ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹರಿದು ಬಂದ ಆದಾಯವೆಷ್ಟು?

|
Google Oneindia Kannada News

ತಿರುಪತಿ, ಸೆಪ್ಟೆಂಬರ್ 07: ಕೊರೊನಾ ಲಾಕ್‌ಡೌನ್ ತೆರವುಗೊಂಡ ಬಳಿಕ ದೇವಸ್ಥಾನದ ಬಾಗಿಲು ತೆಗೆದ ಒಂದೇ ದಿನದಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ, ಆದಾಯ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Recommended Video

Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

ಟಿಟಿಡಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಒಂದೇ ದಿನ ದೇಗುಲದ ಹುಂಡಿಗೆ ರೂ.1.02 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ದೇವಸ್ಥಾನಗಳನ್ನು ನಿರ್ಮಿಸಲಿದೆ ಎಚ್‌ಡಿಪಿಪಿಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ದೇವಸ್ಥಾನಗಳನ್ನು ನಿರ್ಮಿಸಲಿದೆ ಎಚ್‌ಡಿಪಿಪಿ

ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗಿದ್ದು, ಒಂದೇ ದಿನ ದೇವಾಲಯದ ಹುಂಡಿಗೆ ರೂ.1 ಕೋಟಿ ಬಂದಿರುವುದಾಗಿ ತಿಳಿಸಿದ್ದಾರೆ. ಶನಿವಾರ ಒಂದೇ ದಿನ ದೇಗುಲಕ್ಕೆ 13,486 ಮಂದಿ ಭಕ್ತರು ಭೇಟಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ.

Tirumala Tirupati Temple Receives Rs 1 Crore Income In One Day

ಕೊರೊನಾ ವೈರಸ್ ವ್ಯಾಪಕವಾದ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ದೇವಾಲಯಗಳನ್ನು ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ವಿಭಾಗವಾದ ಹಿಂದೂ ಧರ್ಮ ಪ್ರಚಾರ ಪರಿಷತ್ (ಎಚ್‌ಡಿಪಿಪಿ) ನಿರ್ಧರಿಸಿದೆ.

ಟಿಟಿಡಿಯ ಶ್ರೀವಾನಿ ಟ್ರಸ್ಟ್ ಈ ನಿರ್ಮಾಣಗಳಿಗೆ ಹಣವನ್ನು ಒದಗಿಸುತ್ತದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ದೇವಾಲಯಗಳ ಪೂರ್ಣಗೊಳಿಸಲು ಐದು ಲಕ್ಷ ಮತ್ತು ಹೊಸ ದೇವಾಲಯಗಳ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಲು ಎಚ್‌ಡಿಪಿಪಿ ನಿರ್ಧರಿಸಿದೆ.

ಎಸ್‌ಎಸ್‌ಎಸ್ ಈ ದೇವಾಲಯಗಳನ್ನು ಮೀನುಗಾರರ ಗ್ರಾಮಗಳು ಮತ್ತು ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ನಿರ್ಮಿಸಲಿದೆ.

English summary
For the first time after the lockdown was lifted, Tirumala Lord Balaji temple received hundi income of Rs 1.02 crores in a day on Saturday, said Tirumala Tirupati Devasthanam (TTD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X