ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಾಖಪಟ್ಟಣಂ ತೈಲ ಸಂಸ್ಕರಣಾ ಘಟಕದಲ್ಲಿ ಕಾಣಿಸಿಕೊಂಡ ದಟ್ಟಹೊಗೆ, ಆತಂಕ

|
Google Oneindia Kannada News

ವಿಶಾಖಪಟ್ಟಣಂ, ಮೇ 22: ನಗರದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಘಟಕದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು ಕೆಲಕಾಲ ಜನತೆಯನ್ನು ಆತಂಕಕ್ಕೀಡುಮಾಡಿತ್ತು.

Recommended Video

ಪಾವಗಡ ತಾಲುಕಿನ ದೊಮ್ಮತಮರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ , ಎದೆ ಜಲ್ ಅನ್ನೋ ವಿಡಿಯೋ | Oneindia Kannada

ಇತ್ತೀಚೆಗಷ್ಟೇ ಇಲ್ಲಿನ ಎಲ್‌ಜಿ ಪಾಲಿಮರ್ಸ್ ಸ್ಥಾವರದಲ್ಲಿ ಮಾರಣಾಂತಿಕ ಅನಿಲ ಸೋರಿಕೆ ಉಂಟಾಗಿ ಜನರಲ್ಲಿ ದಿಗಿಲುಂಟು ಮಾಡಿತ್ತು.

ವಿಶಾಖಪಟ್ಟಣಂ ದುರಂತ: 13 ಸಾವಿರ ಟನ್ ಸ್ಟೈರೀನ್ ದಕ್ಷಿಣ ಕೊರಿಯಾಕ್ಕೆ ವಾಪಸ್ವಿಶಾಖಪಟ್ಟಣಂ ದುರಂತ: 13 ಸಾವಿರ ಟನ್ ಸ್ಟೈರೀನ್ ದಕ್ಷಿಣ ಕೊರಿಯಾಕ್ಕೆ ವಾಪಸ್

ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿತ್ತು.

Thick Smoke From Oil Refinery Triggers Panic Among Locals In Vizag

ಇದೀಗ ಎಚ್‌ಪಿಸಿಎಲ್‌ನ 'ಕ್ರೂಡ್ ಡಿಸ್ಟಿಲೇಷನ್ ಯುನಿಟ್‌'ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದಿಂದ ಕಂಡು ಬಂದಿರುವ ಹೊಗೆಯಾಗಿದೆ. ಹೊಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಂಟ್-3ರಲ್ಲಿ ತಾಂತ್ರಿಕ ದೋಷ ಹಾಗೂ ಟೆಂಪರೇಚರ್‌ನಲ್ಲಿ ಬದಲಾವಣೆ ಇದ್ದ ಕಾರಣ ಘಟಕ ಆರಂಭಿಸಿದ ತಕ್ಷಣ ಹೊಗೆ ಕಾಣಿಸಿಕೊಂಡಿತ್ತು.

ತಕ್ಷಣವೇ ಅದನ್ನು ಸರಿಪಡಿಸಲಾಗಿದೆ. ದೊಡ್ಡ ದೋಷವೇನಲ್ಲ ಎಂದು ಪಿಆರ್‌ಓ ಕಾಳಿದಾಸ್ ತಿಳಿಸಿದ್ದಾರೆ.ಎಲ್‌ಜಿ ಪಾಲಿಮರ್ಸ್‌ನಲ್ಲಿ ಆದ ಪ್ರಮಾದದಿಂದ ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆ.

ಭಾರತದ ನಾಲ್ಕು ಕಾರ್ಖಾನೆಗಳಲ್ಲಿ ದುರಂತಕ್ಕೆ ಇದೇನಾ ಕಾರಣ?ಭಾರತದ ನಾಲ್ಕು ಕಾರ್ಖಾನೆಗಳಲ್ಲಿ ದುರಂತಕ್ಕೆ ಇದೇನಾ ಕಾರಣ?

ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ, ಬೆಳಗ್ಗಿನ ವೇಳೆ ವಾಕಿಂಗ್ ಬಂದವರು ಮಕ್ಕಳು ರಸ್ತೆಯಲ್ಲಿ ಓಡಾಡುವವರು ನಿಂತಲ್ಲೇ ಕುಸಿದು ಬಿದ್ದಿದ್ದರು. ಜೊತೆಗೆ ಈ ವಿಷ ಅನಿಲ ಸೇವನೆಯಿಂದ ನಾಯಿಗಳು ಮತ್ತು ಹಸುಗಳು ಪಕ್ಷಿಗಳು ಕೂಡ ಸಾವನ್ನಪ್ಪಿದ್ದವು.

English summary
Thick plums of smoke seen rising from Hindustan Petroleum Corporation Limited plant in the city on Thursday afternoon Triggered panic among locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X