• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಪತಿ ಬಂದ್ ಮಾಡಿ; ದರ್ಶನದ ವಿಚಾರ ಮತ್ತೆ ಆರಂಭ

|

ಅಮರಾವತಿ, ಜುಲೈ 20 : ಕೊರೊನಾ ವೈರಸ್ ಸೋಂಕು ತಗುಲಿದ್ದ ಟಿಟಿಡಿಯ ನಿವೃತ್ತ ಪ್ರಧಾನ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ. ತಿರುಪತಿ ದೇವಾಲಯದಲ್ಲಿ ದರ್ಶನವನ್ನು ಸ್ಥಗಿತಗೊಳಿಸಬೇಕು ಎಂಬ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

   Drone Prathap Warned by German Company BillzEye | Oneindia Kannada

   73 ವರ್ಷದ ಶ್ರೀನಿವಾಸ ದೀಕ್ಷಿತುಲು ಎಸ್‌ವಿಐಎಂಎಸ್ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ತಿರುಪತಿ ದೇವಾಲಯದ ನಿವೃತ್ತ ಪ್ರಧಾನ ಅರ್ಚಕರಾಗಿದ್ದ ಅವರು ಗುರುವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

   ಭಕ್ತರ ಗಮನಕ್ಕೆ: ತಿರುಪತಿ ದೇವಸ್ಥಾನದಿಂದ ಬಂತೊಂದು ಮಾಹಿತಿ

   ತಿರುಪತಿಯಲ್ಲಿ ದರ್ಶನವನ್ನು ನಿಲ್ಲಿಸಬೇಕು ಎಂಬ ಒತ್ತಾಯ ಮತ್ತೆ ಕೇಳಿ ಬಂದಿದೆ. ಟಿಟಿಡಿಯ 140 ಸಿಬ್ಬಂದಿಗೆ ಇದುವರವೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯಿಂದ ದರ್ಶನ ನಿಲ್ಲಿಸಿ ಎಂದು ಒತ್ತಾಯಿಸಲಾಗುತ್ತಿದೆ.

   ತಿರುಪತಿ ದೇವಾಲಯ ಬಂದ್ ಮಾಡಿ; ಟಿಟಿಡಿ ಸಿಬ್ಬಂದಿ ಪತ್ರ

   ನಾಲ್ವರು ಸಹಾಯಕ ಅರ್ಚಕರು, 16 ಲಾಡು ಮಾಡುವ ಸಿಬ್ಬಂದಿ, 56 ಭದ್ರತಾ ಸಿಬ್ಬಂದಿ ಸೇರಿದಂತೆ ಟಿಟಿಡಿಯ 140 ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿದೆ. ಟಿಟಿಡಿ ಮುಖ್ಯಸ್ಥ ವೈ. ವಿ. ಸುಬ್ಬಾರೆಡ್ಡಿ ದರ್ಶನ ನಿಲ್ಲಿಸಲು ನಿರಾಕರಿಸಿದ್ದಾರೆ.

   ತಿರುಪತಿ; ನಕಲಿ ವೆಬ್‌ ಸೈಟ್‌ನಿಂದ ಭಕ್ತರಿಗೆ ವಂಚನೆ

   ಪ್ರತಿದಿನ ಸುಮಾರು 12 ಸಾವಿರ ಭಕ್ತಾದಿಗಳು ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಕಂಟೈನ್ಮೆಂಟ್ ಝೋನ್‌ಗಳು, ಅತಿ ಹೆಚ್ಚು ಪ್ರಕರಣವಿರುವ ರಾಜ್ಯಗಳ ಭಕ್ತಾದಿಗಳು ಭೇಟಿ ನೀಡದಂತೆ ತಡೆಯಬಹುದು. ಆದರೆ, ದರ್ಶನ ನಿಲ್ಲಿಸುವುದಿಲ್ಲ ಎಂದು ಟಿಟಿಡಿ ಹೇಳಿದೆ.

   ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟಿಟಿಡಿಗೆ ದರ್ಶನವನ್ನು ಭಕ್ತರ ಆರೋಗ್ಯದ ದೃಷ್ಟಿಯಿಂದ ನಿಲ್ಲಿಸಿ ಎಂದು ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶ ಸರ್ಕಾರವೇ ಇನ್ನು ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ.

   English summary
   140 staff of the Tirupati temple tested positive for COVID - 19. Row has erupted over the decision of the Tirumala Tirupati Devasthanam (TTD) for keeping the Tirumala temple open in the time of pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X