• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ಸ್ಥಾನದ ಮೇಲೆ ಕಣ್ಣು, ಸಿಎಂ ಭೇಟಿಯಾದ ಕಾಮಿಡಿಯನ್

|

ಅಮರಾವತಿ, ಸೆ. 17: ಜನಪ್ರಿಯ ಕಾಮಿಡಿಯನ್ ಅಲಿ ಇಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ತಡೆಪಲ್ಲಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಅಲಿಗೆ ಉನ್ನತ ಸ್ಥಾನ ನೀಡುವ ಭರವಸೆ ಸಿಕ್ಕಿದೆ ಎಂಬ ಸುದ್ದಿಯಿದೆ.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ವೈಎಸ್ಸಾರ್ ಕಾಂಗ್ರೆಸ್ ಪಕ್ಷ ಸೇರಿದ್ದ ಅಲಿ ಅದಕ್ಕೂ ಮುನ್ನ ಟಿಡಿಪಿಯಲ್ಲಿ ಗುರುತಿಸಿಕೊಂಡಿದ್ದರು. ಅಲಿ ಅಲ್ಲದೆ ನಟ ಪೊಸನಿ ಕೃಷ್ಣ ಮುರಳಿ ಕೂಡಾ ಉನ್ನತ ಸ್ಥಾನಕ್ಕಾಗಿ ಕಾದಿದ್ದಾರೆ. ಆದರೆ, ಇಲ್ಲಿ ತನಕ ಯಾವುದೇ ಬೇಡಿಕೆ ಇಟ್ಟಿಲ್ಲ.

ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್!

ಈ ಪೈಕಿ ನಗಾರಿ ಕ್ಷೇತ್ರದ ಶಾಸಕಿ, ನಟಿ ರೋಜಾಗೆ ಮಾತ್ರ ಬಂಪರ್ ಲಭಿಸಿದ್ದು, ಕೈಗಾರಿಕಾ ಇಲಾಖೆ ಮುಖ್ಯಸ್ಥೆಯಾಗಿದ್ದಾರೆ. ಆಲಿ ಅವರು ವೈಎಸ್ಸಾರ್ ಕಾಂಗ್ರೆಸ್ ಸೇರಿದ ಬಳಿಕ ಅಲಿಗೆ ಆಂಧ್ರಪ್ರದೇಶದ ಫಿಲಂ ಡೆವಲಪ್ಮೆಂಟ್ ಕಾರ್ಪೊರೇಷನ್ (APFDC) ಚೇರ್ಮನ್ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.

ವೆಂಕಟೇಶ್ವರ ಭಕ್ತಿ ಚಾನೆಲ್‌ಗೆ ಪತ್ರಕರ್ತೆ ಸ್ವಪ್ನ ಸುಂದರಿ ನಿರ್ದೇಶಕಿಯಾಗಿ ನೇಮಕ

   Worlds Longest Tunnel - Atal Tunnel ಇದೆ ನೋಡಿ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ | Oneindia Kannada

   ಮತ್ತೊಬ್ಬ ಕಾಮಿಡಿಯನ್ ಪೃಥ್ವಿರಾಜ್ ಅವರಿಗೆ ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಅಧೀನದ ಶ್ರೀವೆಂಕಟೇಶ್ವರ ಭಕ್ತಿ ಚಾನೆಲ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ನಂತರ ಕಿರುಕುಳ ಆರೋಪ ಹೊತ್ತು ಕೆಳಗಿಳಿಸಲಾಗಿದೆ. ಈ ಸ್ಥಾನವೂ ಖಾಲಿಯಿದೆ. ಕಾಪು ಕಾರ್ಪೊರೇಷನ್ ಚೇರ್ಮನ್ ಆಗಿ ಇತ್ತೀಚೆಗೆ ಶಾಸಕ ಜಕ್ಕಂಪುಡಿ ರಾಜರನ್ನು ನೇಮಿಸಲಾಗಿದೆ. ಹೀಗಾಗಿ, ಯಾವುದಾದರೂ ನಿಗಮ, ಮಂಡಳಿ ಸ್ಥಾನಕ್ಕೆ ಅಲಿಯನ್ನು ನೇಮಿಸಬಹುದು ಎಂಬ ಸುದ್ದಿಯೂ ಇದೆ.

   English summary
   Popular comedian Ali today met Andhra Pradesh Chief Minister YS Jagan Mohan Reddy at the camp office in Tadepalli. Rumours abuzz on social media about Jagan assuring him big post.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X