ತಿರುಪತಿ ಲಡ್ಡು ಮಾರುತ್ತಿದ್ದ ನಕಲಿ ವೆಬ್ಸೈಟ್ ವಿರುದ್ಧ ದೂರು
ತಿರುಮಲ, ಡಿ.11: ''ವಿಶ್ವದಲ್ಲೆಡೆ ತಿರುಮಲ ತಿರುಪತಿ ದೇಗುಲದ ಪ್ರಸಾದ(ಲಡ್ಡು) ತಲುಪಿಸುತ್ತೇವೆ'' ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಮಾಡಿ ವಂಚನೆ ಮಾಡಿರುವ ನಕಲಿ ವೆಬ್ ಸೈಟ್ ವಿರುದ್ಧ ತಿರುಮಲ ತಿರುಪತಿ ದೇವಸ್ಥಾನ ಸಂಸ್ಥೆ(ಟಿಟಿಡಿ) ದೂರು ನೀಡಿದೆ. ತಿರುಪತಿ ಪೂರ್ವ ವಿಭಾಗದ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ದಾಖಲಾಗಿದೆ.
ಕಳೆದ ವಾರವಷ್ಟೇ ಕಾಣಿಸಿಕೊಂಡ balajiprasadam ಎಂಬ ಹೆಸರಿನ ವೆಬ್ ತಾಣದ ಮೂಲಕ ಈ ವಂಚನೆ ನಡೆದಿದ್ದು, ಭಕ್ತಾದಿಗಳು ಈ ಬಗ್ಗೆ ಗಮನಿಸಬೇಕು, ಇಂಥ ಯಾವುದೇ ವೆಬ್ ತಾಣದ ಮೂಲಕ ಲಡ್ಡು ಪ್ರಸಾದವನ್ನು ಟಿಟಿಡಿ ಹಂಚುತ್ತಿಲ್ಲ ಎಂದು ಟಿಟಿಡಿ ಚೇರ್ಮನ್ ವೈವಿ ಸುಬ್ಬಾರೆಡ್ಡಿ ಪ್ರಕಟಣೆ ಹೊರಡಿಸಿದ್ದಾರೆ.
ಮೇ 25ರಿಂದ ಪ್ರಮುಖ ನಗರಗಳಲ್ಲಿ ತಿರುಪತಿ ಲಡ್ಡು ಮಾರಾಟ
ನಕಲಿ ವೆಬ್ ತಾಣದ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರೆಯಲಿದ್ದು, ಈ ಹಿಂದೆ ದರ್ಶನದ ಟಿಕೆಟ್ ಕಾಯ್ದಿರಿಸುವ ನಕಲಿ ವೆಬ್ ತಾಣ ಪತ್ತೆಯಾಗಿತ್ತು. ಈಗ ಲಡ್ಡು ಮಾರಾಟದ ನಕಲಿ ವೆಬ್ ಸೈಟ್ ಕಾಣಿಸಿಕೊಂಡಿದ್ದು, ವೆಬ್ ತಾಣದ ವಿರುದ್ಧ ತಿರುಪತಿಯಲ್ಲಿ ದೂರು ದಾಖಲಿಸಲಾಗಿದೆ. ಈ ರೀತಿ ಯಾವುದೇ ವಂಚನೆ ಜಾಲ ಪತ್ತೆಯಾದರೆ ಕೂಡಲೇ ಟಿಟಿಡಿ ಕಚೇರಿಯನ್ನು ಸಂಪರ್ಕಿಸುವಂತೆ ಭಕ್ತಾದಿಗಳನ್ನು ಟಿಟಿಡಿ ಚೇರ್ಮನ್ ಕೋರಿದ್ದಾರೆ.
ತಿರುಪತಿ ಲಡ್ಡು ಪೂರೈಕೆ ನಿರಂತರ:
ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನ ಬಂದ್ ಆಗಿದ್ದರೂ ತಿರುಪತಿ ಲಡ್ಡುಗಳನ್ನು ಮಾರಾಟ ಮಾಡಲು ತಿರುಮಲ ತಿರುಪತಿ ದೇವಸ್ಥಾನ ಸಂಸ್ಥೆ ಮುಂದಾಗಿತ್ತು. ಸಬ್ಸಿಡಿ ಬೆಲೆಯಲ್ಲಿ ಲಡ್ಡು ಮಾರಾಟ ಮಾಡಲು ನಿರ್ಧರಿಸಿದ್ದ ದೇವಾಲಯದ ಆಡಳಿತ ಮಂಡಳಿ ಜೂನ್ ತಿಂಗಳಲ್ಲೆ ಪ್ರಮುಖ ನಗರಗಳಲ್ಲಿ ಲಡ್ಡು ಮಾರಾಟಕ್ಕೆ ಚಾಲನೆ ನೀಡಿತ್ತು.
ಬೆಂಗಳೂರು, ಚೆನ್ನೈ, ಹೈದರಾಬಾದ್, ತೆಲಂಗಾಣದ ಟಿಟಿಡಿ ಕಲ್ಯಾಣ ಮಂಟಪಗಳು ಮತ್ತು ಮಾಹಿತಿ ಕೇಂದ್ರಗಳಲ್ಲಿ ಲಡ್ಡು ದೊರೆಯಲಿದೆ. 50 ರೂಪಾಯಿ ಬದಲು 25 ರೂಪಾಯಿಗೆ ಲಡ್ಡು ಸಿಗುವಂತೆ ಮಾಡಲಾಗಿತ್ತು.
ತಿರುಪತಿ; ನಕಲಿ ವೆಬ್ ಸೈಟ್ನಿಂದ ಭಕ್ತರಿಗೆ ವಂಚನೆ
ತಿರುಪತಿಯ ಅಧಿಕೃತ ಸಂಪರ್ಕ ವಿವರ:
ತಿರುಪತಿ ದೇವಾಲಯದ ದರ್ಶನ, ಸೇವೆ, ವಸತಿ ವ್ಯವಸ್ಥೆ ಮುಂತಾದ ಮಾಹಿತಿಗಳು www.tirupatibalaji.ap.gov.in ಮತ್ತು www.tirumala.org ವೆಬ್ ಸೈಟ್ನಲ್ಲಿ ಲಭ್ಯವಿದೆ. ಇವು ಸರ್ಕಾರ ಮತ್ತು ದೇವಾಲಯಕ್ಕೆ ಸಂಬಂಧಿಸಿದ ಅಧಿಕೃತ ವೆಬ್ ಸೈಟ್ ಎಂದು ಆಡಳಿತ ಮಂಡಳಿ ಹೇಳಿದೆ.
ಭಕ್ತರು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ 1800425333333, 18004254141 , 0877-2277777 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