ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾದ ಬಳಿಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೋದಿ

|
Google Oneindia Kannada News

Recommended Video

ತಿಮ್ಮಪ್ಪನ ಬಳಿ ಮೋದಿ ಹೊತ್ತ ಹರಕೆ ಏನು ಗೊತ್ತಾ..? | Oneindia Kannada

ಅಮರಾವತಿ, ಜೂನ್ 02: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಏಳು ಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದ್ದಾರೆ. ಜೂನ್ 09ರಂದು ಮೋದಿ ಅವರು ತಿರುಮಲಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕನ್ನ ಲಕ್ಷ್ಮಿನಾರಾಯಣ ಅವರು ಈ ಬಗ್ಗೆ ವಿವರ ನೀಡಿ, ಪ್ರಧಾನಿ ಮೋದಿ ಅವರು ಮುಂದಿನ ವಾರದಲ್ಲಿ ಬಾಲಾಜಿ ದರ್ಶನ ಪಡೆಯಲಿದ್ದಾರೆ ಎಂದರು.

ಗುರುವಾಯೂರಿಗೆ ಪ್ರಧಾನಿ ಮೋದಿ ಭೇಟಿಯ ಹಿಂದೆ ಎರಡು ಕಾರಣಗಳುಗುರುವಾಯೂರಿಗೆ ಪ್ರಧಾನಿ ಮೋದಿ ಭೇಟಿಯ ಹಿಂದೆ ಎರಡು ಕಾರಣಗಳು

ಇದಕ್ಕೂ ಮುನ್ನ ಜೂನ್ ಎಂಟರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮೋದಿ ಭೇಟಿ ನಿಗದಿಯಾಗಿದ್ದು, ಪ್ರಧಾನಮಂತ್ರಿ ಕಾರ್ಯಾಲಯದಿಂದ ಈಗಾಗಲೇ ರಾಜ್ಯದ ದೇವಸ್ವಂ ಬೋರ್ಡ್ (ಮುಜರಾಯಿ ಇಲಾಖೆ) ಮತ್ತು ಕೇರಳ ಸರಕಾರಕ್ಕೆ ಅಧಿಕೃತ ಮಾಹಿತಿ ರವಾನೆಯಾಗಿದೆ.

PM Modi to visit Tirumala Tirupati Temple on June 9

ಲೋಕಸಭೆ ಚುನಾವಣೆ 2019ರ ಬಳಿಕ ಪ್ರಮುಖ ನಾಯಕರು ಅದರಲ್ಲೂ ಗೆಲುವು ಸಾಧಿಸಿದ ಸಂಸದರುಗಳು ತಿರುಮಲ ತಿರುಪತಿ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಹರಕೆ ತೀರಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚೆಗೆ ತಿರುಮಲಕ್ಕೆ ಭೇಟಿ ಕೊಟ್ಟ ಪ್ರಮುಖರಾಗಿದ್ದಾರೆ. ಮೇ 26ರಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರರಾವ್ ಅವರು ಕೂಡಾ ದರ್ಶನ ಪಡೆದುಕೊಂಡಿದ್ದರು.

English summary
Prime Minister Narendra Modi is scheduled to visit the Tirumala Tirupati Devasthanam, Andhra Pradesh on June 9 told BJP president K Lakshmi Narayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X