ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಕ್ಕೆ ಮೂರು ರಾಜಧಾನಿ: ಇದ್ಯಾಕಪ್ಪಾ ನೀರಿನಲ್ಲಿ ನಿಂತ್ರು ಜನ?

|
Google Oneindia Kannada News

ಅಮರಾವತಿ, ಜನವರಿ.28: ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಪ್ರತಿಭಟನೆ ಕಾವು ಇಂದಿಗೂ ಕಡಿಮೆಯಾಗಿಲ್ಲ. ಅದಕ್ಕೆ ಪುಷ್ಟಿ ನೀಡುವಂತಾ ವಿಭಿನ್ನ ಹೋರಾಟಕ್ಕೆ ರಾಯಪುಡಿ ಸಾಕ್ಷಿಯಾಯಿತು.

ಆಡಳಿತ ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಅಮರಾವತಿ ಜೊತೆಗೆ ಮತ್ತೆರೆಡು ರಾಜಧಾನಿಗಳನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ ಮಾಡಿದ್ದರು. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ರಾಯಪುಡಿಯ ಕೃಷ್ಣಾ ನದಿಯಲ್ಲಿ ನಿಂತು ಪ್ರತಿಭಟನಾಕಾರರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನಆಂಧ್ರಪ್ರದೇಶಕ್ಕೆ ಒಂದಲ್ಲ ಮೂರು ರಾಜಧಾನಿ: ಬಿಜೆಪಿ ನಾಯಕರ ಮೌನ

ಆಂಧ್ರ ಪ್ರದೇಶದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಐವರು ಉಪ ಮುಖ್ಯಮಂತ್ರಿಗಳನ್ನು ಹೆಸರಿಸುವ ಮೂಲಕ ಅಚ್ಚರಿ ಮೂಡಿಸಲಾಗಿತ್ತು. ಇದರ ಬೆನ್ನಲ್ಲೇ ಮೂರು ರಾಜಧಾನಿಗಳನ್ನು ಘೋಷಣೆ ಮಾಡಿರುವ ನಿರ್ಧಾರಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

Protests Continue Against Andhra Pradesh Govenment Decision Of Decentralization

ಜಗನ್ ಮೋಹನ್ ರೆಡ್ಡಿ ಸರ್ಕಾರವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಮೂರು ಅಂಗಗಳಿಗೆ ಒಂದೊಂದು ರಾಜಧಾನಿಯನ್ನು ಘೋಷಣೆ ಮಾಡಿದೆ. ಸರ್ಕಾರದ ಸಚಿವಾಲಯದ ಕಾರ್ಯಗಳನ್ನು ನಿರ್ವಹಿಸಲು ಒಂದು ರಾಜಧಾನಿ, ಶಾಸಕರ ಕಾರ್ಯ ನಿರ್ವಹಣೆಗೆ ಅನುಕೂಲವಾಗಲು ಮತ್ತೊಂದು ರಾಜಧಾನಿ ಹಾಗೂ ಹೈಕೋರ್ಟ್ ಕಾರ್ಯಕ್ಕಾಗಿ ಇನ್ನೊಂದು ರಾಜಧಾನಿಯಲ್ಲಿ ಘೋಷಿಸಲಾಗಿದೆ. ಇದರ ಪ್ರಕಾರ ಅಮರಾವತಿ ಜೊತೆಗೆ ವಿಶಾಖಪಟ್ಟಣಂ ಹಾಗೂ ಕರ್ನೂಲ್ ಕೂಡಾ ಅಧಿಕೃತ ರಾಜಧಾನಿಯಾಗಲಿದೆ.

English summary
Protests Continue Against Andhra Pradesh Govenment Decision Of Decentralization. People In Rayapudi Protested In Krishna River Against The Decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X