ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವ್ರ ಊರಲ್ಲಿ ದೇವ್ರದ್ದೇ ಆಟ: ತಿರುಪತಿಗೆ ಎದುರಾದ ಇನ್ನೊಂದು ಭಾರೀ ಸಂಕಷ್ಟ

|
Google Oneindia Kannada News

ತಿರುಪತಿ, ನ 22: ಕಂಡು ಕೇಳರಿಯದ ಮಳೆ, ನೆರೆ ಪ್ರವಾಹದಿಂದ ತತ್ತರಿಸಿರುವ ಹೋಗಿರುವ ತಿರುಪತಿಯಲ್ಲಿ, ಮತ್ತೊಂದು ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಈ ಬಗ್ಗೆ, ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡಿದೆ.

ಈಗಾಗಲೇ, ತಿರುಪತಿಯಿಂದ ತಿರುಮಲಗೆ ಹೋಗುವ ಶ್ರೀವಾರಿ ಮೆಟ್ಟಲುಗಳು ಬಹುತೇಕ ನಾಶವಾಗಿದ್ದು, ತಿರುಪತಿ ನಗರ ಕೆರೆಯಂತಾಗಿದೆ. ಟಿಟಿಡಿ ಭಕ್ತರಿಗೆ ಮನವಿಯನ್ನು ಮಾಡಿದ್ದು, ಸದ್ಯಕ್ಕೆ ದೇವಾಲಯದಲ್ಲಿ ಭಕ್ತರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.

ತಿರುಪತಿಯಲ್ಲಿ ಅಧಿಕ ಮಳೆ: ತಿರುಮಲ ಘಾಟ್ ರಸ್ತೆ ಬಂದ್, ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ತಿರುಪತಿಯಲ್ಲಿ ಅಧಿಕ ಮಳೆ: ತಿರುಮಲ ಘಾಟ್ ರಸ್ತೆ ಬಂದ್, ವಿಮಾನಗಳ ಹಾರಾಟದಲ್ಲೂ ವ್ಯತ್ಯಯ

ತಿರುಪತಿ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಭಾನುವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಇದುವರೆಗೆ ಮಹಾಮಳೆಗೆ ಮೃತ ಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ತಿರುಪತಿಯಲ್ಲಿ ಕಳೆದ ಮೂವತ್ತು ವರ್ಷದಲ್ಲಿ ಸುರಿದ ಭಾರೀ ಮಳೆ ಇದಾಗಿದೆ.

ರಾಜ್ಯದ ಹಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ನೀರಿನಿಂದ ಜಲಾವೃತಗೊಂಡಿದ್ದು, ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೂ, ಸುರಿಯುತ್ತಿರುವ ಮಳೆಯಿಂದಾಗಿ, ಎಲ್ಲಾ ಕೆಲಸಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ನಡುವೆ, ತಿರುಪತಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ.

ಆಂಧ್ರ ಪ್ರದೇಶದಲ್ಲಿ ಮಳೆಗೆ 17 ಮಂದಿ ಬಲಿ, 100ಕ್ಕೂ ಹೆಚ್ಚು ಮಂದಿ ನಾಪತ್ತೆ ಆಂಧ್ರ ಪ್ರದೇಶದಲ್ಲಿ ಮಳೆಗೆ 17 ಮಂದಿ ಬಲಿ, 100ಕ್ಕೂ ಹೆಚ್ಚು ಮಂದಿ ನಾಪತ್ತೆ

