ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.12ರಿಂದ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ವಿತರಣೆ ಸ್ಥಗಿತ

|
Google Oneindia Kannada News

ತಿರುಮಲ, ಏಪ್ರಿಲ್ 8: ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇಗುಲ ಮಂಡಳಿಯು ಸರ್ವ ದರ್ಶನ ಟೋಕನ್‌ ವಿತರಣೆಯನ್ನು ಏಪ್ರಿಲ್ 12ರಿಂದ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದೆ.

ಏಪ್ರಿಲ್ 11ಕ್ಕೆ ಟೋಕನ್ ನೀಡುವುದನ್ನು ಕೊನೆಗೊಳಿಸುವುದಾಗಿ ಮಾಹಿತಿ ನೀಡಿದೆ.

ಕೊರೊನಾ ಪ್ರಕರಣಗಳ ಏರಿಕೆ; ತಿರುಪತಿ ದೇಗುಲದಲ್ಲಿ ಮತ್ತೆ ನಿರ್ಬಂಧಕೊರೊನಾ ಪ್ರಕರಣಗಳ ಏರಿಕೆ; ತಿರುಪತಿ ದೇಗುಲದಲ್ಲಿ ಮತ್ತೆ ನಿರ್ಬಂಧ

"ತಿರುಪತಿ ನಗರದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿವೆ. ಭೂದೇವಿ ಕಾಂಪ್ಲೆಕ್ಸ್ ಹಾಗೂ ವಿಷ್ಣು ನಿವಾಸಂನಲ್ಲಿ ಟೋಕನ್‌ಗಳನ್ನು ತೆಗೆದುಕೊಳ್ಳಲು ಸಾವಿರಾರು ಜನರು ಕಾಯುತ್ತಾ ನಿಲ್ಲಬೇಕಾಗುತ್ತದೆ. ಇಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಟಿಟಿಡಿ ತಿಳಿಸಿದೆ.

 Tirumala Temple Suspends Sarva Darshan Tokens From April 12 Due To Increase In Corona Cases

ಭಕ್ತರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟೋಕನ್ ರದ್ದುಗೊಳಿಸಲಾಗಿದೆ ಎಂದು ಹೇಳಿದೆ. ಆನ್‌ಲೈನ್‌ನಲ್ಲಿ ನೀಡುವ ಟೋಕನ್‌ಗಳ ವಿತರಣೆ ಮುಂದುವರೆಯಲಿದೆ. ಆನ್‌ಲೈನ್‌ನಲ್ಲಿ ಪ್ರತಿದಿನ 15 ಸಾವಿರ ಟೋಕನ್‌ಗಳನ್ನು ನೀಡಲಾಗುತ್ತದೆ.

ಕಳೆದ ತಿಂಗಳು ಸರ್ವದರ್ಶನ ಟೋಕನ್‌ಗಳ ಸಂಖ್ಯೆಯನ್ನು ಟಿಟಿಡಿ 22 ಸಾವಿರದಿಂದ 15 ಸಾವಿರಕ್ಕೆ ಇಳಿಸಿತ್ತು. ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಮಾಸ್ಕ್‌ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲವೆಂದರೆ ದೇವಸ್ಥಾನಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಟಿಟಿಡಿ ಹೆಚ್ಚುವರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ತಿಳಿಸಿದ್ದರು.

English summary
Tirumala Temple suspends sarva darshan tokens from april 12 over rising number of coronavirus cases
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X