ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಕುಂಠ ಏಕಾದಶಿ: ತಿರುಪತಿಯಲ್ಲಿ ಭಕ್ತರಿಗೆ 10 ದಿನ ದರ್ಶನಕ್ಕೆ ಅವಕಾಶ

|
Google Oneindia Kannada News

ಅಮರಾವತಿ, ಜನವರಿ 11: ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗೆ 10 ದಿನ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಿರುಮಲ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜನವರಿ 13 ರಂದು ವೈಕುಂಠ ಏಕಾದಶಿ.

ಜನವರಿ 14 ರಂದು ವೈಕುಂಠ ದ್ವಾದಶಿ ಕೈಂಕರ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಬುಧವಾರ ಮಧ್ಯರಾತ್ರಿ ನಂತರ ವೈಕುಂಠ ದ್ವಾರಗಳು ತೆರೆಯಲಿವೆ. ಧನುರ್ಮಾಸದ ಸಂದರ್ಭದಲ್ಲಿ, 12 ರಂದು ಮಧ್ಯರಾತ್ರಿ ನಂತರ ಏಕಾಂತದಲ್ಲಿ ಧನುರ್ಮಾಸ ವಿಧಿಗಳನ್ನು ಅರ್ಚಕರು ನಿರ್ವಹಿಸಲಿದ್ದಾರೆ. ನಂತರ 1.45 ಗಂಟೆಗೆ ಭಕ್ತಾದಿಗಳು ವೈಕುಂಠ ದ್ವಾರ ದರ್ಶನಕ್ಕೆ ಅನುಮತಿ ನೀಡಲಿದ್ದಾರೆ.

ಇನ್ನೊಂದೆಡೆ 13 ರಂದು ಬೆಳಗ್ಗೆ 9 ರಿಂದ 10ರವರೆಗೆ ಶ್ರೀದೇವಿ- ಭೂದೇವಿ ಸಮೇತ ಮಲಯಪ್ಪಸ್ವಾಮಿಯ ಸ್ವರ್ಣ ರಥ ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಯಲಿದೆ. ವೈಕುಂಠ ಏಕಾದಶಿ ನಿಮಿತ್ತ ಮಂಗಳವಾರ ತಿಮ್ಮಪ್ಪ ದೇಗುಲದಲ್ಲಿ ತಿರುಮಂಜನ (ದೇವಸ್ಥಾನದ ಶುದ್ಧೀಕರಣ) ನಡೆಯಲಿದೆ. ಬಳಿಕ ಭಕ್ತರಿಗೆ ದರ್ಶನ ಪ್ರಾರಂಭವಾಗುತ್ತದೆ.

Tirumala: 10-Day Vaikunta Dwara Darshan Begins on Jan 13

ಇಸ್ಕಾನ್ ದೇವಳಕ್ಕೆ ನಿರ್ಬಂಧ: ಇನ್ನು ವೈಕುಂಠ ಏಕಾದಶಿಯಂದು ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಹೆಚ್ಚುತ್ತಿರುವ ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ತಿರುಮಲದ ಇತಿಹಾಸದಲ್ಲಿಯೇ ಕಳೆದ ವರ್ಷ ಮೊದಲ ಬಾರಿಗೆ ಹತ್ತು ದಿನಗಳ ಕಾಲ ವೈಕುಂಠ ದ್ವಾರ ತೆರೆದು ಭಕ್ತರಿಗೆ ದರ್ಶನ ಕಲ್ಪಿಸಿತ್ತು. ಈ ಬಾರಿಯೂ ಇದೇ 13 ರಿಂದ 22ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲು ಟಿಟಿಡಿ ನಿರ್ಧರಿಸಿದೆ.

ಈ ಹಿನ್ನಲೆಯಲ್ಲಿ ಟಿಟಿಡಿ ಈಗಾಗಲೇ ಭಕ್ತರಿಗೆ 300 ರೂಪಾಯಿ ವಿಶೇಷ ಪ್ರವೇಶ ದರ್ಶನ, ಟೈಮ್‌ ಸ್ಲಾಟ್‌ ಸರ್ವ ದರ್ಶನ ಟೋಕನ್, ಶ್ರೀವಾಣಿ ಬ್ರೇಕ್ ದರ್ಶನ ಟಿಕೆಟ್, ವರ್ಚುವಲ್ ಸೇವಾ ಟಿಕೆಟ್‌ಗಳನ್ನು ನಿಗದಿಪಡಿಸಿದೆ.

