ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ದೇವಾಲಯ ಇನ್ನು ಎರಡು ತಿಂಗಳುಗಳಲ್ಲಿ ಪ್ಲಾಸ್ಟಿಕ್ ಮುಕ್ತ

|
Google Oneindia Kannada News

ಹೈದರಾಬಾದ್, ಜುಲೈ 21: ಭಾರತದಲ್ಲಿರುವ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪ ದೇವಾಲಯ ಕೂಡಾ ಒಂದು. ಪ್ರತಿ ದಿನ ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವ ಈ ದೇವಾಲಯವುಬಹಳ ಪ್ರಸಿದ್ಧ ದೇವಾಲಯವಾಗಿದೆ.

ಇದೀಗ ತಿರುಪತಿ ವೆಂಕಟರಮಣ ದೇವಾಲಯವು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರಸ್ನೇಹಿಯಾಗುವತ್ತ ಆಸಕ್ತಿ ತೋರಿಸುತ್ತಿದೆ. ಈಗ ಪ್ಲಾಸ್ಟಿಕ್ ಅನ್ನು ತೆಗೆದುಹಾಕುವತ್ತ ಗಮನಹರಿಸಿರುವ ತಿರುಪತಿ ತಿಮ್ಮಪ್ಪ ದೇವಾಲಯ ಭಕ್ತರಿಗೆ ವಿತರಿಸುವ ಲಡ್ಡುವಿಗೂ ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಬದಲಾಗಿ ಪರಿಸರ ಸ್ನೇಹಿ ಪ್ಯಾಕೆಟ್‌ಗಳನ್ನು ಬಳಸುತ್ತಿದೆ.

ಮುಂದಿನ ಎರಡು ತಿಂಗಳುಗಳಲ್ಲಿ ಇಡೀ ದೇವಾಲಯವನ್ನು ಪ್ಲಾಸ್ಟಿಕ್ ಮುಕ್ತ ದೇವಾಲಯವನ್ನಾಗಿ ನಿರ್ಮಿಸಲು ಮುಂದಾಗಿದೆ.

ಭಕ್ತನ ದೇಣಿಗೆ: ತಿರುಪತಿಗೆ 4 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ! ಭಕ್ತನ ದೇಣಿಗೆ: ತಿರುಪತಿಗೆ 4 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ!

ಪ್ಲಾಸ್ಟಿಕ್ ಆಟಿಕೆಗಳು, ಪ್ಲಾಸ್ಟಿಕ್ ಬ್ಯಾಗ್‌ಗಳು, ಆಹಾರ ತೆಗೆದುಕೊಂಡು ಹೋಗಲು ಬಳಸುವ ಯಾವುದೇ ಪ್ಲಾಸ್ಟಿಕ್‌ಗಳಿಗೆ ನಿಷೇಧ ಹೇರಲಾಗಿದೆ. ಜೂಟ್‌ ಕಾರ್ಪೋರೇಶನ್ ಆಫ್ ಇಂಡಿಯಾ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಸೆಣಬಿನ ನಾರಿನ ಬ್ಯಾಗ್‌ ಕೌಂಟರ್ ತೆರೆದಿದ್ದು, ಕಳೆದ ಎರಡು ತಿಂಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ನಾರಿನ ಬ್ಯಾಗ್‌ಗಳು ಮಾರಾಟವಾಗಿದೆ.

Single-Use Plastic Banned In Tirumala; Temple City To Go Plastic-Free In Two Months

ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಲು ಮತ್ತು ತಿರುಮಲ ಆವರಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಈ ಪ್ರಯತ್ನಗಳು ನಡೆಯುತ್ತಿವೆ.

ಪ್ರಸಾದಂ- ಪೇಪರ್ ಪೆಟ್ಟಿಗೆಗಳು, ಪೇಪರ್ ಬ್ಯಾಗ್‌ಗಳು ಮತ್ತು ಈಗ ಸೆಣಬಿನ ಚೀಲಗಳಿಗೆ ಪ್ಲಾಸ್ಟಿಕ್ ಅಲ್ಲದ ಪ್ಯಾಕೇಜಿಂಗ್ ವಸ್ತುಗಳನ್ನು ಬಳಸಲು ಪ್ರೋತ್ಸಾಹಿಸಲು ಮತ್ತು ಸುಗಮಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ . 51 ಮೈಕ್ರಾನ್‌ಗಳಷ್ಟು ದಪ್ಪವಿರುವ ಪಾಲಿಥೀನ್ ಚೀಲಗಳಲ್ಲಿ ಪ್ರಸಾದದ ಒಂದು ಭಾಗವನ್ನು ಇನ್ನೂ ವಿತರಿಸಲಾಗುತ್ತಿದೆ .