 ರಾಮಚಂದ್ರಪುರಂನಲ್ಲಿರುವ ರಾಯಲಚಿರುವು ಅಣೆಕಟ್ಟು

ರಾಮಚಂದ್ರಪುರಂನಲ್ಲಿರುವ ರಾಯಲಚಿರುವು ಅಣೆಕಟ್ಟು

ಆಂಧ್ರ ಪ್ರದೇಶದ ಅತ್ಯಂತ ದೊಡ್ಡ ಅಣೆಕಟ್ಟಿನಲ್ಲಿ ಒಂದಾದ ರಾಮಚಂದ್ರಪುರಂನಲ್ಲಿರುವ ರಾಯಲಚಿರುವು ಅಣೆಕಟ್ಟು ಮಹಾಮಳೆಯಿಂದಾಗಿ ಬಿರುಕು ಬಿಟ್ಟಿದೆ. ಮಳೆಯ ನಡುವೆ ಇನ್ನೊಂದು ಅನಾಹುತದ ಆತಂಕ ಎದುರಾಗಿದ್ದು, ಅಣೆಕಟ್ಟು ಹಲವು ಜಾಗದಲ್ಲಿ ಬಿರುಕು ಬಿಟ್ಟಿರುವ ಸರಕಾರಕ್ಕೆ ದೊಡ್ದ ಚಿಂತೆಯ ವಿಷಯವಾಗಿದೆ. ಐನೂರು ವರ್ಷದ ಹಿಂದಿನ ಅಣೆಕಟ್ಟು ಇದಾಗಿದ್ದು, ಚಿತ್ತೂರು ಜಿಲ್ಲಾಡಳಿತ ಆ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

 ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣ್

ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣ್

ಈ ಅಣೆಕಟ್ಟಿನ ಕೆಳಗೆ ಹದಿನಾರು ಗ್ರಾಮಗಳಿದ್ದು, ಅಲ್ಲಿರುವ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದೆ. ಈ ಅಣೆಕಟ್ಟು ತಿರುಪತಿ ಬಳಿಯಿದ್ದು, ತಕ್ಷಣಕ್ಕೆ ತೊಂದರೆಯಿಲ್ಲದಿದ್ದರೂ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಿದೆ. "ದಾಖಲೆ ಮತ್ತು ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಸಾಕಷ್ಟು ಶೇಖರಣೆ ಮಾಡಿಟ್ಟುಕೊಂಡು, ಗ್ರಾಮ ತೊರೆಯುವಂತೆ ಮನವಿ ಮಾಡಲಾಗಿದೆ, ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ"ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ.ಹರಿನಾರಾಯಣ್ ಹೇಳಿದ್ದಾರೆ.

 ತಿರುಪತಿಯಿಂದ ತಿರುಮಲಕ್ಕೆ ಹೋಗುವ ಘಾಟ್ ಭಾರೀ ಮಳೆಗೆ ಜರ್ಝರಿತ

ತಿರುಪತಿಯಿಂದ ತಿರುಮಲಕ್ಕೆ ಹೋಗುವ ಘಾಟ್ ಭಾರೀ ಮಳೆಗೆ ಜರ್ಝರಿತ

ತಿರುಪತಿಯಿಂದ ತಿರುಮಲಕ್ಕೆ ಹೋಗುವ ಘಾಟ್ ಭಾರೀ ಮಳೆಗೆ ಜರ್ಝರಿತಗೊಂಡಿತ್ತು. ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ರಾಯಲಚಿರುವು ಅಣೆಕ್ಕಟ್ಟಿಗೆ ನೀರಿನ ಒಳಹರಿವು ಒಂದೇ ಸಮನೆ ಏರುತ್ತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ತಿರುಮಲಕ್ಕೆ ಹೋಗುವ ಹೆಚ್ಚಿನ ದಾರಿಗಳು ಬಂದ್ ಆಗಿರುವುದರಿಂದ, ಸದ್ಯಕ್ಕೆ ತಿಮ್ಮಪ್ಪನ ದರ್ಶನಕ್ಕೆ ಹೋಗದೇ ಇರುವುದು ಸೂಕ್ತ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 ಚೆನ್ನೈ-ಕೋಲ್ಕತ್ತ ಹೆದ್ದಾರಿ ಹಾನಿಯಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 16

ಚೆನ್ನೈ-ಕೋಲ್ಕತ್ತ ಹೆದ್ದಾರಿ ಹಾನಿಯಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 16

ಆಂಧ್ರ ಪ್ರದೇಶದಲ್ಲಿ ಮಳೆಯಿಂದ ನಿರ್ಮಾಣವಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಚೆನ್ನೈ-ಕೋಲ್ಕತ್ತ ಹೆದ್ದಾರಿ ಹಾನಿಯಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 16ರ ಪಡುಗುಪಡುವಿನಲ್ಲಿ (ಆಂಧ್ರದ ವ್ಯಾಪ್ತಿ) ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ, ಹೆದ್ದಾರಿಯ ಎರಡೂ ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ಲಾರಿಗಳು ಕ್ಯೂ ನಿಂತಿವೆ.

Recommended Video

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

English summary
cracks have been reported andha Pradesh biggest and oldest dam, Rayala Cheruvu near Tirupati. Cracks appeared in two bunds of the reservoir at Ramachandrapuram with water reportedly leaking out the gaps triggering massive evacuation of residents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X