ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದ ತಿರುಪತಿ!

|
Google Oneindia Kannada News

ಅಮರಾವತಿ, ಅಕ್ಟೋಬರ್ 06 : ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯ ಹುಂಡಿ ಕಾಣಿಕೆ ಸಂಗ್ರಹದಲ್ಲಿ ಹೊಸ ದಾಖಲೆ ಬರೆದಿದೆ. ಲಾಕ್ ಡೌನ್ ಬಳಿಕ ದೇವಾಲಯವನ್ನು ಭಕ್ತರಿಗೆ ತೆರೆಯಲಾಗಿದ್ದು, ಸಾವಿರಾರು ಜನರು ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಅಕ್ಟೋಬರ್ 2ರ ಭಾನುವಾರ ತಿರುಪತಿ ದೇವಾಲಯದಲ್ಲಿ 2.14 ಕೋಟಿ ರೂ. ಹುಂಡಿ ಕಾಣಿಗೆ ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಇಷ್ಟು ಮೊತ್ತದ ಕಾಣಿಸಿ ಸಂಗ್ರಹ ಆಗಿದ್ದು, ಇದೇ ಮೊದಲು. ಗಾಂಧಿ ಜಯಂತಿ ದಿನದಂದು ರಜೆ ಇದ್ದ ಕಾರಣ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ.

ಹಳೆಯ ನೋಟುಗಳನ್ನೇನು ಮಾಡುವುದು?: ತಿರುಪತಿ ದೇವಸ್ಥಾನಕ್ಕೆ ಚಿಂತೆಹಳೆಯ ನೋಟುಗಳನ್ನೇನು ಮಾಡುವುದು?: ತಿರುಪತಿ ದೇವಸ್ಥಾನಕ್ಕೆ ಚಿಂತೆ

ಲಾಕ್ ಡೌನ್ ಘೋಷಣೆ ಬಳಿಕ ದೇವಾಲಯವನ್ನು ಭಕ್ತರಿಗೆ ಮುಚ್ಚಲಾಗಿತ್ತು. ಜೂನ್ 11ರದು ದೇವಾಲಯದ ಬಾಗಿಲು ತೆರೆದರೂ ದಿನಕ್ಕೆ ಇಷ್ಟು ಭಕ್ತರು ಮಾತ್ರ ಬರಬೇಕು ಎಂದು ನಿರ್ಬಂಧ ಹೇರಲಾಗಿತ್ತು.

ಒಂದೇ ದಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹರಿದು ಬಂದ ಆದಾಯವೆಷ್ಟು? ಒಂದೇ ದಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹರಿದು ಬಂದ ಆದಾಯವೆಷ್ಟು?

ಸೆಪ್ಟೆಂಬರ್ 6ರಂದು 13,486 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ದೇವಾಲಯದ ದಿನದ ಆದಾಯ 1 ಕೋಟಿಗೆ ಮುಟ್ಟಿತ್ತು. ಈಗ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆದಾಯವೂ ಏರಿಕೆಯಾಗುತ್ತಿದೆ.

ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ ಭಕ್ತರ ಗೊಂದಲಗಳಿಗೆ ತೆರೆ ಎಳೆದ ತಿರುಪತಿ ದೇವಾಲಯ

ಅಕ್ಟೋಬರ್ 2ರ ಹುಂಡಿ ಸಂಗ್ರಹ

ಅಕ್ಟೋಬರ್ 2ರ ಹುಂಡಿ ಸಂಗ್ರಹ

ಅಕ್ಟೋಬರ್ 2ರಂದು ಸರ್ಕಾರಿ ರಜೆ ಇದ್ದ ಕಾರಣ 20,228 ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಮರುದಿನ ಹುಂಡಿ ಕಾಣಿಕೆ ಸಂಗ್ರಹದ ಎಣಿಕೆ ಮಾಡಲಾಗಿದ್ದು, 2.14 ಕೋಟಿ ರೂ. ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಇಷ್ಟು ಹುಂಡಿ ಕಾಣಿಕೆ ಸಂಗ್ರಹವಾಗಿದ್ದು ಇದೇ ಮೊದಲು.

1 ಕೋಟಿ ರೂ. ಹುಂಡಿ ಸಂಗ್ರಹ

1 ಕೋಟಿ ರೂ. ಹುಂಡಿ ಸಂಗ್ರಹ

ಸೆಪ್ಟೆಬರ್ 6ರ ಬಳಿಕ ಕೆಲವು ದಿನಗಳು ಹುಂಡಿ ಸಂಗ್ರಹದ ಮೊತ್ತ 1 ಕೋಟಿ ತಲುಪಿತ್ತು. ಆದರೆ, 2 ಕೋಟಿಯ ಗಡಿ ದಾಟಿದ್ದು ಇದೇ ಮೊದಲು. ಸೆಪ್ಟೆಂಬರ್ 9, 10, 13 ಮತ್ತು 14ರಂದು 1 ಕೋಟಿ ರೂ. ಸಂಗ್ರಹವಾಗಿತ್ತು.

6 ಸಾವಿರ ಕೇಶ ಮುಂಡನ

6 ಸಾವಿರ ಕೇಶ ಮುಂಡನ

ತಿರುಪತಿ ದೇವಾಲಯಕ್ಕೆ ಅಕ್ಟೋಬರ್ 2ರಂದು 20,228 ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಒಂದೇ ದಿನ 6,556 ಜನರು ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಲಾಕ್ ಡೌನ್ ಬಳಿಕ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಆದಾಯವೂ ಏರಿಕೆಯಾಗುತ್ತಿದೆ.

ಹೆಚ್ಚಿನ ಆದಾಯದ ನಿರೀಕ್ಷೆ

ಹೆಚ್ಚಿನ ಆದಾಯದ ನಿರೀಕ್ಷೆ

ತಿರುಪತಿ ದೇವಾಲಯದಲ್ಲಿ ಅಕ್ಟೋಬರ್ 16 ರಿಂದ 24ರ ತನಕ ಬ್ರಹ್ಮೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಹೆಚ್ಚಿನ ಆದಾಯ ಬರಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಲ್ಲಿ ಸಿಬ್ಬಂದಿಗೆ ವೇತನ ಕೊಡಲು ಹಣವಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು.

English summary
The Tirumala Tirupati Devasthanams (TTD) has informed on October 2, 2020 Venkateswara temple received hundi income worth Rs 2.14 crore. First time the hundi income in the temple reached Rs 2 crore in one day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X