ಇದು ಪರಿಸರಕ್ಕೆ ಒಳ್ಳೆಯದು ಮಾತ್ರವಲ್ಲದೆ ತಿರುಪತಿ, ತೆಲಂಗಾಣ ಮತ್ತು ಕೋಲ್ಕತ್ತಾದ ಸುತ್ತಮುತ್ತಲಿನ ಸಾವಿರಾರು ಕುಶಲಕರ್ಮಿಗಳಿಗೆ ಉದ್ಯೋಗವನ್ನು ನೀಡುತ್ತದೆ.

ತಿರುಪತಿಯಲ್ಲಿ ದಿನಕ್ಕೆ 3.5ರಿಂದ 4 ಲಕ್ಷ ಲಡ್ಡುಗಳು ಮಾರಾಟವಾಗುತ್ತವೆ. ಅಂದರೆ ಸುಮಾರು 70 ಸಾವಿರ ಪ್ಲಾಸ್ಟಿಕ್‌ಗಳ ಅವಶ್ಯಕತೆ ಇರುತ್ತದೆ. ಬರೀ ಲಡ್ಡಿನಿಂದಲೇ ದೇವಾಲಯಕ್ಕೆ ಹೆಚ್ಚಿನ ಆದಾಯ ಬರುತ್ತದೆ.

ಇದೀಗ ಲಡ್ಡಿನ ವಿಷ್ಯ ಯಾಕೆ ಬಂತೆಂದರೆ ತಿರುಮಲ ತಿರುಪತಿ ದೇವಸ್ಥಾನವವನ್ನು ನಡೆಸುತ್ತಿರುವ ಆಡಳಿತ ಮಂಡಳಿಯು ಇದೀಗ ಆದಿತ್ಯ ಬಿರ್ಲಾ ಕಂಪನಿ ಹಿಂಡಲ್ಕೋ ಹಾಗೂ ಜೂಟ್‌ ಕಾರ್ಪೋರೇಶನ್ ಆಫ್ ಇಂಡಿಯಾದ ಜೊತೆ ಕೈ ಜೋಡಿಸಿ ಮರುಬಳಕೆ ಮಾಡಬಹುದಾದ ಅಲ್ಯೂಮಿನಿಯಂ ಫಾಯಿಲ್ ಲ್ಯಾಮಿನೇಟೆಡ್ ಸೆಣಬಿನ ಚೀಲಗಳಲ್ಲಿ ಲಡ್ಡು ವಿತರಿಸಲು ಮುಂದಾಗಿದೆ.

ದೇವಾಲಯದ ಪ್ರಾಧಿಕಾರವನ್ನು ಚಿಂತೆ ಮಾಡುವ ಸಂಗತಿಯೆಂದರೆ, ಹೊಸ ಮತ್ತು ಪರಿಸರ ಸ್ನೇಹಿ ಚೀಲಗಳು ಸಾಮಾನ್ಯ ಪಾಲಿಥೀನ್ ಚೀಲ ಅಥವಾ ಕಾಗದದ ಚೀಲಗಳಿಗೆ ಹೋಲಿಸಿದರೆ ಸ್ವಲ್ಪ ಬೆಲೆಬಾಳುವವು. ಈ ಸೆಣಬಿನ ಮತ್ತು ಅಲ್ಯೂಮಿನಿಯಂ ಲೇಪದ ಚೀಲಗಳು ಒಬ್ಬ ವ್ಯಕ್ತಿಗೆ ಕೆಜಿಗೆ 25 ರಿಂದ 50 ರೂ. ಬೆಲೆ ಬಾಳುತ್ತದೆ. ಏಕೆಂದರೆ ಪ್ಯಾಕೇಜಿಂಗ್ ಸಾಮಗ್ರಿಗಳ ಬೆಲೆ ಕೂಡಾ ಅಧಿಕವಿದೆ.

English summary
The Tirumala Tirupati Devasthanams (TTD) appealed to its devotees on Tuesday to avoid single-use plastic. In an effort to reduce pollution and preserve the environment of the holy hills, TTD took the initiative with the aim to go plastic-free in two months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X