• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರಪ್ರದೇಶದಲ್ಲಿ ವಾಹನ ಪಲ್ಟಿಯಾಗಿ ಆರು ಮಂದಿ ದುರ್ಮರಣ

|

ಅಮರಾವತಿ, ಅಕ್ಟೋಬರ್.30: ಆಂಧ್ರ ಪ್ರದೇಶದಲ್ಲಿ ತಡರಾತ್ರಿ ನಡೆದ ದುರ್ಘಟನೆಯಲ್ಲಿ ಆರು ಮಂದಿ ಪ್ರಾಣ ಬಿಟ್ಟಿದ್ದಾರೆ. ಮದುವೆಗೆ ತೆರಳಿ ವಾಪಸ್ಸಾಗುತ್ತಿದ್ದ ವಾಹನವು ಪೂರ್ವ ಗೋದಾವರಿ ಜಿಲ್ಲೆಯ ಥಂತಿಕೊಂಡಾ ಗ್ರಾಮದ ಬಳಿ ಪಲ್ಟಿಯಾಗಿದೆ.

ಕತ್ತಲಿನಲ್ಲಿ ವಾಹನ ಮೇಲೆ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ದುರ್ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಮದುವೆಗೆ ಹೋಗಿದ್ದ ಒಂದೇ ಕುಟುಂಬದ 15 ಮಂದಿಯನ್ನು ಹೊತ್ತು ಸಾಗಿದ್ದ ವಾಹನವು ಪಲ್ಟಿಯಾದ ಹಿನ್ನೆಲೆ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರು; ಭೀಕರ ಅಪಘಾತ, ನವ ದಂಪತಿ ದುರ್ಮರಣ

ಪೂರ್ವ ಗೋದಾವರಿ ಜಿಲ್ಲೆಯ ಥಂತಿಕೊಂಡಾ ಗ್ರಾಮದ ಬಳಿ ವಾಹನ ಪಲ್ಟಿ ಘಟನೆಯಿಂದ ಗಾಯಗೊಂಡದವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ಸಂತಸದಲ್ಲಿದ್ದ ಕುಟುಂಬದಲ್ಲಿ ಸೂತಕ:

ಗುರುವಾರವಷ್ಟೇ ಸಂಭ್ರಮದಿಂದ ಮದುವೆ ಕಾರ್ಯವನ್ನು ಮುಗಿಸಿಕೊಂಡು ಒಂದೇ ಕುಟುಂಬದ 15 ಮಂದಿ ತಮ್ಮೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿದ್ದು, ಆರು ಮಂದಿ ದುರ್ಘಟನೆಯಲ್ಲಿ ಸಾವಿನ ಮನೆ ಸೇರಿದ್ದಾರೆ. ಸಂಭ್ರಮದಿಂದ ನಲಿಯುತ್ತಿದ್ದ ಕುಟುಂಬದಲ್ಲಿ ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

English summary
Six People Died After Their Van Overturned In Andhra Pradesh's Thantikonda Village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X