ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನೊಂದಿಗೆ ಜಗಳ; 65 ಕಿ. ಮೀ. ನಡೆದ ತುಂಬು ಗರ್ಭಿಣಿ

|
Google Oneindia Kannada News

ಅಮರಾವತಿ, ಮೇ16; ಪ್ರತಿದಿನ ಗಂಡನ ಜೊತೆ ಜಗಳದಿಂದ ಬೇಸತ್ತ ತುಂಬು ಗರ್ಭಿಣಿ ಮನೆಬಿಟ್ಟು ಬರೋಬ್ಬರಿ 65 ಕಿ. ಮೀ. ನಡೆದಿದ್ದಾಳೆ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ವರ್ಷಿಣಿ ಎಂಬ ಮಹಿಳೆ ಶುಕ್ರವಾರ ರಾತ್ರಿ ತನ್ನ ಪತಿಯೊಂದಿಗೆ ಜಗಳವಾಡಿದ್ದಾಳೆ. ತವರು ಮನೆಗೆ ಹೊರಡುವ ಉದ್ದೇಶದಿಂದ ಮನೆ ಬಿಟ್ಟಿದ್ದಾರೆ. ಕೈಯಲ್ಲಿ ಹಣವಿಲ್ಲದ ಕಾರಣ ತಿರುಪತಿಯಿಂದ ನಡೆದುಕೊಂಡು ಬಂದಿದ್ದಾರೆ.

ನಾಯ್ಡುಪೇಟೆಯ ಬಸ್ ನಿಲ್ದಾಣ ತಲುಪಿದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರ ಸಹಾಯ ಕೋರಿದ್ದಾರೆ. ಆಂಬುಲೆನ್ಸ್‌ನಲ್ಲಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Pregnant Woman Give Birth To Child After 65 Km Walk

ನವಜಾತ ಶಿಶು ಕಡಿಮೆ ತೂಕವಿದ್ದರೂ ಸಹ ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ ಮತ್ತು ಉತ್ತಮ ಚಿಕಿತ್ಸೆಗಾಗಿ ಇಬ್ಬರನ್ನು ನೆಲ್ಲೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪೊಲೀಸರಿಗೆ ಮಾಹಿತಿ; ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳಿಂದ ಏನೂ ತಿನ್ನದ ಕಾರಣ ಅಸ್ವಸ್ಥರಾಗಿದ್ದ ಮಹಿಳೆ ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳುವುದಕ್ಕೆ ವೈದ್ಯರು ನೆರವು ನೀಡಿದ್ದಾರೆ.

Pregnant Woman Give Birth To Child After 65 Km Walk

ಪ್ರಾಥಮಿಕ ವಿಚಾರಣೆಯಲ್ಲಿ ಮಹಿಳೆ ತನ್ನ ಪತಿಯೊಂದಿಗೆ ತಿರುಪತಿಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಪತಿ ದಿನಗೂಲಿ ನೌಕರನಾಗಿದ್ದು, ಪತಿಯೊಂದಿಗೆ ನಿರಂತರ ಜಗಳ ನಡೆಯುತ್ತಿದ್ದರಿಂದ, ಮಗುವಿಗೆ ಜೀವಕ್ಕೆ ತೊಂದರೆಯಾಗಬಹುದು ಎಂದು ಶಂಕಿಸಿ ವರ್ಷಿಣಿ ಕೈಯಲ್ಲಿ ಹಣವಿಲ್ಲದಿದ್ದರೂ ಮನೆಯಿಂದ ಹೊರಗೆ ಬಂದಿದ್ದರು.

Pregnant Woman Give Birth To Child After 65 Km Walk

ವರ್ಷಣಿ ವಿಚಾರಣೆಯ ವೇಳೆ ಇನ್ನೂ ತನ್ನ ಪತಿ ಅಥವಾ ಕುಟುಂಬದ ಹೆಸರು ಅಥವಾ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಸ್ಥಳೀಯ ದಿಶಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯ ಕುಟುಂಬದ ವಿವರಗಳನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆ.

English summary
Pregnant woman walked around 65 km after argument with husband and gave birth to baby girl at hospital. Incident reported at Tirupati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X