ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿನ್ನು ಸುಮ್ಮನಿರೋಲ್ಲಾ: ನೂತನ ಸಿಎಂ ಜಗನ್ ವಿರುದ್ದ ಚಂದ್ರಬಾಬು ಆಕ್ರೋಶ

|
Google Oneindia Kannada News

Recommended Video

ಜಗನ್ ಮೋಹನ್‍ಗೆ ಎಚ್ಚರಿಕೆ ನೀಡಿದ ಚಂದ್ರಬಾಬು ನಾಯ್ಡು | Oneindia Kannada

ಅಮರಾವತಿ, ಜೂನ್ 12: ನೂತನವಾಗಿ ಅಧಿಕಾರಕ್ಕೆ ಬಂದ ವೈ ಎಸ್ ಜಗನ್ ನೇತೃತ್ವದ ಸರಕಾರಕ್ಕೆ ಆರು ತಿಂಗಳ ಸಮಯಾವಕಾಶ ನೀಡೋಣ ಎಂದು ನಾವು ಮೊದಲು ನಿರ್ಧರಿಸಿದ್ದೆವು, ಆದರೆ ಅದು ಸಾಧ್ಯವಿಲ್ಲ ಎಂದು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಬಂದ ದಿನದಿಂದ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದೆ, ಇದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಚಂದ್ರಬಾಬು, ಸಿಎಂ ಜಗನ್ಮೋಹನ್ ರೆಡ್ಡಿಗೆ ಎಚ್ಚರಿಕೆ ನೀಡಿದ್ದಾರೆ.

ಚಂದ್ರಬಾಬು ನಾಯ್ಡು ಹಣಿಯಲು ಸಿಎಂ ಜಗನ್ ಇಟ್ಟ ಮೊದಲ ಹೆಜ್ಜೆಚಂದ್ರಬಾಬು ನಾಯ್ಡು ಹಣಿಯಲು ಸಿಎಂ ಜಗನ್ ಇಟ್ಟ ಮೊದಲ ಹೆಜ್ಜೆ

ಅನಂತಪುರಂ, ಪ್ರಕಾಶಂ, ಗುಂಟೂರು ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ತೆಲುಗುದೇಶಂ ಕಾರ್ಯಕರ್ತರ ಮೇಲೆ ವೈಎಸ್ಆರ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಹಲ್ಲೆ ನಡೆಯುತ್ತಿದೆ. ಈ ಕೂಡಲೇ, ಮುಖ್ಯಮಂತ್ರಿಗಳು ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎನ್ನುವ ವಾರ್ನಿಂಗ್ ಅನ್ನು ಚಂದ್ರಬಾಬು ನೀಡಿದ್ದಾರೆ.

Our party workers being attacked, we cant keep silent: Chandrababu Naidu warning to CM Jagan

175 ಸದಸ್ಯ ಬಲದ ಅಸೆಂಬ್ಲಿಯಲ್ಲಿ ನಾವು 23 ಶಾಸಕರು ಮಾತ್ರ ಇರಬಹುದು, ಆದರೆ, 58 ಜನರಿರುವ ಕೌನ್ಸಿಲ್ ನಲ್ಲಿ ನಮ್ಮವರ ಸಂಖ್ಯೆ 35. ಹಾಗಾಗಿ, ನಮ್ಮನ್ನು ಕಡೆಗಣಿಸುವ ಕೆಲಸ ಮಾಡಬೇಡಿ ಎಂದು ಚಂದ್ರಬಾಬು, ನೂತನ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಆಂಧ್ರಪ್ರದೇಶ ಅಭಿವೃದ್ಧಿಗೆ ಕೇಂದ್ರ ಬದ್ಧ; ಜಗನ್ ಗೆ ಅಭಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶ ಅಭಿವೃದ್ಧಿಗೆ ಕೇಂದ್ರ ಬದ್ಧ; ಜಗನ್ ಗೆ ಅಭಯ ನೀಡಿದ ಪ್ರಧಾನಿ ನರೇಂದ್ರ ಮೋದಿ

ಟೋಲ್ ಫ್ರೀ ಸಹಾಯವಾಣಿಯನ್ನು ತೆರೆಯಲಾಗಿದ್ದು, ಪಕ್ಷದ ಕಾರ್ಯಕರ್ತರು ಏನೇ ತೊಂದರೆಯಾದರೂ ಇದನ್ನು ಬಳಸಿಕೊಳ್ಳಬಹುದು. ನಾವೆಲ್ಲರೂ ಕಾರ್ಯಕರ್ತರ ಪರವಾಗಿ ನಿಲ್ಲಲಿದ್ದೇವೆ ಎಂದು ಚಂದ್ರಬಾಬು ಭರವಸೆಯನ್ನು ನೀಡಿದ್ದಾರೆ.

ಮಚಲೀಪಟ್ಟಣಂ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿದ್ದ ಚಂದ್ರಬಾಬು ನಾಯ್ಡು ಅವರ ಫಲಕವನ್ನು ಕೆಲವು ದುಷ್ಕರ್ಮಿಗಳು ನಾಶ ಮಾಡಿದ ಘಟನೆ, ಸೋಮವಾರ (ಜೂ 10) ತಡರಾತ್ರಿ ನಡೆದಿದೆ.

English summary
Our party workers being attacked, threatened, we can't keep silent anyone: Telugudesham Chief N Chandrababu Naidu warning to CM Y S Jaganmohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X