ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ-ಬೆಂಗಳೂರು 'ವಂದೇ ಭಾರತ್' ವಿಶೇಷ ರೈಲು ಸೇವೆ

|
Google Oneindia Kannada News

ತಿರುಮಲ, ಆಗಸ್ಟ್ 28: ಆಂಧ್ರ ಪ್ರದೇಶದ ತಿರುಪತಿಯಿಂದ ಕರ್ನಾಟಕ ರಾಜಧಾನಿ ಬೆಂಗಳೂರುವರೆಗೆ 'ವಂದೇ ಭಾರತ್' ರೈಲು ಪರಿಚಯಿಸಬೇಕು. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ವಲಯ ರೈಲು ಬಳಕೆದಾರರ ಸಲಹಾ ಸಮಿತಿ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಮನವಿ ಮಾಡಿದೆ.

ಶನಿವಾರ ಸಿಕಂದರಾಬಾದ್‌ನಲ್ಲಿ ನಡೆದ 74ನೇ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ, ತಿರುಪತಿ ಮೂಲದ ಸಮಿತಿ ಸದಸ್ಯ ರಾಯುಲು ಅವರು ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) ವಲಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿವಿಧ ಯೋಜನೆ ಜಾರಿಗೊಳಿಸುವ ಕರಿತು ಇಲಾಖೆ ಅಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದರು.

ಯುಪಿ-ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಒಂದೇ ದಿನ 116 ರೈಲು ರದ್ದು; ಕಾರಣವೇನು ?ಯುಪಿ-ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಒಂದೇ ದಿನ 116 ರೈಲು ರದ್ದು; ಕಾರಣವೇನು ?

ಇದೇ ಸಂದರ್ಭದಲ್ಲಿ ಅವರು ತಿರುಪತಿ ಮತ್ತು ಬೆಂಗಳೂರು ನಡುವೆ 'ವಂದೇ ಭಾರತ್' ಎಕ್ಸಪ್ರೆಸ್‌ ರೈಲು ಪರಿಚಯಿಸುವಂತೆ ಕೋರಿದ ರಾಯುಲು ದಕ್ಷಿಣ ಮಧ್ಯ ರೈಲ್ವೆ ವಿಭಾಗಕ್ಕೆ ಮನವಿ ಮಾಡಿಕೊಂಡರು. ನಿತ್ಯ ಬೆಂಗಳೂರಿನ ಭಾಗವಾಗಿ ತಿರುಪತಿಗೆ ಲಕ್ಷಾಂತರ ಭಕ್ತರು ತಿರುಮಲ ತಿರುಪತಿ ದೇವಸ್ಥಾನಕ್ಕೆಂದು ಆಗಮಿಸುತ್ತಾರೆ. ಕೇವಲ ಭಕ್ತರಲ್ಲದೇ ಇನ್ನಿತರ ವ್ಯಾಪಾರ, ವ್ಯವಹಾರ ಸೇರಿದಂತೆ ಅನೇಕ ಕಾರಣಗಳಿಂದ ಸಂಚರಿಸುತ್ತಾರೆ. ಈ ಲಕ್ಷಾಂತರ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ 'ವಂದೇ ಭಾರತ್' ಎಕ್ಸಪ್ರೆಸ್ ರೈಲನ್ನು ಓಡಿಸಬೇಕಿದೆ ಎಂದು ಅವರು ತಿಳಿಸಿದರು.

ತಿರುಪತಿ-ಬೆಂಗಳೂರು ಮಧ್ಯೆ 'ವಂದೇ ಭಾರತ್' ರೈಲು

ತಿರುಪತಿ-ಬೆಂಗಳೂರು ಮಧ್ಯೆ 'ವಂದೇ ಭಾರತ್' ರೈಲು

ಭಾರತದ ಅನೇಕ ಕಡೆಗಳಲ್ಲಿ 'ವಂದೇ ಭಾರತ್' ಎಕ್ಸಪ್ರೆಸ್ ರೈಲುಗಳು ಸಂಚಾರ ನಡೆಸಿವೆ. ನವದೆಹಲಿ ಮತ್ತು ವಾರಣಾಸಿ ನಡುವೆ 'ವಂದೇ ಭಾರತ್' ರೈಲು ಆರಂಭವಾಗಿದೆ. ಅದೇ ರೀತಿ ಆಂಧ್ರ ಪ್ರದೇಶ ವ್ಯಾಪ್ತಿಯ ವಿಶ್ವಪ್ರಸಿದ್ಧ ಯಾತ್ರಾ ಕೇಂದ್ರವಾದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಂಪರ್ಕಿಸುವ ರೈಲನ್ನು ಸಂಪರ್ಕಿಸುವ ಅಗತ್ಯತೆ ಇದೆ. ಭಾರತದ ದಕ್ಷಿಣದಲ್ಲಿ ಈ ವಿಶೇಷ ಎಕ್ಸಪ್ರೆಸ್ ರೈಲು ಸಂಚಾರ ಆರಂಭ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಅವರು ಕೋರಿದರು.

