• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿ

|

ಗುಂಟೂರು(ಆಂಧ್ರಪ್ರದೇಶ), ಫೆಬ್ರವರಿ 10: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮೋದಿ ಅಲೆ ಮತ್ತೊಮ್ಮೆ ಮೂಡದಂತೆ ತಡೆಯಲು ಮಹಾಘಟಬಂದನ್ ಪಕ್ಷಗಳು ಯತ್ನಿಸುತ್ತಿವೆ.

'ಮೋದಿ ನೆವರ್ ಅಗೇನ್' ಆಂಧ್ರದಲ್ಲಿ ಮೋದಿ ವಿರುದ್ಧ ಅಭಿಯಾನ

ಮೋದಿ ಅವರು ಗುಂಟೂರು, ಹುಬ್ಬಳ್ಳಿ ಹಾಗೂ ತಿರುಪ್ಪೂರ್ ನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಆದರೆ, ಮೋದಿ ವಿರೋಧಿ ಪೋಸ್ಟರ್ ಗಳು ತಲೆ ಎತ್ತಿವೆ.

ಗುಂಟೂರಿನ ಎತ್ಕೂರು ಬೈ ಪಾಸ್ ರಸ್ತೆ ಬಳಿ ಪ್ರಜಾ ಚೈತನ್ಯ ಸಭಾ ಸಾರ್ವಜನಿಕ ಸಭೆಗೆ ಆಗಮಿಸಿರುವ ಮೋದಿ ಅವರು ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ.

'ಮೋದಿ ನೆವರ್ ಅಗೇನ್' ಆಂಧ್ರದಲ್ಲಿ ಮೋದಿ ವಿರುದ್ಧ ಅಭಿಯಾನ

ಇದಕ್ಕೂ ಮುನ್ನ ಕೃಷ್ಣಪಟ್ಟಣಂನಲ್ಲಿ ಬಿಪಿಸಿಎಲ್ ಹೊಸ ಟರ್ಮಿನಲ್ ಸ್ಥಾಪನೆಗೆ ಶಂಕು ಸ್ಥಾಪನೆ ಮಾಡಿದರು. ಒನ್ಎನ್ ಜಿಸಿಯ ವಿಶಿಷ್ಟ ಹಾಗೂ ಎಸ್ 1 ಅಭಿವೃದ್ಧಿ ಯೋಜನೆ, ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದ ಯೋಜನೆ ಹಾಗೂ ವಿಶಾಖಪಟ್ಟಣಂನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಎನ್ಡಿಎ ಮಿತ್ರಪಕ್ಷವಾಗಿದ್ದ ಆಡಳಿತಾರೂಢ ತೆಲುಗುದೇಶಂ ಪಾರ್ಟಿ(ಟಿಡಿಪಿ) ಯು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದರಿಂದ ಎನ್ಡಿಎ ಸಖ್ಯವನ್ನು ತೊರೆದ ಬಳಿಕ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶಕ್ಕೆ ಮೋದಿ ಆಗಮಿಸಿದ್ದಾರೆ.

ಗುಂಟೂರು ಸಮಾವೇಶದಲ್ಲಿ ಮೋದಿ ಭಾಷಣ ಲೈವ್ ನೋಡಿ:

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ ಚಂದ್ರಬಾಬು ನಾಯ್ಡು

ಚಂದ್ರಬಾಬು ನಾಯ್ಡು ಅವರು ನನಗಿಂತ ಹಿರಿಯರು, ಪಕ್ಷ ನಿಷ್ಠೆ ಬದಲಯಿಸುವುದರಲ್ಲಿ ಎತ್ತಿದ ಕೈ, ಅವರ ಮಾವ ಎನ್ ಟಿ ರಾಮರಾವ್ ಅವರ ಬೆನ್ನಿಗೆ ಚೂರಿ ಹಾಕಿದ್ದ ನಾಯ್ಡು, ಮೈತ್ರಿ ಹಿಂದೆ ಸರಿದಿದ್ದರಲ್ಲಿ ಅಚ್ಚರಿಯೇನಿಲ್ಲ. ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡು ದೆಹಲಿಗೆ ಹೋಗುತ್ತಿರುವ ನಾಯ್ಡು ಅವರು ಹೊಸ ಮಿತ್ರರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ರಾಜ್ಯದಲ್ಲಿ ಅವರ ಜನಪ್ರಿಯತೆ ಕುಗ್ಗುತ್ತಿದೆ ಎಂದು ಮೋದಿ ಹೇಳಿದರು.

