಂದ ಭಕ್ತರಿಗೆ ವಂಚನೆ

|
Google Oneindia Kannada News

ಅಮರಾವತಿ, ಜುಲೈ 10 : ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ 20 ನಕಲಿ ವೆಬ್ ಸೈಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಆನ್‌ಲೈನ್ ಸೇವೆಗಳನ್ನು ನೀಡುವುದಾಗಿ ಭಕ್ತರಿಗೆ ವಂಚನೆ ಮಾಡಿವೆ ಎಂದು ವೆಬ್ ಸೈಟ್ ವಿರುದ್ಧ ದೂರು ಕೊಡಲಾಗಿದೆ.

Recommended Video

Nepals bans Indian TV channels,ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್ | Oneindia Kannada

ತಿರುಚನೂರು ಪೊಲೀಸ್ ಠಾಣೆಗೆ ಟಿಟಿಡಿ ನಕಲಿ ವೆಬ್ ಸೈಟ್‌ಗಳ ಬಗ್ಗೆ ದೂರು ಕೊಟ್ಟಿದೆ. ಆಂಧ್ರಪ್ರದೇಶದ ಸರ್ಕಾರಿ ಬಸ್ ಚಾಲಕರೊಬ್ಬರು ಆನ್ ಲೈನ್ ಮೂಲಕ ದರ್ಶನಕ್ಕೆ ಟಿಕೆಟ್ ಬುಕ್ ಮಾಡಲು ಪ್ರಯತ್ನ ನಡೆಸಿದ್ದರು.

 ಸಿಬ್ಬಂದಿಗೆ ಕೊರೊನಾ ಸೋಂಕು: ತಿರುಪತಿ ಗೋವಿಂದರಾಜ ಸ್ವಾಮಿ ದೇವಸ್ಥಾನ ಬಂದ್ ಸಿಬ್ಬಂದಿಗೆ ಕೊರೊನಾ ಸೋಂಕು: ತಿರುಪತಿ ಗೋವಿಂದರಾಜ ಸ್ವಾಮಿ ದೇವಸ್ಥಾನ ಬಂದ್

ಆನ್‌ ಲೈನ್ ದರ್ಶನಕ್ಕೆ ಹಣ ಕಡಿತಗೊಂಡರೂ ಸಮಯದ ಬಗ್ಗೆ ಯಾವುದೇ ಮಾಹಿತಿ ಚಾಲಕನಿಗೆ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡ ಆತ ಟಿಟಿಡಿಗೆ ಮಾಹಿತಿ ನೀಡಿದ್ದ. ಈ ಕುರಿತು ಟಿಟಿಡಿ ಮಾಹಿತಿ ಸಂಗ್ರಹಿಸಿದಾಗ ನಕಲಿ ವೆಬ್ ಸೈಟ್ ಎಂಬುದು ತಿಳಿದುಬಂದಿದೆ.

ಪ್ರಮುಖ ನಗರಗಳಲ್ಲಿ ತಿರುಪತಿ ಲಡ್ಡು ಮಾರಾಟಪ್ರಮುಖ ನಗರಗಳಲ್ಲಿ ತಿರುಪತಿ ಲಡ್ಡು ಮಾರಾಟ

TTD Files Complaint Against 20 Fake Websites

ದೇವಾಲಯದ ಆಡಳಿತ ಮಂಡಳಿ ಪರಿಶೀಲನೆ ನಡೆಸಿದಾಗ 20 ನಕಲಿ ವೆಬ್ ಸೈಟ್‌ಗಳು ಸಿಕ್ಕಿವೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಭಕ್ತರು ನಕಲಿ ವೆಬ್ ಸೈಟ್‌ಗೆ ಭೇಟಿ ಕೊಟ್ಟು ಹಣ ಕಳೆದುಕೊಳ್ಳಬಾರದು ಎಂದು ಟಿಟಿಡಿ ಮನವಿ ಮಾಡಿದೆ.

ತಿರುಪತಿ ದೇವಾಲಯದ ದರ್ಶನ, ಸೇವೆ, ವಸತಿ ವ್ಯವಸ್ಥೆ ಮುಂತಾದ ಮಾಹಿತಿಗಳು www.tirupatibalaji.ap.gov.in ಮತ್ತು www.tirumala.org ವೆಬ್ ಸೈಟ್‌ನಲ್ಲಿ ಲಭ್ಯವಿದೆ. ಇವು ಸರ್ಕಾರ ಮತ್ತು ದೇವಾಲಯಕ್ಕೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ಎಂದು ಆಡಳಿತ ಮಂಡಳಿ ಹೇಳಿದೆ.

ಭಕ್ತರು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ 1800425333333, 18004254141 , 0877-2277777 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

English summary
Tirumala Tirupati Devasthanams (TTD) lodged the complaint against 20 fake websites for cheating devotees in the name of online darshan tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X