ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ; ನಲ್ಲಮಲ ಅರಣ್ಯದಲ್ಲಿ 6 ತಿಂಗಳಿನಲ್ಲಿ ಮೂರು ಹುಲಿ ಸಾವು

|
Google Oneindia Kannada News

ಅಮರಾವತಿ, ಮೇ 15: ಆಂಧ್ರಪ್ರದೇಶದ ನಾಗಾರ್ಜುನಸಾಗರ್ ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದ ಆತ್ಮಕೂರ್ ವಿಭಾಗದ ಬೈರ್ಲುಟಿಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದೆ. ಕಳೆದ ಮೇ 10ರ ಮಂಗಳವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅರಣ್ಯದ ಪ್ರದೇಶದಲ್ಲಿ ಹುಲಿಯ ಶವ ಪತ್ತೆಯಾಗಿದೆ.

ನಾಗಾರ್ಜುನಸಾಗರ ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎನ್‌ಎಸ್‌ಟಿಆರ್) ಕಳೆದ ಆರು ತಿಂಗಳಲ್ಲಿ ಮೂರು ಹುಲಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Breaking; ಮೈಸೂರು, 3 ಮರಿಗೆ ಜನ್ಮ ನೀಡಿದ ಬಿಳಿ ಹುಲಿ Breaking; ಮೈಸೂರು, 3 ಮರಿಗೆ ಜನ್ಮ ನೀಡಿದ ಬಿಳಿ ಹುಲಿ

ಈ ಕುರಿತು ಆತ್ಮಕೂರ್ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಅಲೆಂಚನ್ ತೇರನ್ ಮಾತನಾಡಿ, "ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಹುಲಿ ಸಾವಿನ ಕುರಿತು ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹುಲಿ ಮತ್ತು ಇನ್ನೊಂದು ಪ್ರಾಣಿಯ ನಡುವಿನ ಕಾದಾಟವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ" ಎಂದರು.

Tiger Found Dead In Andhra Pradeshs Nallamala Forest

ಕಳೆದ ವರ್ಷ ರಾಜ್ಯ ಅರಣ್ಯ ಇಲಾಖೆ ನಡೆಸಿದ ಹುಲಿ ಗಣತಿಯಲ್ಲಿ ಈ ಹುಲಿಯ ಫೋಟೋ ತೆಗೆಯಲಾಗಿತ್ತು ಎಂದು ಡಿಎಫ್‌ಒ ಉಲ್ಲೇಖಿಸಿದ್ದಾರೆ. ನಾಲ್ಕು ವರ್ಷಗಳಿಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹುಲಿ ಗಣತಿ ಅಂದಾಜನ್ನು ನಡೆಸಲಾಗಿದ್ದರೂ ಪ್ರತಿ ವರ್ಷ ರಾಜ್ಯ ಅರಣ್ಯ ಇಲಾಖೆಯು ತಮ್ಮ ಸಮೀಕ್ಷೆ ಮತ್ತು ವಿಶ್ಲೇಷಣೆಯ ಭಾಗವಾಗಿ ಪ್ರಾಣಿಗಳ ವೀಡಿಯೊಗಳು ಮತ್ತು ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.

ಕಳೆದ ಆರು ತಿಂಗಳಲ್ಲಿ ಮೀಸಲು ಪ್ರದೇಶದಲ್ಲಿ ಮೂರನೇ ಹುಲಿ ಮೃತಪಟ್ಟಿದೆ. ಇದು ಪ್ರಕೃತಿಯಲ್ಲಿ ಕಂಡುಬರುವ ಸಾಮಾನ್ಯ ಸಂಗತಿಯಾಗಿರುವುದರಿಂದ ಸಾವನ್ನು ಅಸ್ವಾಭಾವಿಕ ಎಂದು ಪರಿಗಣಿಸಲಾಗುವುದಿಲ್ಲ ಎಂದು ಡಿಎಫ್‌ಒ ಹೇಳಿದರು. ಪ್ರಾಣಿಗಳ ನಡುವೆ ಮಾರಣಾಂತಿಕವಾಗಿ ಪರಿಣಮಿಸುವ ಪ್ರಾದೇಶಿಕ ಕಾದಾಟಗಳು ಹೆಚ್ಚಾಗುತ್ತಿವೆ ಎಂದು ಅರಣ್ಯಾಧಿಕಾರಿ ತಿಳಿಸಿದರು.

ನಲ್ಲಮಲ್ಲ ಬೆಟ್ಟಗಳಲ್ಲಿರುವ ನಾಗಾರ್ಜುನಸಾಗರ ಹುಲಿ ಸಂರಕ್ಷಿತ ಪ್ರದೇಶವು 5,927 ಚದರ ಕಿ. ಮೀ. ವಿಸ್ತಾರವಾಗಿದೆ. ಮೀಸಲು ಪ್ರದೇಶವು ಆಂಧ್ರಪ್ರದೇಶದ ಅವಿಭಜಿತ ಕರ್ನೂಲ್, ಗುಂಟೂರು ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಮೆಹಬೂಬ್‌ನಗರ ಮತ್ತು ನಲ್ಗೊಂಡ ಜಿಲ್ಲೆಗಳಲ್ಲಿ ಹರಡಿದೆ.

ಈ ಪ್ರದೇಶದಲ್ಲಿ 2018-19ರಲ್ಲಿ ಹುಲಿಗಳ ಸಂಖ್ಯೆ ಸುಮಾರು 47 ಎಂದು ಅಂದಾಜಿಸಲಾಗಿತ್ತು. ನಂತರದ ವರ್ಷದಲ್ಲಿ 63ಕ್ಕೆ ಏರಿತು. 2020-2021ರಲ್ಲಿ ಅದರ ಸಂಖ್ಯೆಯು ಸರಿಸುಮಾರು 65ಕ್ಕೆ ಏರಿತು.

English summary
A tiger was found dead in Andhra Pradesh Nallamala forest of Nandyal district. It is the third such death reported in the last 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X