ಆಂಧ್ರಪ್ರದೇಶ ಅಭಿವೃದ್ಧಿ ನಮ್ಮ ಜವಾಬ್ದಾರಿ

ಆಂಧ್ರಪ್ರದೇಶ ಅಭಿವೃದ್ಧಿ ನಮ್ಮ ಜವಾಬ್ದಾರಿಯಾಗಿದೆ. ಕಳೆದ 4.5 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಳೆದ 55 ತಿಂಗಳುಗಳಲ್ಲಿ ಸಾಕಷ್ಟು ಮೊತ್ತ ನೀಡಿದ್ದೇವೆ ಎಂದು ಮೋದಿ ಹೇಳಿದರು.

ಹುಬ್ಬಳ್ಳಿ : ಸಂಜೆ 5 ಗಂಟೆಗೆ ನರೇಂದ್ರ ಮೋದಿ ಸಮಾವೇಶ

ಸ್ವಂತ ಅಸ್ತಿ ವೃದ್ಧಿಸಿಕೊಳ್ಳುವಲ್ಲಿ ನಾಯ್ಡು ನಿರತರಾಗಿದ್ದಾರೆ

ಸ್ವಂತ ಆಸ್ತಿ ವೃದ್ಧಿಸಿಕೊಳ್ಳುವುದರಲ್ಲಿ ನಾಯ್ಡು ನಿರತರಾಗಿದ್ದಾರೆ. ತಮ್ಮ ಮಗನನ್ನು ರಾಜಕೀಯ ರಂಗದಲ್ಲಿ ಬೆಳೆಸಲು ಸಾಹಸ ಪಡುತ್ತಿದ್ದಾರೆ. ನೀವು ಒಬ್ಬ ದೇಶದ ಚೌಕಿದಾರ(ಮೋದಿ) ನಿಗೆ ಹೆದರಿ, ಗೋ ಬ್ಯಾಕ್ ಎಂಬ ಅಭಿಯಾನ ಮಾಡುತ್ತಿದ್ದೀರಿ, ಈ ಅಭಿಯಾನ ಮಾಡುತ್ತಿರುವವರಿಗೆ ನನ್ನ ಧನ್ಯವಾದಗಳು, ನಾನು ದೆಹಲಿ ತೆರಳಿ ಮತ್ತೊಮ್ಮೆ ನಿಮ್ಮ ಆಶೋತ್ತರ ಈಡೇರಿಸಲು ಬರುತ್ತೇನೆ ಎಂದರು.

ರಾಜ್ಯಪಾಲರಿಂದ ಮೋದಿಗೆ ಸುಸ್ವಾಗತ

ವಿಜಯವಾಡದ ಗನ್ನಾವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಬರಮಾಡಿಕೊಳ್ಳಲು ಆಂಧ್ರಪ್ರದೇಶದ ಎನ್ ಚಂದ್ರಬಾಬು ನಾಯ್ಡು ಅವರ ಕ್ಯಾಬಿನೆಟ್ ದರ್ಜೆ ಸಚಿವರಲ್ಲಿ ಯಾರು ಆಗಮಿಸಿರಲಿಲ್ಲ. ಶಿಷ್ಟಾಚಾರ ಮುರಿಯಲಾಗಿತ್ತು. ರಾಜ್ಯಪಾಲರು ಮೋದಿಯನ್ನು ಸ್ವಾಗತಿಸಿದರೆ, ಜತೆಗೆ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರಿದ್ದರು.

ಕರ್ನಾಟಕಕ್ಕೆ ಬರುತ್ತಿರುವ ಮೋದಿಗೆ ಹಲವು ಪ್ರಶ್ನೆ ಕೇಳಿದ ಕಾಂಗ್ರೆಸ್!

English summary
Prime Minister Narendra Modi is set to visit Karnataka, Andhra Pradesh and Tamil Nadu today to inaugurate development projects and kick off the BJP's Lok Sabha campaign. This is the first time the Prime Minister will visit Andhra Pradesh after the Telugu Desam Party (TDP) broke ties with the NDA government last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more