ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಹೀಗೊಂದು ಗುಡ್‌ನ್ಯೂಸ್

|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 21: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಮ್‌ ಸಮಿತಿ (ಟಿ​ಟಿ​ಡಿ​) ​ಗುಡ್‌ನ್ಯೂಸ್ ನೀಡಿದೆ.

ಇನ್ನುಮುಂದೆ ತಿರುಮಲ ತಿರುಪತಿ ದೇವಸ್ಥಾನಮ್‌ ಸಮಿತಿ (ಟಿ​ಟಿ​ಡಿ​) ​ವೆಂಕ​ಟೇ​ಶ್ವ​ರ ದೇವಸ್ಥಾನದಲ್ಲಿ ದೇವರ ದರ್ಶನದ ಅವಧಿಯನ್ನು ರಾತ್ರಿ 11.30ರವ​ರೆಗೆ ವಿಸ್ತರಿಸಿದೆ.

ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದು ತಿರುಪತಿ ಟ್ರಸ್ಟ್‌ ಸಮಿತಿ!ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದು ತಿರುಪತಿ ಟ್ರಸ್ಟ್‌ ಸಮಿತಿ!

ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಟಿಟಿಡಿ ದರ್ಶನದ ಅವಧಿಯನ್ನು ಹೆಚ್ಚಿಸಿದೆ. ತಿರುಪತಿ ದೇವಸ್ಥಾನದಲ್ಲಿ ನೀಡುವ ಉಚಿತ ದರ್ಶನದ ಟೋಕನ್‌ಗಳ ಪ್ರಮಾಣವನ್ನು ಹೆಚ್ಚಿಸುವುದಾಗಿ ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

TTD Extends Daily Darshan Time At Tirumala Temple

ಈವರೆ​ಗೆ 10 ಗಂಟೆಗೆ ದರ್ಶನದ ಅವಧಿ ಮುಕ್ತಾಯವಾಗುತ್ತಿತ್ತು. ಇನ್ನು 11.30ರವ​ರೆಗೆ ದರ್ಶನ ಭಾಗ್ಯ ಭಕ್ತಾ​ದಿ​ಗ​ಳಿಗೆ ಲಭಿ​ಸ​ಲಿದೆ. ನಂತರ ಏಕಾಂತ ಸೇವೆ ನಡೆ​ಯ​ಲಿ​ದ್ದು, ರಾತ್ರಿ 12 ಗಂಟೆಗೆ ದೇಗು​ಲದ ಬಾಗಿಲು ಮುಚ್ಚ​ಲಾ​ಗು​ತ್ತದೆ ಎಂದು ತಿಳಿ​ಸ​ಲಾ​ಗಿ​ದೆ.

ಈಗ ಪ್ರತಿದಿನ ಸರಾಸರಿ 25 ಸಾವಿರ ಭಕ್ತಾದಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಶನಿವಾರ 29 ಸಾವಿರ ಭಕ್ತರು ಭೇಟಿ ಕೊಟ್ಟಿದ್ದರು. ಹುಂಡಿಯಿಂದ 2.30 ಕೋಟಿ ರು. ಆದಾಯ ಸಂಗ್ರ​ಹ​ವಾ​ಗಿ​ದೆ.

ಸೆಪ್ಟೆಂಬರ್ 9 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಉಚಿತವಾಗಿದೆ. ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ನಡೆಯುತ್ತಿದೆ.

ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಲಾಗಿದ್ದು ಪ್ರತಿದಿನ 2 ಸಾವಿರ ಟೋಕನ್ ವಿತರಿಸಲಾಗುತ್ತಿದೆ. ಶ್ರೀನಿವಾಸ ಕಾಂಪ್ಲೆಕ್ಸ್ ನ ಕೌಂಟರ್ ಗಳಲ್ಲಿ ಟೋಕನ್ ಸಿಗಲಿದೆ. ಈ ಮೊದಲು ಸರ್ವದರ್ಶನಕ್ಕೆ 8 ಸಾವಿರ ಟೋಕನ್ ವಿತರಿಸಲಾಗುತ್ತಿತ್ತು.

ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‍ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‌ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ.

ಆದರೆ ಡಿಆರ್‍ಡಿಒ ತಯಾರಿಸಿರುವ ಬ್ಯಾಗ್‌ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದರು.

ಈ ಹಿಂದೆ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ತಯಾರಿಸಿತ್ತು.

ಹೊಸ ಬ್ಯಾಗ್‌ಗಳಲ್ಲಿ ಲಡ್ಡು ವಿತರಿಸುವ ಕೌಂಟರ್ ಅನ್ನು ಡಿಆರ್‍ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದರು.

ಕೊರೊನಾ ಎರಡನೇ ಅಲೆ ಬಂದ ಬಳಿಕ ಏಪ್ರಿಲ್‌ನಲ್ಲಿ ತಿರುಪತಿಯಲ್ಲಿ ತಿಮ್ಮಪ್ಪನ ಉಚಿತ ದರ್ಶನ ಹಾಗೂ ಪೂಜೆಯನ್ನು ರದ್ದುಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ವೈವಿ ಸುಬ್ಬಾರೆಡ್ಡಿಯವರು ಶೀಘ್ರವೇ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.

ಕೊರೊನಾ ಸೋಂಕಿನಿಂದಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ದೇವಾಲಯ ಬಂದ್ ಆಗಿತ್ತು, ಮಧ್ಯೆ ಮಧ್ಯೆ ಕೆಲವು ಬಾರಿ ತೆರೆಯಲಾಗಿತ್ತು. ಈ ಮೊದಲು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಾಲಯವು ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರಿಗಾಗಿ ವಿಶೇಷ ಟಿಕೆಟ್​ ಬಿಡುಗಡೆ ಮಾಡಿತ್ತು.

ವಿಶೇಷ ದರ್ಶನ ಪಡೆಯ ಬಯಸುವವರು 300 ರೂಪಾಯಿ ನೀಡಿ ಈ ಟಿಕೆಟ್​ ಪಡೆದುಕೊಳ್ಳಬೇಕು. ಪ್ರತಿ ದಿನ 3 ಸಾವಿರ ಟಿಕೆಟ್​ಗಳನ್ನು ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡುತ್ತಿದೆ.

Recommended Video

108 ವಾಹನದಲ್ಲೇ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ತಾಯಿ | Oneindia Kannada

ಕೊರೊನಾ ಎರಡನೇ ಅಲೆಯ ಬಳಿಕ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ದೇವಸ್ಥಾನ ಆಡಳಿತ ಮಂಡಳಿ 4 ತಿಂಗಳಿಗೆ ಕೇವಲ 5 ಸಾವಿರ ಟಿಕೆಟ್‌ಗಳನ್ನು ಮಾತ್ರ ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ ಉಚಿತ ದರ್ಶನ ಸಂಪೂರ್ಣವಾಗಿ ನಿಂತು ಹೋಗಿತ್ತು.

English summary
The TTD extended the darshan timings at Tirumala temple which will be up to 11 pm with effect from Sunday (Sept 19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X