ಶೀಘ್ರದಲ್ಲೇ ಕಡಿಮೆಯಾಗಲಿದೆ ಬೆಂಗಳೂರು-ಚೆನ್ನೈ ನಡುವಿನ ರೈಲು ಪ್ರಯಾಣದ ಅವಧಿಶೀಘ್ರದಲ್ಲೇ ಕಡಿಮೆಯಾಗಲಿದೆ ಬೆಂಗಳೂರು-ಚೆನ್ನೈ ನಡುವಿನ ರೈಲು ಪ್ರಯಾಣದ ಅವಧಿ

3ನೇ ರೈಲು ಮಾರ್ಗಕ್ಕೆ ಹಣ ನೀಡಿ

3ನೇ ರೈಲು ಮಾರ್ಗಕ್ಕೆ ಹಣ ನೀಡಿ

ಇನ್ನೂ ವಿಜಯವಾಡ ಮತ್ತು ಗುಡೂರು ನಡುವಿನ ಮೂರನೇ ರೈಲು ಮಾರ್ಗದ ಅಭಿವೃದ್ಧಿಗೆ ಸರ್ಕಾರದಿಂದ 1,000 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿದರು. 2011-12ನೇ ಸಾಲಿನಲ್ಲಿ ಮಂಜೂರಾದ 309 ಕಿಲೋ ಮೀಟರ್ ಉದ್ದದ ಶ್ರೀಕಾಳಹಸ್ತಿಯಿಂದ ನಡಿಕುಡಿ ಮಾರ್ಗದ ರೈಲು ಸಂಚಾರಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಲ್ಲಿ ರಾಯುಲು ಮನವಿ ಮಾಡಿದರು.

ರೈಲು ನಿಲ್ದಾಣ ಸುತ್ತಮುತ್ತ ಅಭಿವೃದ್ಧಿಗೆ ಒತ್ತು

ರೈಲು ನಿಲ್ದಾಣ ಸುತ್ತಮುತ್ತ ಅಭಿವೃದ್ಧಿಗೆ ಒತ್ತು

ತಿರುಚನೂರು ರೈಲು ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಈ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಮೂಲ ಜನದಟ್ಟಣೆ ಕಡಿಮೆ ಮಾಡಲು ಅನುದಾನ 6.5ಕೋಟಿ ರೂ. ನಿಡಬೇಕು. ಜತಗೆ ತಿರುಪತಿಯ ದಕ್ಷಿಣ ಪ್ರವೇಶ ದ್ವಾರವನ್ನು ಅಭಿವೃದ್ಧಿಪಡಿಸಲು ಮೂರು ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಸಮಿತಿಯ ಸದಸ್ಯರೆಲ್ಲರೂ ಕೋರಿದರು.

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು

ದೇಶದಲ್ಲೇ ಅತ್ಯಂತ ವೇಗವಾಗಿ ಓಡುವ ಈ ವಂದೇ ಭಾರತ್ ಎಕ್ಸಪ್ರೆಸ್‌ ರೈಲು ಹೆಚ್ಚಾಗಿ ಉತ್ತರ ಭಾರತದಲ್ಲಿ ಮಾತ್ರವಲ್ಲದೇ ನೈಋತ್ಯ ರೈಲ್ವೆಯು ಕರ್ನಾಟಕದಲ್ಲಿ ಈ ವಿಶೇಷ ಎಕ್ಸಪ್ರೆಸ್ ರೈಲನ್ನು ಓಡಿಸಲು ಸಿದ್ಧತೆ ಆರಂಭಿಸಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ಈ ವಂದೇ ಭಾರತ್ ಎಕ್ಸಪ್ರೆಸ್ ರೈಲು ಶೀಘ್ರವೇ ಓಡಿಸುವ ಕುರಿತು ಹಿಂದೆ ನೈಋತ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದರು.

ವಿಶೇಷ ರೈಲಿನಿಂದ ಸಮಯ ಉಳಿತಾಯ

ವಿಶೇಷ ರೈಲಿನಿಂದ ಸಮಯ ಉಳಿತಾಯ

ಈ ವೇಗದ ರೈಲಿನ ಆರಂಭದಿಂದ ಏಳು ಗಂಟೆಯಲ್ಲಿ ಪ್ರಯಾಣಿಸಬಹುದಾದ ದೂರವನ್ನು ಕೇವಲ ಐದೂವರೆ ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಯದ ಉಳಿತಾಯವಾಗಲಿದೆ. ಇದರಿಂದ ಬೆಂಗಳೂರು ಸೇರಿಂತೆ ತುಮಕೂರು, ಹಿರಿಯೂರು, ಕಡೂರು, ಅರಸಿಕೆರೆ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಭಾಗ ಹಾಗೂ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಬೆಂಗಳೂರಿಂದ ತಿರುಪತಿವರೆಗೆ ವಂದೇ ಭಾರತ್ ಎಕ್ಸಪ್ರೆಸ್‌ ರೈಲು ಆರಂಭವಾದರೆ ಈ ಮಾರ್ಗದ ಮಧ್ಯದಲ್ಲಿ ಬರುವ ಎಲ್ಲ ಜಿಲ್ಲಾ ಕೇಂದ್ರಗಳು, ತಾಲೂಕುಗಳ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಲಯ ರೈಲು ಬಳಕೆದಾರರ ಸಲಹಾ ಸಮಿತಿ (ಝಡ್‌ಆರ್‌ಯುಸಿಸಿ) ಅಭಿಪ್ರಾಯ ವ್ಯಕ್ತಪಡಿಸಿದೆ.

English summary
Introduce to Vande Bharat Express train in between Tirupathi to Bengaluru requested by Zonal Rail Users Consultative Committee (ZRUCC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X