ತಿರುಮಲ ತಿರುಪತಿ ದೇವಸ್ಥಾನಂ ಅಥವಾ ವೆಂಕಟೇಶ್ವರ ದೇವಸ್ಥಾನವು ಆಂಧ್ರಪ್ರದೇಶದ ಚಿತ್ತೋರ್ ಜಿಲ್ಲೆಯಲ್ಲಿದೆ. ಭಕ್ತರು ಈಗ ದರ್ಶನಕ್ಕಾಗಿ www.tirupatibalaji.ap.gov.in ಅಧಿಕೃತ ವೆಬ್‌ಸೈಟ್‌ನಿಂದ ತಿರುಮಲ ತಿರುಪತಿ ದೇವಸ್ಥಾನಂನ ಟಿಕೆಟ್ ಅನ್ನು 300 ರೂಗಳಿಗೆ ಖರೀದಿಸಬಹುದು.

ಕೊವಿಡ್-19 ಮುನ್ನೆಚ್ಚರಿಕೆಗಳ ಭಾಗವಾಗಿ, ದರ್ಶನ ಪಡೆಯುವ ಸಮಯದಲ್ಲಿ ದರ್ಶನದ ದಿನಾಂಕಕ್ಕಿಂತ 72 ಗಂಟೆಗಳ ಮೊದಲು ಪಡೆದ ಲಸಿಕೆ ಪ್ರಮಾಣಪತ್ರ (2 ಡೋಸ್) (ಅಥವಾ) ಕವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಲು ಯಾತ್ರಾರ್ಥಿಗಳಿಗೆ ವಿನಂತಿಸಲಾಗಿದೆ. ಯಾತ್ರಾರ್ಥಿಗಳು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಮೇಲಿನದನ್ನು ಗಮನಿಸಲು ಮತ್ತು ಟಿಟಿಡಿ ಆಡಳಿತದೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನಂ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ವರದರಾಜ ಸ್ವಾಮಿಯನ್ನು ಪೂಜಿಸಲು ಮತ್ತು ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಪ್ರವಾಸಿಗರು ದೇವಾಲಯಕ್ಕೆ ಬರುತ್ತಾರೆ,. ಸಂದರ್ಶಕರು ಅಧಿಕೃತ ವೆಬ್‌ಸೈಟ್‌ನಿಂದ 300 ರೂ.ಗೆ ಆನ್‌ಲೈನ್ ಲಡ್ಡು ಬುಕಿಂಗ್‌ಗೆ ಅರ್ಜಿ ಸಲ್ಲಿಸಬಹುದು.

ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಸಂದರ್ಶಕರು ತಮ್ಮ ತಿರುಪತಿ ಲಾಗಿನ್ ವಿವರಗಳಾದ ನೋಂದಣಿ ಐಡಿ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಟಿಟಿಡಿ ಆನ್‌ಲೈನ್ ಬುಕಿಂಗ್ ಸ್ಥಿತಿಯನ್ನು ಪರಿಶೀಲಿಸಬಹುದು. ಅವರು ತಮ್ಮ ನೋಂದಣಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಅಧಿಕೃತ ವೆಬ್‌ಸೈಟ್ ಅನ್ನು ಬಳಸಬಹುದು.

ತಿರುಮಲ ತಿರುಪತಿ ದೇವಸ್ಥಾನದ ದೇವದರ್ಶನಕ್ಕಾಗಿ ಟಿಟಿಡಿ 300 ಟಿಕೆಟ್‌ಗಳ ಆನ್‌ಲೈನ್ ಬುಕಿಂಗ್ ಪ್ರಾರಂಭವಾಗಿದೆ. ಈ TTD ಆನ್‌ಲೈನ್ ಬುಕಿಂಗ್ 24ನೇ ಡಿಸೆಂಬರ್ 2021 ರಿಂದ ಪ್ರಾರಂಭವಾಗಿದೆ.

ಈ TTD ರೂ 300 ಟಿಕೆಟ್ ಆನ್‌ಲೈನ್ ಬುಕಿಂಗ್ ಜನವರಿ 2022 ದೇವ ದರ್ಶನಕ್ಕೆ ತೆರೆದಿರುತ್ತದೆ. ತಿರುಪತಿ ಬಾಲಾಜಿ ದರ್ಶನಕ್ಕೆ ಇಚ್ಛಿಸುವ ಭಕ್ತರು ಟಿಟಿಡಿ 300 ರೂ ಟಿಕೆಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ತಿರುಮಲ ತಿರುಪತಿ ಬಾಲಾಜಿ ದರ್ಶನ್ ಆನ್‌ಲೈನ್ ಟಿಕೆಟ್ ಬುಕಿಂಗ್ ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಮಾಡಬಹುದು.

English summary
Elaborate arrangements are being made for the 10-day Vaikunta Dwara Darshan, the most sought after darshan at Tirumala temple, beginning from Vaikunta Ekadasi on January 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X