ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮುವಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತಿರುಪತಿ ದೇವಸ್ಥಾನ ಮಂಡಳಿಗೆ ಭೂಮಿ

|
Google Oneindia Kannada News

ತಿರುಮಲ, ಏಪ್ರಿಲ್ 1: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ನಂತರ ಆಡಳಿತ ಮಂಡಳಿಯು, ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ ದೇವಾಲಯ ಹಾಗೂ ಸಂಬಂಧಿಸಿದ ಮೂಲಸೌಕರ್ಯಗಳ ನಿರ್ಮಾಣಕ್ಕೆ ಭೂಮಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಕೊರೊನಾ ಪ್ರಕರಣಗಳ ಏರಿಕೆ; ತಿರುಪತಿ ದೇಗುಲದಲ್ಲಿ ಮತ್ತೆ ನಿರ್ಬಂಧಕೊರೊನಾ ಪ್ರಕರಣಗಳ ಏರಿಕೆ; ತಿರುಪತಿ ದೇಗುಲದಲ್ಲಿ ಮತ್ತೆ ನಿರ್ಬಂಧ

496 ಕನಾಲ್ ಜಾಗದಲ್ಲಿ ದೇವಸ್ಥಾನದೊಂದಿಗೆ ಯಾತ್ರಿಗಳ ಭವನ, ವೇದ ಪಾಠಶಾಲೆ, ಆಧ್ಯಾತ್ಮಿಕ ಹಾಗೂ ಧ್ಯಾನ ಕೇಂದ್ರ, ಕಚೇರಿ, ವಸತಿ ನಿಲಯ, ಪಾರ್ಕಿಂಗ್ ನಿರ್ಮಾಣ ಮಾಡುವುದಾಗಿ ತಿಳಿದುಬಂದಿದೆ. ಟಿಟಿಡಿಗೆ 40 ವರ್ಷಗಳ ಅವಧಿಯ ಭೋಗ್ಯಕ್ಕೆ ಭೂಮಿಯನ್ನು ನೀಡಲಾಗಿದೆ.

Tirumala Tirupathi Board To Get Land For Temple Construction In Jammu And Kashmir

ಮುಂದಿನ ದಿನಗಳಲ್ಲಿ ಇಲ್ಲಿ ವೈದ್ಯಕೀಯ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಆರ್ಥಿಕ ಚಟುವಟಿಕೆಗಳ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ದೇಗುಲ ನಿರ್ಮಾಣವಾಗಲಿದ್ದು, ಒಮ್ಮೆ ಈ ದೇಗುಲ ಅಭಿವೃದ್ಧಿಯಾದರೆ, ಮಾತಾ ವೈಷ್ಣೋದೇವಿ, ಅಮರನಾಥ ದೇಗುಲದ ಜೊತೆಗೆ ಈ ದೇಗುಲವೂ ಧಾರ್ಮಿಕ ಕೇಂದ್ರವಾಗಲಿದೆ.

English summary
Tirumala Tirupathi Board to get land for temple construction in Jammu and Kashmir for lease,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X