ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ: ಈ ಐದು ದಿನ ವಿಶೇಷ ದರ್ಶನ ರದ್ದು ಪಡಿಸಿದ ಟಿಟಿಡಿ

|
Google Oneindia Kannada News

ಅಮರಾವತಿ, ಡಿ 18: ವರ್ಷಾಂತ್ಯದ ಕೊನೆಯ ವಾರ ಮತ್ತು ಹೊಸವರ್ಷಾರಂಭದ ಮೊದಲನೇ ವಾರದ ಐದು ದಿನಗಳಲ್ಲಿ ವಿಶೇಷ ದರ್ಶನವನ್ನು ರದ್ದುಗೊಳಿಸಿರುವುದಾಗಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

"ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸವರ್ಷ ಮತ್ತು ವೈಕುಂಠ ಏಕಾದಶಿಯ ವೇಳೆ, ಸಾಮಾನ್ಯವಾಗಿ ಭಾರೀ ಜನದಟ್ಟಣೆ ಇರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ" ಟಿಟಿಡಿ ಹೇಳಿದೆ.

ಮೌಢ್ಯದ ಪರಮಾವಧಿ: ಮೋಕ್ಷ ಪ್ರಾಪ್ತಿಗಾಗಿ ತಿರುಪತಿಯಲ್ಲಿ ಭಕ್ತ ಮಾಡಿದ್ದೇನು?ಮೌಢ್ಯದ ಪರಮಾವಧಿ: ಮೋಕ್ಷ ಪ್ರಾಪ್ತಿಗಾಗಿ ತಿರುಪತಿಯಲ್ಲಿ ಭಕ್ತ ಮಾಡಿದ್ದೇನು?

ದೇವಾಲಯದ ವಿಶೇಷ ದಾನಿಗಳು, ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಕಲ್ಪಿಸಲಾಗುತ್ತಿರುವ ಈ ಸ್ಪೆಷಲ್ ದರ್ಶನವನ್ನು ಐದು ದಿನಗಳ ಮಟ್ಟಿಗೆ ರದ್ದು ಪಡಿಸಲಾಗಿದೆ.

TTD Cancelled Special Darshan For Aged, Physically Challenged During New Year 2020

ಡಿಸೆಂಬರ್ 31, ಜನವರಿ 1, ಜನವರಿ 5 ರಿಂದ 7ರ ಅವಧಿಯಲ್ಲಿ ವಿಶೇಷ ದರ್ಶನ ವ್ಯವಸ್ಥೆ ಇರುವುದಿಲ್ಲ. ಜನವರಿ ಆರರಂದು ವೈಕುಂಠ ಏಕಾದಶಿ ಆಚರಿಸಲಾಗುತ್ತದೆ.

"ಈ ಅವಧಿಯಲ್ಲಿ ತಿರುಮಲದಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು, ಹೆಚ್ಚುವರಿ ಬಸ್ಸುಗಳನ್ನು ಓಡಿಸಲಾಗುವುದು" ಎಂದು ಟಿಟಿಡಿ ಹೇಳಿದೆ.

"ಧರ್ಮ ಪ್ರಚಾರದ ಭಾಗವಾಗಿ, ವಿಶೇಷ ವಾರ್ಷಿಕ ಕ್ಯಾಲೆಂಡರ್ ಅನ್ನು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು. ವಿವಿಧ ರೀತಿಯ ಕ್ಯಾಲೆಂಡರುಗಳು ಸಿದ್ದಗೊಳ್ಳುತ್ತಿವೆ" ಎಂದು ತಿರುಮಲ ತಿರುಪತಿ ದೇವಸ್ಥಾನಂ ಹೇಳಿದೆ.

English summary
TTD Cancelled Special Darshan For Aged, Physically Challenged During New Year 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X