• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ; 13 ಜನರ ಸಾವು

|

ಅಮರಾವತಿ, ಫೆಬ್ರವರಿ 14: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಾದಾಪುರಂ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. 13 ಜನರು ಮೃತಪಟ್ಟಿದ್ದಾರೆ. 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಾರಿ ಮತ್ತು ಮಿನಿ ಬಸ್ ನಡುವೆ ಮಾದಾಪುರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾಸನದಲ್ಲಿ ಭೀಕರ ಅಪಘಾತ; ಅಬಕಾರಿ ಅಧಿಕಾರಿ, 3 ಐಟಿ ಉದ್ಯೋಗಿಗಳ ಸಾವುಹಾಸನದಲ್ಲಿ ಭೀಕರ ಅಪಘಾತ; ಅಬಕಾರಿ ಅಧಿಕಾರಿ, 3 ಐಟಿ ಉದ್ಯೋಗಿಗಳ ಸಾವು

ಮಿನಿ ಬಸ್‌ನಲ್ಲಿ ಚಿತ್ತೂರು ಜಿಲ್ಲೆಯ ಮದನಪಲ್ಲಿಯಿಂದ ಅಜ್ಮೀರ್ ದರ್ಗಾಕ್ಕೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದ್ದು, 13 ಜನರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ 6 ಪಥವಾಗಿ ಅಗಲೀಕರಣ

ಮೃತಪಟ್ಟವರಲ್ಲಿ ಒಂದು ಮಗು ಮತ್ತು 8 ಮಹಿಳೆಯರು ಸೇರಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟವರ ವಿವರಗಳು ಇನ್ನೂ ಲಭ್ಯವಾಗಬೇಕಿದೆ.

ದಾವಣಗೆರೆಯಿಂದ ಧಾರವಾಡದ ಇಟಿಗಟ್ಟಿವರೆಗೆ ರಸ್ತೆ ಅಪಘಾತ ತಡೆಯಲು ಜಾಗೃತಿ ಜಾಥಾದಾವಣಗೆರೆಯಿಂದ ಧಾರವಾಡದ ಇಟಿಗಟ್ಟಿವರೆಗೆ ರಸ್ತೆ ಅಪಘಾತ ತಡೆಯಲು ಜಾಗೃತಿ ಜಾಥಾ

ಅಪಘಾತದಲ್ಲಿ ಗಾಯಗೊಂಡಿರುವ ಕಾಶಿಮ್ (10) ಮತ್ತು ಮುಸ್ತಾಕ್ (12)ರನ್ನು ಚಿಕಿತ್ಸೆಗಾಗಿ ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಿನಿಬಸ್‌ನಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯಲಾಯಿತು. ಅಪಘಾತದಲ್ಲಿ ಬದುಕುಳಿದ ನಾಲ್ಕು ಮಕ್ಕಳಿಗೆ ಮಾತನಾಡಲು ಸಾಧ್ಯವಾಗದ ಕಾರಣ ಸಂತ್ರಸ್ತರ ವಿವರಗಳು ಇನ್ನೂ ಪೊಲೀಸರಿಗೆ ತಿಳಿದಿಲ್ಲ.

ವಿಡಿಯೋ

English summary
13 people killed, 4 injured in a collision between a bus and a truck near Madarpur village Kurnool district, Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X