ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ರೆಡ್ಡಿ ಕಿಂಗ್ ಮೇಕರ್! NDA ಬೆಂಬಲಿಸುವಂತೆ ಅಮಿತ್ ಶಾ ಮನವಿ?

|
Google Oneindia Kannada News

Recommended Video

ಎನ್ಡಿಎನ ಬೆಂಬಲಿಸುವಂತೆ ವೈ ಎಸ್ ಜಗನ್ ಮೋಹನ್ ರೆಡ್ಡಿಯನ್ನ ಸಂಪರ್ಕಿಸಿದ ಅಮಿತ್ ಶಾ

ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ವೈ ಎಸ್ ಆರ್ ಕಾಂಗ್ರೆಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಬಿಜೆಪಿ ಆ ಪಕ್ಷದ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ಮೂಲಗಳ ಪ್ರಕಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷವು 25 ರಲ್ಲಿ 25 ಕ್ಷೇತ್ರಗಳನ್ನೂ ಗೆಲ್ಲಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದರಿಂದಾಗಿ ಕೇಂದ್ರದ ಎನ್ ಡಿಎ ಮೈತ್ರಿಕೂಟಕ್ಕೂ ವೈ ಎಸ್ ಆರ್ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದು ಅನಿವಾರ್ಯವಾಗಲಿದೆ.

ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ: ನಾಯ್ಡು ತ್ಯಾಗಕ್ಕೆ ಸಿದ್ಧರಾದರೆ?ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ: ನಾಯ್ಡು ತ್ಯಾಗಕ್ಕೆ ಸಿದ್ಧರಾದರೆ?

ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಜಗನ್ ರೆಡ್ಡಿ ಅವರೊಂದಿಗೆ ಮಾತುಕತೆಗೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಜಗನ್ ಮೋಹನ್ ರೆಡ್ಡಿ ಅವರು "ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ"ದ ಬೇಡಿಕೆಯೊಂದಿಗೆ ಎನ್ ಡಿಎ ಯನ್ನು ಬೆಂಬಲಿಸಲು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದೂ ಮೂಲಗಳು ತಿಳಿಸಿವೆ.

There are rumours of talk between Amit Shah and Jaganmohan Reddy

ಜಗನ್, ಕೆಸಿಆರ್ ಮೋದಿ ಅವರ ಮುದ್ದಿನ ನಾಯಿಗಳು: ಚಂದ್ರಬಾಬು ನಾಯ್ಡು ವಿವಾದಜಗನ್, ಕೆಸಿಆರ್ ಮೋದಿ ಅವರ ಮುದ್ದಿನ ನಾಯಿಗಳು: ಚಂದ್ರಬಾಬು ನಾಯ್ಡು ವಿವಾದ

ಆದರೆ ಈ ಕುರಿತು ವೈಎಸ್ ಆರ್ ಕಾಂಗ್ರೆಸ್ ನ ನಾಯಕರು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಜಗನ್ ರೆಡ್ಡಿ ಮತ್ತು ಅಮಿತ್ ಶಾ ಅವರ ನಡುವೆ ಮಾತುಕತೆ ನಡೆದಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವೈಎಸ್ ಆರ್ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

English summary
Lok Sabha elections 2019: There are some rumours quoted that BJP national president Amit Shah has met Andhra Pradesh's YSRCP chief Jaganmohan Reddy to discuss about post poll alliance with NDA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X