• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರದಲ್ಲಿ ಲಾರಿ, ಕಾರು ಡಿಕ್ಕಿ, ಬೆಂಕಿಗೆ ಮೂವರು ಆಹುತಿ

|
Google Oneindia Kannada News

ಪ್ರಕಾಶಂ, ಮೇ 17: ಲಾರಿಯೊಂದು ಕಾರಿಗೆ ಗುದ್ದಿದ ಪರಿಣಾಮ ಬೆಂಕಿಹೊತ್ತಿಕೊಂಡು ಮೂವರು ಸಾವನ್ನಪ್ಪಿದ ಘೋರ ಘಟನೆ ಆಂಧ್ರದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂನಲ್ಲಿರುವ ಮೇಟಮೇದಪಲ್ಲಿ ರಸ್ತೆಯಲ್ಲಿ ಸಂಭವಿಸಿರುವುದು ವರದಿಯಾಗಿದೆ. ಮಂಗಳವಾರ ಸಂಜೆ 6 ಗಂಟೆಗೆ ಈ ದುರಂತ ಘಟಿಸಿರುವುದು ತಿಳಿದುಬಂದಿದೆ.

"ಕಮ್ಮಂನಿಂದ ಮಾರ್ಕಾಪುರಂನತ್ತ ಕಾರು ಹೋಗುತ್ತಿತ್ತು. ಅತ್ತ ಮರ್ಕಾಪುರಂನಿಂದ ಟ್ರಕ್ ಕಮ್ಮಂನತ್ತ ಬರುತ್ತಿತ್ತು. ಇವೆರಡು ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದವು" ಎಂದು ಮಾರ್ಕಾಪುರಂ ಸರ್ಕಲ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿದ್ದ ಎಲ್ಲಾ ಮೂವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.

   Team India ಸೇರಲು ಈ ಆಟಗಾರರಿಗೆ ಅವಕಾಶ | Oneindia Kannada

   ನೆರೆಯ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಕಳೆದ ವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ರಸ್ತೆಯಲ್ಲಿ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟ ಘಟನೆಯೂ ಸಂಭವಿಸಿತ್ತು.

   ಮೇ 9ರಂದು ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೊಂಡು 25 ಜನರಿಗೆ ಗಾಯವಾದ ಘಟನೆ ವರದಿಯಾಗಿತ್ತು. (ಒನ್ಇಂಡಿಯಾ ಸುದ್ದಿ)

   English summary
   Three people charred to death as car and truck collide on highway Markapuram in Andhra Prakasam district on May 17th evening.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X