ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಯರ ಮಂತ್ರಾಲಯ' ಕ್ಷೇತ್ರ ಕರ್ನಾಟಕಕ್ಕೆ: ಏನಿದು ಆಂಧ್ರದಲ್ಲಿ ಹೊಸ ಬೇಡಿಕೆ?

|
Google Oneindia Kannada News

ಅಮರಾವತಿ ಹೊರತಾಗಿ ಇನ್ನೆರಡು ರಾಜಧಾನಿಯನ್ನು ಘೋಷಿಸಲು ಹೊರಟಿರುವ ಆಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ನಡೆಗೆ, ವಿರೋಧ ಪಕ್ಷವಾದ ತೆಲುಗುದೇಶಂ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ಆಂಧ್ರಕ್ಕೆ ಅಮರಾವತಿ ಒಂದೇ ರಾಜಧಾನಿಯಾಗಿರಬೇಕೆಂದು ತೆಲುಗುದೇಶಂ ನೇತೃತ್ವದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಹೋರಾಟಕ್ಕಾಗಿ, ರೈತರು ತಮ್ಮ ಚಿನ್ನಾಭರಣಗಳನ್ನು ಹರಾಜಿಗೆ ಇಡಿ ಎಂದು ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ.

ರೈತರ ಹೋರಾಟಕ್ಕಾಗಿ ಎಂತಹ 'ತ್ಯಾಗ' ಮಾಡಿದ ಚಂದ್ರಬಾಬು ನಾಯ್ಡು ಪತ್ನಿ!ರೈತರ ಹೋರಾಟಕ್ಕಾಗಿ ಎಂತಹ 'ತ್ಯಾಗ' ಮಾಡಿದ ಚಂದ್ರಬಾಬು ನಾಯ್ಡು ಪತ್ನಿ!

ಈ ನಡುವೆ ಬಳ್ಳಾರಿ/ರಾಯಚೂರು ಗಡಿಯಲ್ಲಿರುವ ಆಂಧ್ರಕ್ಕೆ ಸೇರಿದ ಜಾಗಗಳನ್ನು ಕರ್ನಾಟಕಕ್ಕೆ ಸೇರಿಸಿಬಿಡಿ ಎಂದು ತೆಲುಗುದೇಶಂ ಪಕ್ಷದ ಮುಖಂಡರೊಬ್ಬರು ಮನವಿ ಮಾಡಿದ್ದಾರೆ.

ಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನ

ಆಂಧ್ರಪ್ರದೇಶದ ಕರ್ನೂಲ್ ಭಾಗದ ತೆಲುಗುದೇಶಂ ಮುಖಂಡರೊಬ್ಬರು ಬಹಿರಂಗವಾಗಿ, ಮಂತ್ರಾಲಯ ಸೇರಿದಂತೆ, ಗಡಿ ಭಾಗವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಮನವಿಯನ್ನು ಮಾಡಿದ್ದಾರೆ.

ಆಂಧ್ರಕ್ಕೆ ಮೂರು ರಾಜಧಾನಿ, ಸಿಎಂ ಜಗನ್ ಗೆ ಮನವಿ

ಆಂಧ್ರಕ್ಕೆ ಮೂರು ರಾಜಧಾನಿ, ಸಿಎಂ ಜಗನ್ ಗೆ ಮನವಿ

ಆಂಧ್ರಕ್ಕೆ ಮೂರು ರಾಜಧಾನಿಯನ್ನು ಮಾಡಿದರೆ, ನಮಗೆಲ್ಲಾ ಇದರಿಂದ ತೀವ್ರ ತೊಂದರೆಯಾಗುತ್ತದೆ. ನಮಗೆ ಅದರ ಸಹವಾಸವೇ ಬೇಡ, ಕರ್ನೂಲ್ ಭಾಗವನ್ನು ಕರ್ನಾಟಕಕ್ಕೆ ಸೇರಿಸಿಬಿಡಿ ಎಂದು ಸಿಎಂ ವೈ.ಎಸ್.ಜಗನ್ ಗೆ ಮನವಿ ಮಾಡಲು ಟಿಡಿಪಿ ಮುಂದಾಗಿದೆ. ಮಂತ್ರಾಲಯ ಕ್ಷೇತ್ರ ಕರ್ನೂಲ್ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ.

ಮಂತ್ರಾಲಯ ಕ್ಷೇತ್ರ ಕರ್ನಾಟಕಕ್ಕೆ

ಮಂತ್ರಾಲಯ ಕ್ಷೇತ್ರ ಕರ್ನಾಟಕಕ್ಕೆ

ಈ ಹಿಂದೆ ಅಧೋನಿ ಸೇರಿದಂತೆ, ಹೇಗೂ ಈ ಭಾಗಗಳು ಕರ್ನಾಟಕಕ್ಕೆ ಸೇರಿದ್ದವು. ನಮ್ಮ ಹಲವು ಸಂಪ್ರದಾಯಗಳು, ಕರ್ನಾಟಕದಲ್ಲಿ ಆಚರಿಸುವಂತೆ ಇದೆ. ಶ್ರೀಕ್ಷೇತ್ರ ಮಂತ್ರಾಲಯಕ್ಕೆ ಬರುವ ಭಕ್ತರು ಕರ್ನಾಟಕದವರೇ. ಹಾಗಾಗಿ, ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ, ಎಂದು ಮಾಜಿ ಟಿಡಿಪಿ ಶಾಸಕ ಮತ್ತು ಪಕ್ಷದ ಮಂತ್ರಾಲಯ ಉಸ್ತುವಾರಿ ಪಿ.ತಿಕ್ಕಾರೆಡ್ಡಿ ಹೇಳಿದ್ದಾರೆ.

ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ರಾಜಕೀಯ ಮೇಲಾಟ

ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ರಾಜಕೀಯ ಮೇಲಾಟ

ಆಂಧ್ರದಲ್ಲಿ ವೈ.ಎಸ್.ಜಗನ್ ಅಧಿಕಾರ ಸ್ವೀಕರಿಸಿದ ನಂತರ, ಹಿಂದಿನ ಸರಕಾರದ ಹಲವು ಯೋಜನೆಗಳನ್ನು ರದ್ದುಪಡಿಸುವುದೋ ಅಥವಾ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲಿ, ಮೂರು ರಾಜಧಾನಿಯ ಪ್ರಸ್ತಾವನೆ ಕೂಡಾ. ಇದು, ಆಡಳಿತ ಮತ್ತು ವಿರೋಧ ಪಕ್ಷದ (ಟಿಡಿಪಿ) ನಡುವೆ ತೀವ್ರ ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿದೆ.

ಕರ್ನಾಟಕಕ್ಕೆ ಸೇರಿಸಿಬಿಡಿ, ನೆಮ್ಮದಿಯಿಂದ ಇರುತ್ತೇವೆ

ಕರ್ನಾಟಕಕ್ಕೆ ಸೇರಿಸಿಬಿಡಿ, ನೆಮ್ಮದಿಯಿಂದ ಇರುತ್ತೇವೆ

ಆಡಳಿತಾತ್ಮಕ ರಾಜಧಾನಿಯಾಗಿ ವಿಶಾಖಪಟಣಂ, ಹೈಕೋರ್ಟ್ ಗಾಗಿ ಕರ್ನೂಲ್ ಮತ್ತು ಅಮರಾವತಿ ನಗರಗಳನ್ನು ರಾಜಧಾನಿಗಳನ್ನಾಗಿ ಮಾಡಲು ವೈ.ಎಸ್. ಜಗನ್ ನಿರ್ಧರಿಸಿದ್ದಾರೆ. "ಈ ಭಾಗದಿಂದ ವಿಶಾಖಪಟ್ಟಣಂಗೆ ಹೋಗಿ ಬರಲು ಎರಡು ದಿನ ಬೇಕು, ಅಷ್ಟು ದೂರದ ರಾಜಧಾನಿ ನಮಗೆ ಬೇಡ. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಬಿಡಿ, ನೆಮ್ಮದಿಯಿಂದ ಇರುತ್ತೇವೆ" ಎಂದು ತಿಕ್ಕಾರೆಡ್ಡಿ ಹೇಳಿದ್ದಾರೆ.

ಮಂತ್ರಾಲಯ ಕ್ಷೇತ್ರ ಕರ್ನಾಟಕಕ್ಕೆ: ಏನಿದು ಆಂಧ್ರದಲ್ಲಿ ಹೊಸ ಕೂಗು?

ಮಂತ್ರಾಲಯ ಕ್ಷೇತ್ರ ಕರ್ನಾಟಕಕ್ಕೆ: ಏನಿದು ಆಂಧ್ರದಲ್ಲಿ ಹೊಸ ಕೂಗು?

ನಾವೆಲ್ಲಾ ಕನ್ನಡ ಭಾಷೆಯನ್ನೇ ಮಾತನಾಡುತ್ತೇವೆ. ಬಳ್ಳಾರಿಯಲ್ಲಿ ಹೊಸಪೇಟೆ ತುಂಗಭದ್ರಾ ಡ್ಯಾಂ ಇದೆ. ನಮಗೆ ಕೃಷಿಗೆ ಅನುಕೂಲವಾಗುತ್ತದೆ. ನಮ್ಮ ಕ್ಷೇತ್ರವನ್ನು (ಮಂತ್ರಾಲಯ) ಕರ್ನಾಟಕಕ್ಕೆ ಸೇರಿಸಿ ಎಂದು ಟಿಡಿಪಿ ಮುಖಂಡ ತಿಕ್ಕಾರೆಡ್ಡಿ ಹೇಳಿದ್ದಾರೆ. ಮಂತ್ರಾಲಯ, ರಾಯಚೂರಿನಿಂದ 44 ಕಿ.ಮೀ ದೂರದಲ್ಲಿದೆ.

English summary
TDP Leader demanded to merge the Mantralayam constituency into Karnataka. He said, we would launch a protest along with all parties for the cause.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X